ಯುಗಾದಿ ಹಬ್ಬ ಹಿಂದೂಗಳ ಹೊಸವರ್ಷ
ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಪಾಶ್ಚ್ಯಾತ್ಯ ಅನುಕರಣೆ ಮಾಡುವುದು ಹೆಚ್ಚಾಗುತ್ತಿದೆ. ಪಾಶ್ವ್ಯಾತ್ಯರು ಯಾವುದು ತಮಗೆ ಬೇಡವೆಂದು ದೂರ ಮಾಡುತ್ತಾರೋ ಅದನ್ನೇ ಭಾರತೀಯರು ಯಾಬುದೇ ಮರ್ಜಿ ಇಲ್ಲದೆ ಆಚರಿಸುತ್ತಾರೆ. ಅವುಗಳಲ್ಲಿ ಡಿ.೩೧ ಆಗುತ್ತಿದ್ದಂತೆ ಬಾರ್, ಪಬ್‌ಗಳಲ್ಲಿ ಯುವಕ-ಯುವತಿಯರು ಯಾವುದೇ ನಾಚಿಕೆ ಮಾನಮರ್ಯಾದೆ ಇಲ್ಲದೆ ಲಜ್ಜೆ ಬಿಟ್ಟು ಕುಣಿಯುತ್ತಾರೆ. ದೃಶ್ಯ ಮಾಧ್ಯಮಗಳಂತೂ ಈ ಕಾರ್ಯಕ್ರಮದ ಸ್ಪೆಷಲ್ ಎಪಿಸೋಡ್ ಮೂಲಕ ಕಾರ್ಯಕ್ರಮ ಪ್ರಸಾರಿಸಿ ವೈಭವೀಕರಿಸುತ್ತಾರೆ.
ಹಿಂದೂಗಳಿಗೆ ಡಿಸೆಂಬರ್ ೩೧ರ ರಾತ್ರಿ ಎಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಆಚರಿಸುವ ದಿನವಾಗಿದೆ. ಅಲ್ಲದೆ ಸರಕಾರ ಕೂಡಾ ಇದಕ್ಕೆ ಪ್ರತ್ಯಕ್ಷವಾಗಿ ಪ್ರೋತ್ಸಾಹಿಸಿ ಹೊಸವರ್ಷದ ವಿಚಾರದಲ್ಲಿ ನಡೆಯುವ ವೈಭವೀಕರಣವನ್ನು ಪ್ರೋತ್ಸಾಹಿಸುತ್ತದೆ.
ಹಾಗಾಗಿ ಈ ರಾತಿಯಂದು ಮದ್ಯ, ಮಾಂಸ ಸೇವಿಸಿ ಡಿಜೆ ಡ್ಯಾನ್ಸ್‌ಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲದೆ ಕೆಲವೆಡೆ ಮಾಂಸದಂಧೆಗಳೂ ಸಹ ಎಗ್ಗಿಲ್ಲದೆ ನಡೆಯುತ್ತದೆ. ಆದುದರಿಂದ ಇಲ್ಲಿ ನೈತಿಕತೆಗೆ ಮಸಿಬಳಿಯುವಂತಹ ಘಟನೆಗಳು ಸಾರಾಸಗಟಾಗಿ ನಡೆಯುತ್ತವೆ ಎಂದು ಹೇಳಬಹುದು.
ಡಿ.೩೧ ಗ್ರಹ ಮತ್ತು ಮಿಸರ್ಗಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವಿರುವುದಿಲ್ಲ. ನಿಜವಾಗಿ ನೋಡಿದರೆ ಜ.೧ ಹೊಸವರ್ಷವೇ ಅಲ್ಲ. ಜ. ೧ನ್ನು ಆಚರಿಸುವುದರಿಂದ ಹಿಂದೂಗಳು ಅನ್ಯ ಧರ್ಮಕ್ಕೆ ಮತಾಂತರಾವದಂತೆ ಆಗುತ್ತದೆ. ಡಿ. ೩೧ರಂದು ರಾತ್ರಿ ಎಲ್ಲೆಡೆಗಳಲ್ಲಿ ಫಿಲ್ಮ್ ಡ್ಯಾನ್ಸ್, ಪಟಾಕಿಗಳ ಅಬ್ಬರ, ಮದ್ಯ ಸೇವನೆ ಇವುಗಳಿಂದ ಡಿ.೧ ಭಯಾನಕವಾಗಿ ಪರಿಣಮಿಸುತ್ತದೆ. ಅಲ್ಲಲ್ಲಿ ಗಲಾಟೆ ನಡೆದು ಪೊಲೀಸರಿಗೆ ನಿಯಂತ್ರಿಸಲಾರದಷ್ಟು ದೊಡ್ಡಮಟ್ಟದಲ್ಲಿ ಗಲಭೆಗಳೂ ನಡೆಯುತ್ತದೆ.
ಹಿಂದೂಗಳು ಆಚರಿಸುವ ಪ್ರತಿಯೊಂದು ಧಾರ್ಮಿಕ ಹಬ್ಬಗಳಲ್ಲಿ ದೇವರ ಸಾನಿಧ್ಯವರುತ್ತದೆ. ಧಾರ್ಮಿಕ ಹಬ್ಬಗಳಿಂದ ಮನಸ್ಸು ಸಾತ್ವಿಕಗೊಂಡು ಆಧ್ಯಾತ್ಮಿಕ ಲಾಭವಾಗುತ್ತದೆ. ಹಿಂದೂ ಧಾರ್ಮಿಕ ಹಬ್ಬಗಳಲ್ಲಿ ತ್ಯಾಗ, ಸಂಯಮ, ದೇವರ ನಾಪಜಪ ಮುಂತಾದುವಗಳು ಇರುವುದರಿಂದ ವ್ಯಕ್ತಿಗೆ ಮತ್ತು ಪ್ರಕೃತಿಗೆ ತುಂಬಾ ಲಾಭವಾಗುತ್ತದೆ. ಸಂಸ್ಕೃತಿಯ ಆಚರಣೆ ಹಿಂದೂ ಹಬ್ಬಗಳಲ್ಲಿ ಕಂಡುಬರುತ್ತದೆ.
ಡಿ.೩೧ರ ಆಚರಣೆಯ ಹಾನಿಯನ್ನು ನಮ್ಮ ಯುವಜನಾಂಗಕ್ಕೆ ಹೇಳಿಕೊಡುವ ಪರಿಪಾಠ ಬೆಳೆಯಬೇಕಾಗಿತ್ತು. ಆದರೆ ಸರಕಾರ ಮಾತ್ರ ಜಾತ್ಯತೀತ ಎಂಬ ನಿಲುವಿಗೆ ಬಿದ್ದು ಯಾರಿಗೂ ಧಾರ್ಮಿಕ ಶಿಕ್ಷಣವನ್ನು ಕಲಿಸುತ್ತಿಲ್ಲ. ಇದರಿಂದ ಯುವಜನಾಂಗ ದಿಕ್ಕೆಟ್ಟು ಹೋಗುತ್ತಿದೆ. ಭಾವೀ ಪೀಳಿಗೆಗೆ ಪಾಶ್ಚಾತ್ಯ ಆಚರಣೆ ಅನಾಗರಿಕವೆಂದು ಅನಿಸುವುದೇ ಇಲ್ಲ. ಹಾಗಾಗಿ ಜನವರಿ ೧ರಂದು ನಡೆಯುವ ಸಂಸ್ಕೃತಿಯ ನಾಶವನ್ನು ತಡೆಗಟ್ಟಲು ಹಿಂದೂಗಳು ಪ್ರಯತ್ನಿಸಲೇಬೇಕು.
ಆದುದರಿಂದ ಹಿಂದೂಗಳು ಹೊಸವರ್ಷವನ್ನು ಯುಗಾದಿಯಂದೇ ಆಚರಿಸಬೇಕು. ಚೈತ್ರ ಶುಕ್ಲ ಪಾಡ್ಯದ ದಿನವು ಈ ಸೃಷ್ಟಿಯ ನಿರ್ಮಾಣದ ದಿನವಾಗಿದೆ. ಹಾಗಾಗಿ ಈ ದಿನ ನಿಜವಾದ ವರ್ಷಾರಂಭದ ದಿನವಾಗಿದೆ. ಆದರೆ ಪಾಶ್ಚಾತ್ಯರ ಅಂಧಾನುಕರಣೆಯಾದ ಜನವರಿ ೧ನ್ನು ಹೊಸವರ್ಷವನ್ನಾಗಿ ಆಚರಿಸುವುದುಹಿಂದೂಗಳ ಒಂದು ದಿನದ ಮತಾಂತರವೇ ಆಗಿದೆ.
ಪಾಶ್ಚಾತ್ಯರ ಭೋಗ ಮತ್ತು ಧರ್ಮ ಮತ್ತು ಸಂಸ್ಕೃತಿಯ ಮೇಲಾಗುವ ಹಾನಿಯನ್ನು ತಡೆಗಟ್ಟಲು ಜನವರಿ ೧ ರಂದು ಯಾವುದೇ ಹಿಂದೂವಿಗೆ ಹೊಸವರ್ಷದ ಶುಭಾಶಯಗಳನ್ನು ಹೇಳಬಾರದು. ಫೇಸ್‌ಬುಕ್‌ನಂತಹಾ ಜಾಲತಾಣಗಳಲ್ಲೂ ಜ.೧ರ ಶುಭಾಷಯ ಸಲ್ಲಿಸಬಾರದು. ಯುಗಾದಿಯಂದು ಆದಷ್ಟು ಹೆಚ್ಚು ಹಿಂದೂಗಳಿಗೆ ಶುಭಾಶಯ ಪತ್ರ, ದೂರವಾಣಿ, ಎಸ್‌ಎಂಎಸ್ ಮುಂತಾದವುಗಳ ಮೂಲಕ ಹೊಸವರ್ಷದ ಶುಭಾಶಯಗಳನ್ನು ನೀಡಬಹುದು.

No comments:
Post a Comment