ನಿಡ್ಡೋಡಿಯಲ್ಲಿ ಉಷ್ಣವಿದ್ಯುತ್ ಸ್ಥಾವರ ಹೆಮ್ಮಾರಿ ಸದ್ಯ ಮೌನಕ್ಕೆ ಶರಣಾಗಿದ್ದು ಈಗ ಮತ್ತೊಂದು ಹೆಮ್ಮಾರಿ ಕರಾವಳಿಯನ್ನು ನುಂಗಿ ನೀರು ಕುಡಿಯಲು ಸಜ್ಜಾಗಿ ನಿಂತಿದೆ. ಅದೇ ಪೈಪ್ಲೈನ್ ಅಳವಡಿಕೆ ಎಂಬ ಮಹಾಮಾರಿ. ಯೆಸ್ ಹಿಂದುಸ್ತಾನ್ ಪೆಟ್ರೋಲಿಯಂ ಕಾಪರ್ೋರಷನ್ ಲಿ. ಎಂಬ ಸಂಸ್ಥೆಯು ಮಂಗಳೂರು-ಹಾಸನ- ಮೈಸೂರು-ಸೋಲೂರು ಮುಖಾಂತರ ಎಲ್ಪಿ ಅನಿಲ ಸಾಗಾಣಿಕೆಗಾಗಿ ಪೈಪ್ ಲೈನ್ಅಳವಡಿಕೆಗೆ ಯೋಜನೆ ರೂಪಿಸಿ ಕಾಮಗಾರಿ ನಡೆಸಲು ಮುಂದಾಗಿದೆ. ಈಗಾಗಲೇ ಸಣ್ಣಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಮುಂದಿನ ದಿನ ಪ್ರತಿಭಟನೆ ಭುಗಿಲೇಳುವ ಸ್ಪಷ್ಟ ಸುಳಿವು ಎದ್ದು ಕಾಣುತ್ತಿದೆ.
ಏನದು ಎಲ್ಪಿ ಗ್ಯಾಸ್ ಪೈಪ್ಲೈನ್ ಅಳವಡಿಕೆ:
ಹಿಂದೂಸ್ತಾನ್ ಪೆಟ್ರೋಲಿಯಂ ಕಾಪರ್ೋರೇಷನ್ ಲಿ. ಎಂಬ ಕಂಪೆನಿಯ ಗ್ಯಾಸ್ ಸಾಗಾಟ ನಡೆಸಲು ಮಂಗಳೂರು-ಹಾಸನ-ಮೈಸೂರು -ಸೋಲಾಪುರ ಮೂಲಕ ಸ್ಥಳವನ್ನು ಗುರುತಿಸಲಾಗಿದೆ. ಅದರಲ್ಲಿ ಮಂಗಳೂರಿನ ಮಳಲಿ, ಮೊಗರು, ಬಡಗುಳಿಪಾಡಿ, ತೆಂಕುಳಿಪಾಡಿ, ಕಂದಾವರ, ಅದ್ಯಪಾಡಿ, ಮರವೂರು ಮುಖಾಂತರ ತೆರಳಲಿದೆ. ಇದಕ್ಕೆ ಸಾವಿರಾರು ಎಕರೆ ಭೂಮಿ ಕಂಪೆನಿ ಪಾಲಾಗಲಿದ್ದು ಅನಿಲವನ್ನು ಸಾಗಿಸಲು ಪೈಪ್ ಅಳವಡಿಕೆಗಾಗಿ ಸರಕಾರ ಕಾರ್ಯಯೋಜನೆಯನ್ನು ಸಿದ್ಧಗೊಳಿಸಿದೆ. ಈ ಯೋಜನೆಯಿಂದಾಗಿ ಫಲವತ್ತಾದ ಕೃಷಿಭೂಮಿ ಕಂಪೆನಿಯ ಪಾಲಾಗಲಿದ್ದು, ರೈತರು ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಈಗಾಗಲೇ ಸವರ್ೆಕಾರ್ಯ ಆರಂಭಗೊಂಡಿದ್ದು ಈ ಬಗ್ಗೆ ರೈತರಿಗೆ ಯಾವ ಮುನ್ಸೂಚನೆಯನ್ನೂ ನೀಡಿಲ್ಲ. ಒಂದು ವಾರದ ಮುಂಚೆ ಪೈಪ್ ಅಳವಡಿಸಲಾಗುವ ಜಾಗಕ್ಕೆ ಅಧಿಕಾರಿಗಳು ಬಂದು ಜಾಗದ ಪತ್ರಗಳನ್ನು ನೀಡಿ ಸಹಿ ಹಾಕಿಸಲು ಕೇಳಿದ್ದರು. ಆದರೆ ಅಪಾಯದ ಮುನ್ಸೂಚನೆ ಅರಿತ ರೈತರು ಇದನ್ನು ಹರಿದು ಬಿಸಾಡಿದ್ದಾರೆ.
ಸುಮಾರು ಒಂದುವಾರದ ಮುಂಚೆ ಕಂಪೆನಿಯ ಬುಲ್ಡೋಜರ್ ಇದ್ದಕ್ಕಿದ್ದಂತೆ ಮಳಲಿಗೆ ಆಗಮಿಸಿ ಏಕಾಏಕಿ ಮಣ್ಣು ಅಗೆಯಲು ಆರಂಭಿಸಿತ್ತು, ಈ ವೇಳೆ ರೈತರು ಆಗಮಿಸಿ ಪ್ರಶ್ನಸಿದಾಗ ಪೈಪ್ ಲೈನ್ ಅಳವಡಿಕೆಯ ವಿಚಾರವನ್ನು ಪ್ರಸ್ತಾಪಿಸಿದ್ದ. ಈ ಬಗ್ಗೆ ರೈತರಿಗೆ ಯಾವ ಸುಳಿವೂ ಇರಲಿಲ್ಲ. ಕೊನೆಗೆ ರೈತರೇ ಒಟ್ಟಾಗಿ ಬುಲ್ಡೋಜರ್ ವಾಹನದವನ್ನು ತರಾಟೆಗೆ ತೆಗೆದು ಗುರುಪುರ ಕೈಕಂಬದವರೆಗೆ ಓಡಿಸಿ ಆತನನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು. ರೈತರಿಗೆ ಭೂಮಿ ಕಂಪೆನಿ ಪಾಲಾಗುತ್ತದೆ ಎಂಬ ಮಾಹಿ ಅರಿವಾಗಿದ್ದೇ ಈ ಘಟನೆಯ ನಂತರ. ಈ ಮಾಹಿತಿ ಸಿಗುತ್ತಿದ್ದಂತೆ ರೈತರು ಒಟ್ಟಾಗಿದ್ದು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಭೂಮಿಯ ಮೌಲ್ಯದ ಶೇ.10ರಷ್ಟು ಮಾತ್ರ ಪರಿಹಾರ:
ಪೈಪ್ ಅಳವಡಿಕೆಗೆ ಉದ್ದೇಶಿಸಲಾಗಿರುವ ಭೂಮಿಯನ್ನು ಸರಕಾರ ಭೂಮಿಯ ನಿಜವಾದ ಮೌಲ್ಯದ ಕೇವಲ 10 ಶೇ. ಮೌಲ್ಯಕ್ಕೆ ಖರೀದಿಸಲು ಉದ್ದೇಶಿಸಿದೆ. ಇದರಿಂದ ನೂರಾರು ಮಂದಿ ರೈತರು ಭಾರೀ ನಷ್ಟವನ್ನು ಅನುಭವಿಸಲಿದ್ದಾರೆ. ಸರಕಾರ ಕೃಷಿಭೂಮಿಗೆ ಬೆಲೆ ಎಕರೆ ಒಂದಕ್ಕೆ 2.5ಲಕ್ಷ ನಿಗದಿ ಪಡಿಸಿದೆ. ಆದರೆ ಇಲ್ಲಿನ ಕೃಷಿಭೂಮಿಯ ಮೌಲ್ಯ ಸೆಂಟ್ಸ್ ಒಂದಕ್ಕೆ ಮಾರುಕಟ್ಟೆ ಬೆಲೆಯೇ ಲಕ್ಷದ ಗಡಿಯನ್ನು ದಾಟುತ್ತದೆ. ಸರಕಾರದ ನಿಗದಿಪಡಿಸಿದ ಎಕರೆಗೆ ಎರಡೂವರೆ ಲಕ್ಷ ಪರಹಾರವನ್ನು ಹತ್ತು ಶೇಖಡಾಕ್ಕೆ ಭಾಗಿಸಿದರೆ ರೈತರಿಗೆ ಸಿಗುವ ಹಣ ಎಕರೆಯೊಂದಕ್ಕೆ ಇಪ್ಪತೈದು ಸಾವಿರ ಮಾತ್ರ. ಅದರ ಪ್ರಕಾರ ಸೆಂಟ್ಸ್ಗೆ ಎರಡುವರೆ ಸಾವಿರ ರೂ ಮಾತ್ರ ಸಿಗುತ್ತದೆ. ಇದು ರೈತರಿಗೆ ಸರಕಾರ ಮತ್ತು ಕಂಪೆನಿ ಸೇರಿ ಮೋಸ ಮಾಡುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಅಲ್ಲದೆ ಅಲ್ಲಿ ಬೆಳೆಯಲಾಗಿದ್ದ ಅಡಿಕೆ, ತೆಂಗಿಗೆ ಸಾವಿರದ ಒಳಗಡೆ ಬೆಲೆಯನ್ನು ಕಟ್ಟಲಾಗುತ್ತದೆ. ಇದರಿಂದ ರೈತರು ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸಬೇಕಾಗುತ್ತದಲ್ಲದೆ, ಕೃಷಿ ಚಟುವಟಿಕೆ ಸಂಪೂರ್ಣ ಸ್ತಗಿತಗೊಂಡು ಲಕ್ಷಾಂತರ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಸುಮಾರು ಹನ್ನೆರಡು ವರ್ಷಗಳ ಮುಂಚೆ ಇದೇ ಹಾದಿಯಲ್ಲಿ ಡೀಸೆಲ್ ಪೈಪ್ಲೈನ್ ಹಾದುಹೋಗಿತ್ತು, ಆಗ ಸಿಗಬೇಕಾಗಿದ್ದ ಪರಿಹಾರದ ಮೊತ್ತ ಇನ್ನೂ ರೈತರ ಕೈಗೆ ಸೇರಲಿಲ್ಲ. ಕಂಗು ಹಾಗೂ ತೆಂಗಿಗೂ ಕೂಡಾ ಕೇವಲ ಮುನ್ನೂರು ರೂಗಳನ್ನು ನಿಗದಿಪಡಿಸಲಾಗಿತ್ತು. ಅಲ್ಲದೆ ಈ ಜಾಗದಲ್ಲಿ ಈಗ ಕೃಷಿ ಚಟುವಟಿಕೆಗಳನ್ನು ನಡೆಸಲಾಗುವುದಿಲ್ಲ.
ಡೀಸೆಲ್ಪೈಪ್ಲೈನ್ ಅಳವಡಿಕೆ ಮಾಡಿದರೂ ಕಂಪೆನಿ ಯಾವ ರೀತಿಯಲ್ಲಿ ಸುರಕ್ಷಿತ ನಿಯಮಗಳನ್ನು ಪಾಲಿಸುತ್ತದೆಯೋ ಎಂದು ಹೇಳಲಾಗದು. ಯಾಕೆಂದರೆ ಇಲ್ಲಿ ಹಾದುಹೋಗಿರುವ ಪೈಪ್ಲೈನ್ನಿಂದ ನಿರಂತರವಾಗಿ ಡೀಸೆಲ್ ಕಳ್ಳತನ ನಡೆಯುತ್ತಲೇ ಇದೆ. ಈಗಾಗಲೇ ಉಪ್ಪಿನಂಗಡಿಯ ಪೆನರ್ೆ ಗ್ಯಾಸ್ ಟ್ಯಾಂಕರ್ ದುರಂತ ಕಣ್ಣ ಮುಂದಿದೆ. ಕೇವಲ ಒಂದು ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದ್ದಕ್ಕೆಯೇ ಹಲವಾರು ಮಂದಿಯ ಪ್ರಾಣ ಹರಣವಾಗಿದ್ದು ಹಲವಾರು ಮನೆಗಳು ಧ್ವಂಸಗೊಂಡಿತ್ತು. ಗ್ಯಾಸ್ಪೈಪ್ಲೈನ್ ಕೂಡಾ ಯಾವ ಸುರಕ್ಷಿತ ಮಾನದಂಡಗಳನ್ನು ಅಳವಡಿಸುತ್ತದೆ ಎಂದು ಹೇಳಲಾಗದು. ಒಂದು ವೇಳೆ ಪೈಪ್ಲೈನ್ ಸ್ಫೋಟಿಸಿದ್ದೇ ಆದರೆ ಅದರ ಪರಿಣಾಮವನ್ನು ಊಹಿಸುವುದೂ ಕಷ್ಟ. ಅಲ್ಲೆ ಡೀಸೆಲ್ಪೈಪ್ಲೈನ್ನಲ್ಲಿ ಡೀಸೆಲ್ ಕಳ್ಳತನ ನಡೆದಂತೆ ಕಳ್ಳರು ಗ್ಯಾಸ್ಪೈಪ್ಲೈನ್ಗೆ ಕನ್ನತೊರೆದು ಕದಿಯಲು ಆರಂಭಿಸಿ ಅದರಿಂದ ಅನಾಹುತ ಉಂಟಾದರೆ ಅದರ ಭೀಕರ ಪರಿಣಾಮವನ್ನು ದ.ಕ. ಜಿಲ್ಲೆ ಅನುಭವಿಸಬೇಕಾಗುತ್ತದೆ.
ಅಪಾರ ಕೃಷಿಭೂಮಿಯನ್ನು ಸ್ವಾಹಾ ಮಾಡಿಕೊಂಡು ರೈತರನ್ನು ಬೀದಿಗೆ ತಳ್ಳುವಂಥಾ ಇಂಥಾ ಯೋಜನೆಯನ್ನು ಸರಕಾರ ಖಂಡಿತಾ ಕೈಬಿಡಬೇಕು ಎಂದು ಪೈಪ್ಲೈನ್ ವಿರೋಧಿ ಹೋರಾಟ ಸಮಿತಿಯ ಒತ್ತಾಯವಾಗಿದೆ. ಈಗಾಗಲೇ ಕೆಪಿಟಿಸಿಎಲ್ನಿಂದ ಹೈಟೆನ್ಷನ್ ವಯರ್ ಹಾದು ಹೋಗಿದೆ. ಕೆಐಡಿಬಿಯವರು ಗಂಜಿಮಠದಲ್ಲಿ ಇಂಡಸ್ಟ್ರಿಯಲ್ ಪ್ರಮೋಶನ್ ಪಾಕರ್್ ನಿಮರ್ಾಣಕ್ಕೆ 500 ಎಕರೆ ಕೃಷಿಭೂಮಿಯನ್ನು ಕಸಿದುಕೊಂಡಿದೆ. ಇದೀಗ ಗ್ಯಾಸ್ಪೈಪ್ಲೈನ್ ಅಳವಡಿಕೆ ಕೃಷಿಕರನ್ನು ದುಸ್ವಪ್ನದಂತೆ ಕಾಡುತ್ತದೆ.
No comments:
Post a Comment