Thursday, January 16, 2014

ಶೀಲ ಕಳೆದು ಬಾಳು ಪಡೆದ ಸನ್ನಿ


ಸನ್ನಿಲಿಯೋನ್, ಹೆಸರು ಕೇಳಿದರೆ ಸಾಕು ಹುಡುಗರ ಎದೆ ಢವಢವಗುಟ್ಟಲು ಶುರುವಾಗುತ್ತದೆ. ಏನೋ ಒಂದು ಸೂಜಿಗಲ್ಲಿನಂತಹಾ ಸೆಳೆತ ಈಕೆಯ ಹೆಸರಲ್ಲಿದೆ. ನೀಲಿಚಿತ್ರತಾರೆಯಾಗಿದ್ದ ಸನ್ನಿ ಕೊನೆಘಳಿಗೆಯಲ್ಲಿ ಬಾಲಿವುಡ್ಗೆ ಎಂಟ್ರಿ ಪಡೆದು ಜಸ್ಮ್-2ನಲ್ಲಿ ಮಿಂಚಿದ ಸನ್ನಿ ಬಗ್ಗೆ ಭಾರತೀಯರು ಅದೇನೋ ರೀತಿಯ ಅಭಿಮಾನ ಇಟ್ಟುಕೊಂಡಿದ್ದಾರೆ.
ಅಲ್ಲದೆ ಸನ್ನಿ ಬಗ್ಗೆ ಎದಿರಾಡುವವರೂ ಸಹ ಆಕೆಯ ನೀಲಿ ದೃಶ್ಯಗಳನ್ನು ಕದ್ದುಮುಚ್ಚಿ ನೋಡಿದವರೇ ಆಗಿರುತ್ತಾರೆ. ದೇಹದಲ್ಲಿ ಇನ್ನೂ ಯೌವನವಿದ್ದು ಅದನ್ನು ಹಾಗೆಯೇ ಮೈಂಟೇನ್ ಮಾಡಿಕೊಂಡು ,ಇಂದಿಗೂ ಹುಡುಗರ ಎದೆಯನ್ನು ಬಿಸಿಮಾಡ್ತಾಳೆಂದರೆ ಸನ್ನಿಯನ್ನು ಒಂದು ಲೆಕ್ಕದಲ್ಲಿ ಭಲೇ ಎನ್ನಲೇ ಬೇಕು.
ಸದ್ಯ ಭಾರತದಲ್ಲಿರುವ ಸನ್ನಿ ಈಗ ಇನ್ನೊಂದು ಚಿತ್ರದಲ್ಲಿ ನಟಿಸಲು ತೊಡಗಿದ್ದು ಗೋವಾದಲ್ಲಿ ಚಿತ್ರೀಕರಣ ನಡೆಯುತ್ತದೆ. ಆ ಚಿತ್ರದ ಹೆಸರು ಜಾಕ್ಪಾಟ್. ಇದರಲ್ಲಿ ಆಕೆಯೊಂದಿಗೆ ನಟಿಸುವವರು ಸಚಿನ್ ಜೋಶಿ. ಇದರಲ್ಲಿ ಸನ್ನಿ ಬೋಲ್ಡ್ ಆಂಡ್ ಟಾಪ್ಲೆಸ್ ಆಗಿ ಕಾಣಿಸಿಕೊಳ್ಳಲಿದ್ದಾಳೆ ಎಂಬ ಸುದ್ದಿ ಇದ್ದರೂ ಸಚಿನ್ ಜೋಶಿ ಪ್ರಕಾರ ಇದೊಂದು ಕಲಾತ್ಮಕ ಚಿತ್ರವಾಗಿದ್ದು ಅಸಭ್ಯತೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಈ ಚಿತ್ರ ಮನೆಮಂದಿ ಕೂತು ನೋಡುವ ಚಿತ್ರವೋ ಅಲ್ಲವೋ ಎಂದು ಇನ್ನು ಗೊತ್ತಾಗಬೇಕಾಗಿದೆ.
ಮೈಯನ್ನು ತೋರಿಸುವುದು ಮನೋರೋಗ ಎನ್ನುತ್ತದೆ ಮನಶಾಸ್ತ್ರ. ಎಕ್ಸಿಬಿಶಾನಿಸಂ ಡಿಸಾರ್ಡರ್ ಎಂದು ಆ ಕಾಯಿಲೆಯ ಹೆಸರು. ಒಬ್ಬರು ತನ್ನಲ್ಲಿರುವ ಕೀಳರಿಮೆಯನ್ನು ಮರೆಮಾಚಲು ರಕ್ಷಣಾತ್ಮಕ ಮನೋಂತ್ರ(ಢಿಫೆನ್ಸ್ ಮೆಕ್ಯಾನಿಸಮ್)ಕ್ಕೆ ಮೊರಹೋಗುತ್ತಾರೆ. ಇದೇ ರೀತಿಯ ಕೀಳರಿಮೆಯಿಂದ ಬಳಲುತ್ತಾ ಕೊನೆಗೆ ಅದನ್ನೇ ಬಂಡವಾಳವಾಗಿಸಿಕೊಂಡು ಬದುಕು ಕಾಣಿಕೊಂಡ ಸನ್ನಿಕಥೆ ಅಚ್ಚರಿಯನ್ನು ತರದೆ ಇರದು.
ಕೀಳರಿಮೆಯಿಂದ ಬಳಲುತ್ತಿರುವವರು ಅದರ ಸಂಕಟದಿಂದ ಹೊರಬರಲು ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗುತ್ತಾರೆ. ಈ ಕೀಳರಿಮೆಯಿಂದ ಹೊರಬರಲು ತನ್ನ ಬಾಲ್ಯದ ಗೆಳೆಯನೊಬ್ಬನ ಜೊತೆ ಸೆಕ್ಸ್ನಲ್ಲಿ ತೊಡಗಿದ ಸನ್ನಿ ಕೊನೆಗೆ ಇದೇ ವೃತ್ತಿಯಲ್ಲಿ ವಿರಾಜಮಾನವಾಗುತ್ತೇನೆ ಎಂದು ಬಹುಶಃ ಆಕೆಗೂ ಗೊತ್ತಿರಲಿಕ್ಕಿಲ್ಲ. ಸನ್ನಿ ಈ ವೃತ್ತಿಯನ್ನು ಪ್ರೀತಿಸಿದಳು, ಗೌರವಿಸಿದಳು ಕೊನೆಗೆ ಅದೇ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡಳು. ಉದ್ಯಮಗಳನ್ನು ಕಟ್ಟಿದಳು, ಕೊನೆಗೆ ನಟನೆಯಲ್ಲೂ ತೊಡಗಿದಳು.
ದೇಹಮಾರಿ ಎಲ್ಲೋ ಕಳೆದುಹೋಗಬೇಕಾಗಿದ್ದ ಸನ್ನಿ ಇಂದಿಗೂ ಜಗತ್ತೇ ತನ್ನ ಮೇಲೆ ದೃಷ್ಟಿ ಹರಿಸುವಂತೆ ಉಳಿದುಕೊಂಡಿದ್ದಾಳೆಂದರೆ ಅದು ಆಕೆಯ ದಿಟ್ಟತನಕ್ಕೆ ಸಾಕ್ಷಿಯಾಗಿದೆ ಎನ್ನಬಹುದು.
ಸನ್ನಿ ಹುಟ್ಟಿದ್ದು ಕೆನಡಾದ ಸನರ್ಿಯಾ ಎಂಬಲ್ಲಿನ ಒಂಟಾರಿಯೋದಲ್ಲಿ. ಅವಳ ತಂದೆ ಹುಟ್ಟಿದ್ದು ಟಿಬೆಟಲ್ಲಿಯಾದರೂ ಬೆಳೆದಿದ್ದು ಮಾತ್ರ ದಿಲ್ಲಿಯಲ್ಲಿ. ಆಕೆಯ ತಾಯಿ ಹಿಮಾಚಲ ಪ್ರದೇಶದ ಸಿಮರ್ೌರ್ನಲ್ಲಿ. ಹೀಗೆ ಟಿಬೆಟ್, ಕೆನಾಡ, ಹಾಗೂ ಭಾರತ ಹೀಗೆ ಮೂರು ದೇಶಗಳ ಸಂಬಂಧವನ್ನು ಹೊಂದಿರುವ ಸನ್ನಿ ಸಿಖ್ ವಂಶಕ್ಕೆ ಸೇರಿದವಳು.
ಸಣ್ಣವಳಾಗಿದ್ದಾಗಲೇ ಹುಡುಗರೊಂದಿಗೆ ಒಲವು ಹೆಚ್ಚಿಕೊಂಡಿದ್ದ ಸನ್ನಿ ಹುಡುಗರೊಂದಿಗೆ ಹಾಕಿ ಆಡುತ್ತಿದ್ದಳು. ಅದರೊಂದಿಗೆ ಸ್ಕೇಟಿಂಗ್ ಅವಳ ಆಸಕ್ತಿದಾಯಕ ಕ್ರೀಡೆಯಾಗುತ್ತು.
ಹನ್ನೊಂದು ವರ್ಷಕ್ಕೆ ಕಿಸ್, 16 ವರ್ಷಕ್ಕೆ ಸೆಕ್ಸ್:
ಸನ್ನಿ ಕ್ಯಾತೋಲಿಕ್ ಶಾಲೆಯೊಂದಕ್ಕೆ ಹೋಗುತ್ತಿದ್ದಳು. ಆಕೆ ಹೋಗುತ್ತಿದ್ದ ಶಾಲೆ ಒಂದು ಅಸುರಕ್ಷಿತ ಸ್ಥಳವಾಗಿತ್ತು. ಹನ್ನೊಂದು ವರ್ಷವಾಗುತ್ತುದ್ದಂತೆ ಹುಡುಗನೊಬ್ಬ ಅವಳನ್ನು ಚುಂಬಿಸಿದ. ಆಕೆಗೆ 16 ವರ್ಷವಾಗುತ್ತಿದ್ದಂತೆ ಬಾಸ್ಕೆಟ್ಬಾಲ್ ಪ್ಲೇಯರ್ ಒಬ್ಬನೊಂದಿಗೆ ಸೇರಿಕೊಂಡು ಕನ್ಯತ್ವವನ್ನು ಕಳೆದುಕೊಂಡಳು. 18 ವರ್ಷ ಆದಂತೆ ತನ್ನ ಗೆಳತಿಯರೊಂದಿಗೆ ಸೇರಿ ಸಲಿಂಗರತಿಯಲ್ಲೂ ತೊಡಗಿದಳು. ಆಕೆಗೆ 13 ವರ್ಷವಾದಾಗ ಆಕೆಯ ತಂದೆ ತನ್ನ ಕುಟುಂಬವನ್ನು ಕ್ಯಾಲಿಫೋನರ್ಿಯಾಕ್ಕೆ ಸ್ಥಳಾಂತರಿಸಿದರು. ಆಕೆಯ ತಂದೆಗೆ ಕುಟುಂಬ ಒಂದೇ ಕಡೆ ನೆಲೆಸಬೇಕೆಂಬ ಆಸೆ ಇತ್ತು, ಆದರೆ ವಿಧಿಯಂತೆ ಬೇರೆ ಬೇರೆ ಸ್ಥಳಕ್ಕೆ ಸ್ಥಳಾಂತರವಾಗಬೇಕಾಗುತ್ತಿತ್ತು.
ಒಂದು ಕಡೆ ಸನ್ನಿ ಹೇಳುತ್ತಾಳೆ, ನನಗೆ ಚಿಕ್ಕಂದಿನಿಂದಲೂ ಮೂಡಿಯಾಗಿರುತ್ತಿದ್ದೆ. ಕೀಳರಿಮೆಯಿಂದ ಹೊರಬರಲು ಹುಡುಗರೊಂದಿಗೆ ಹೆಚ್ಚಿನ ಸ್ನೇಹವನ್ನು ಸಂಪಾದಿಸುತ್ತಿದ್ದೆ. ಹದಿನಾರು ವರ್ಷವಾದಾಗ ಕನ್ಯತ್ವ ಕಳೆದುಕೊಂಡಿದ್ದು ಒಂದು ಆಕ್ಸಿಡೆಂಟ್. ನಾನು ಇದರಲ್ಲಿ ಕುತೂಹಲದಲ್ಲಿ ಭಾಗವಹಿಸಿದ್ದಲ್ಲ. ಮಾನಸಿಕ ಒತ್ತಡವನ್ನು ಕಳೆಯಲೆಂದು ಇದರಲ್ಲಿ ತೊಡಗುವ ಅನಿವಾರ್ಯತೆ ಬಂದಿತು. ಹೀಗೆ ಅಪ್ಸೆಟ್ ಆಗುತ್ತಿರುವಾಗಲೆಲ್ಲಾ ಸೆಕ್ಸ್ ನನಗೆ ಉತ್ತೇಜನ ನೀಡುತ್ತಿತ್ತು. ಇದರಲ್ಲೇ ವೃತ್ತಿಯನ್ನು ಕಾಣಬೇಕೆಂದು ಬಯಸಿದ್ದು ಆಮೇಲೆ. ಇದೇ ರೀತಿಯ ಮಾನಸಿಕ ದುಗುಡ ಪೋನರ್್ಸ್ಟಾರ್ ಆಗಲು ಸಹಾಯ ನೀಡಿತು ಎಂದು ಹೇಳಿದ್ದಾಳೆ. ಈಕೆಯ ಈ ಮಾತು ತುಂಬಾ ಆಲೋಚಿಸುವಂತೆ ಮಾಡುತ್ತದೆ.
ಯಾಕೆಂದರೆ ಅನೇಕ ಹೆಣ್ಣುಮಕ್ಕಳು ಮನಸ್ಸು ಪಕ್ವವಾಗುವ ಮುನ್ನವೇ ಶೀಲವನ್ನು ಕಳೆದುಕೊಂಡು ಪಡಬಾರದ ಕಷ್ಟ ಪಡುತ್ತಾರೆ.  ಹದಿವಯಸ್ಸಿನ ಹೆಣ್ಣುಮಕ್ಕಳ ಮಾನಸಿಕ ತುಮುಲಾಟವನ್ನು ಬಳಸಿಕೊಂಡು ಆಕೆಯನ್ನು ಭೋಗಿಸುತ್ತಾರೆ. ಇದರ ನಿಜವಾದ ತೊಂದರೆಯ ಬಗ್ಗೆ ಅರಿವಾಗುವುದು ಬುದ್ಧಿ ಪಕ್ವಗೊಂಡಾಗಲೇ. ಇದನ್ನು ಅರ್ಥ ಮಾಡಿಕೊಂಡರೆ ಸನ್ನಿಯ ಈ ಹೇಳಿಕೆಯಲ್ಲಿ ಪಾಠವಿದೆ ಅಂದುಕೊಳ್ಳಬಹುದು. ಆಕೆಯನ್ನು ಪೋನರ್್ಸ್ಟಾರ್ ಎಂದು ಒಂದು ದೃಷ್ಟಿಕೋನದಿಂದ ನೋಡುವ ಬದಲು ಆಕೆಯ ನಿಜವಾದ ಭಾವನೆಯನ್ನು ಅರ್ಥಮಾಡಿಕೊಂಡರೆ ಆಕೆಯ ವೃತ್ತಿ ನಮ್ಮ ಮನಸ್ಸಿಗೆ ನಾಟುವುದು ನಿಜ.
ಸನ್ನಿ ವಿದೇಶದಲ್ಲಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಳಾಗಿ ಖಾಸಗಿ ಬದುಕನ್ನು ಕಟ್ಟಿಕೊಂಡ ಶ್ರೀಮಂತ ಮಹಿಳೆ. ಆದರೆ ಇದೇ ರೀತಿಯ ಪರಿಸ್ಥಿತಿ ಭಾರತದಲ್ಲಾಗಿದ್ದರೆ ಏನಾಗಿರುತ್ತಿತ್ತು? ತನ್ನ ಸರ್ವಸ್ವವನ್ನೇ ಕಳೆದುಕೊಂಡು ಎಷ್ಟು ಮಹಿಳೆಯರು ಯಾವ ಯಾವ ಕೊಂಪೆಯಲ್ಲಿದ್ದಾರೋ ಯಾರಿಗೆ ಗೊತ್ತು?
ಪೋನರ್್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿಕೊಳ್ಳುವ ಮುಂಚೆ ಆಕೆ ಕೆಲಸ ಮಾಡಿಕೊಂಡಿದ್ದು ಜರ್ಮನ್ ಬೇಕರಿಯಲ್ಲ. ನಂತರ ಸ್ವಲ್ಪ ಕಾಲ ನಸರ್್ ಆಗಿ ಕೊನೆಗೆ ತೆರಿಗೆ ಕಂಪೆನಿಯಲ್ಲಿ ದುಡಿದಿದ್ದಳು. ಅದ್ಭುತ ಸೌಂದರ್ಯದ ಗಣಿಯಾಗಿದ್ದ ಸನ್ನಿ ಹಳದಿ ಟಾಪ್ ಮತ್ತು ಜೀನ್ಸ್ ಧರಿಸಿ ಮೇಜಿನ ಹಿಂದೆ ಕೂತಿದ್ದಳು. ಅಷ್ಟರಲ್ಲಿ ಕೆಮಾರಾ ಕ್ಲಿಕ್ ಆಯಿತು. ಈ ಒಂದು ಕ್ಲಿಕ್ ಆಕೆಯ ಜೀವನಕ್ಕೇ ಕ್ಲಿಕ್ ನೀಡಿತು ಎನ್ನಬಹುದು. ಹೀಗೆ 2002ರಲ್ಲಿ ಅಡಲ್ಟ್ ಎಂಟಟರ್ೈನ್ಮೆಂಟ್ ಎಕ್ಸ್ಪೋ ಪ್ರಚಾರಸಭೆಯಲ್ಲಿ ಕಾಣಿಸಿಕೊಂಡಳು.
ನಸರ್್ ಕಲಿಯುತ್ತಿದ್ದ ವೇಳೆ ಈಕೆಯ ಸೌಂದರ್ಯವನ್ನು ಗಮನಿಸಿದ್ದ ಈಕೆಯಕ್ಲಾಸ್ಮೇಟ್ ಒಬ್ಬ ಜಾನ್ ಸ್ಟೇವನ್ಸ್ಗೆ ಪರಿಚಯಿಸಿದ. ಜಾನ್ನ ಗೆಳೆಯನಾಗಿದ್ದ ಜೇ ಅಲೆನ್ ಪೆಂಟ್ಹೌಸ್ ಮ್ಯಾಗಜಿನ್ನ ಫೊಟೋಗ್ರಾಫರ್ ಆಗಿದ್ದ.
ಇದು ಬಿಸಿ ಬಿಸಿ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ ಮ್ಯಾಗಜಿನ್ ಆಗಿತ್ತು. ಹೀಗೆ ಪೆಂಟ್ಹೌಸ್ ನಿಯತಕಾಲಿಕೆಗೆ ಪೋಸ್ ನೀಡಿದ್ದ ಸನ್ನಿಗೆ ಕೊನೆಗೆ ಅನೇಕ ನಿಯತಕಾಲಿಕೆಗಳು ಆಕೆಗೆ ಸಾಕಷ್ಟು ದುಡ್ಡು ನೀಡಿ ಆಹ್ವಾನಿಸಿದವು. 2001ರಲ್ಲಿ ಪೆಂಟ್ಹೌಸ್ ಪೆಟ್ ಎಂಬ ಹೆಸರಿಗೆ ಪಾತ್ರಳಾದಳು. ಆಮೇಲೆ ಹಸ್ಟ್ಲರ್, ಎವಿಎನ್ ಆನ್ಲೈನ್, ಕ್ಲಬ್ ಇಂಟನರ್ಾಷನಲ್, ಹೀಗೆ ಹಲವಾರು ಪತ್ರಿಕೆಗಳಿಗೆ ಪೋಸ್ ನೀಡದ್ದರಿಂದ ಸನ್ನಿ ಜನಪ್ರಿಯಳಾದಳು.
ಆ ಸಂದರ್ಭದಲ್ಲಿ ವಿವಿಡ್ ಎಂಟಟೈನರ್್ಮೆಂಟ್ ಎಂಬ ಅಶ್ಲೀಲ ಚಿತ್ರ ಪ್ರದರ್ಶನ ಮಾಡುವ ಕಂಪೆನಿಗೆ ಮೂರು ವರ್ಷಗಳ ಕಾಲದ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಳು. ಅದರಲ್ಲಿ ಆಕೆ ಸಲಿಂಗ ಕಾಮಿನಿಯಾಗಿ ಭಾಗವಹಿಸುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಅನೇಕ ಚಿತ್ರಗಳು ಹೊರಬಂದವು.
ಆಮೇಲೆ ಸನ್ನಿ ಇದೇ ವೃತ್ತಿಯಲ್ಲಿ ಸ್ವಂತ ಉದ್ಯಮವೊಂದಕ್ಕೆ ಕೈ ಹಾಕಿದಳು. ತನ್ನ ಚಿತ್ರವನ್ನು ತಾನೇ ನಿಮರ್ಿಸತೊಡಗಿದಳು. ವಿವಿಡ್ ಎಂಟಟೈನ್ಮೆಂಟ್ನ ವಿತರಕಳಾಗಿದ್ದ ನಂತರ ಆಕೆಯ ಸ್ವತಂತ್ರವಾಗಿ ನಿರ್ವಹಿಸಿದ ಚಿತ್ರವೆಂದರೆ ಡಾಕರ್್ಸೈಡ್ ಆಫ್ ದ ಸನ್. ಇದು ಧೂಳೆಬ್ಬಿಸಿತು. ನಂತರ ನೀಲಿಚಿತ್ರಗಳಲ್ಲಿ ಕಾಣಿಸಿಕೊಂಡ ಸನ್ನಿ ಬ್ಲಾಗ್ ಒಂದನ್ನು ಸ್ಥಾಪಿಸಿ ಅದರಲ್ಲೇ ತನ್ನ ಪೋನರ್್ವೀಡಿಯೋವನ್ನು ಅಪ್ಲೋಡ್ ಮಾಡುತ್ತಿದ್ದಳು. ಆಕೆಯ ಫೊಟೋ ಕೂಡಾ ಅವಳದೇ ಬ್ಲಾಗ್ನಲ್ಲಿ ಪ್ರಸಾರವಾಗುತ್ತಿತ್ತು.
ಬಿಗ್ಬಾಸ್ ಪ್ರವೇಶ:
ಭಾರತದ ಕಲರ್ಸ್ ಚಾನೆಲ್ನಲ್ಲಿ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ 49 ದಿನಗಳ ಕಾಲ ಇದ್ದಳು. ಈ ಸಂದರ್ಭದಲ್ಲಿ ಸಾಕಷ್ಟು ವಿವಾದಗಳು ಎದ್ದಿದ್ದವು. ಪೋನರ್್ಸ್ಟಾರ್ ಆದವಳು ರಿಯಾಲಿಟಿಶೋ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ಹಲವಾರು ಮಂದಿ ತಗಾದೆ ಎತ್ತಿದ್ದರೂ ರಿಯಾಲಿಟಿ ಶೋ ಹಿಟ್ ಆಯಿತು. ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ದೂರು ಕೂಡಾ ಸಲ್ಲಿಕೆಯಾಗಿತ್ತು. ಈ ಸಂದರ್ಭದಲ್ಲಿ ಪೂಜಾ ಬೇಡಿ ಸಾಥ್ ನೀಡಿದ್ದರು. ಆಗ ಟ್ವಿಟರ್ನಲ್ಲಿ ಎರಡೇ ದಿನದಲ್ಲಿ 8000 ಮಂದಿಯನ್ನು ಅಭಿಮಾನಿಗಳಾಗಿ ಗಳಿಸಿಕೊಂಡಳು. ಇದರಿಂದಾಗಿ ಸನ್ನಿಗೆ ವ್ಯಾಪಕ ಪ್ರಚಾರ ಸಿಕ್ಕಿತು.
ಬಾಲಿವುಡ್ ಎಂಟ್ರಿ:
ಬಾಳಿವುಡ್ಗೆ ಎಂಟ್ರಿ ಪಡೆದ ಸನ್ನಿ ಕಳೆದ ವರ್ಷ 2012ರಲ್ಲಿ ಜಿಸ್ಮ್ 2 ಚಿತ್ರದಲ್ಲಿ ನಟಿಸಿ ಧೂಳೆಬ್ಬಿಸಿದ್ದಳು.
ಕೆನಾಡದಿಂದ ಅಮೇರಿಕಾದ ನಾಗರಿಕತ್ವ ಪಡೆದ ಸನ್ನಿ ಈಗ ಭಾರತದಲ್ಲಿ ಬಾಲಿವುಡ್ನಲ್ಲಿ ಬಿಸಿಯಾಗಿದ್ದಾಳೆ. ಆಕೆ ಭಾರತದ ಪೌರತ್ವ ಪಡಯುತ್ತಾಳೆಂಬ ಸುದ್ದಿಯೂ ಹಬ್ಬಿದೆ. ಆಕೆಯ ಗಂಡ ಡೇನಿಯಲ್ ವೆಬರ್ನೊಂದಿಗೆ ಸುಖವಾಗಿರುವ ಸನ್ನಿ ರಾಗಿಣಿ ಎಂಎಂಎಸ್ 2 ಮತ್ತು ಜಾಕ್ಪಾಟ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾಳೆ.
ಬೆಸ್ಟ್ ಗಲರ್್ ಇನ್ ಗ್ರೂಪ್ ಸೆಕ್ಸ್ ಅವಾಡರ್್, ಪೋನರ್್ಸ್ಟಾರ್ ಸೈಟ್ ಆಫ್ ದ ಇಯರ್ ಮುಂತಾದ ವಿಚಿತ್ರ ಪ್ರಶಸ್ತಿಗಳು ಆಕೆಗೆ ಸಿಕ್ಕಿದೆ.
ಭಾರತದಲ್ಲೇ ಇರಲು ಬಯಸುವ ಸನ್ನಿಗೆ ಈಗೀಗ ಭಾರತೀಯರ ಮನಸ್ಥಿಯ ಬಗ್ಗೆ ವಿಚಿತ್ರ ಎನಿಸುತ್ತದಂತೆ. ಈಕೆ ಚಿತ್ರವನ್ನು ನೋಡದವರೂ ಸಹ ಈಕೆಯ ಬಗ್ಗೆ ಒಂಥರಾ ಭಾವನೆಯನ್ನು ಬೆಳೆಸಿಕೊಂಡು ಮುಖ ತಿರುಗಿಸುತ್ತಾರಂತೆ. ಕೆಲವರು ಆಸಂದರ್ಭದಲ್ಲಿ ಅದರ ಬಗ್ಗೆ ಪ್ರಶ್ನೆ ಕೇಳುವುದೂ ಇದೆ. ಆದರೆ ಇದನ್ನೆಲ್ಲಾ ಮನಸ್ಸಿನಲ್ಲೇ ಇಟ್ಟುಕೊಂಡು ಬೇಸರ ವ್ಯಕ್ತಪಡಿಸದೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಒಟ್ಟಾರೆ ಭಾರತೀಯರ ಮನಸ್ಥಿಯ ಬಗ್ಗೆ ಆಕೆಗೆ ಅರ್ಥವೇ ಆಗುವುದಿಲ್ಲ. ಇದರಿಂದ ಆಕೆಗೆ ಬೇಸರವಾಗುತ್ತದಂತೆ.
ಈಕೆ ಜೊತೆ ನಟಿಸಬೇಕೆಂದರೆ ವೈದ್ಯಕೀಯ ಪ್ರಮಾಣ ಪತ್ರ ಬೇಕು!
ಸನ್ನಿ ಜೊತೆ ನಟಿಸಬೇಕೆಂದರೆ ಆತ ಆರೋಗ್ಯವಂತನಾಗಿದ್ದು ಯಾವುದೇ ಕಾಯಿಲೆಗಳಿರಬಾರದು. ವೈದ್ಯರು ಪ್ರಮಾಣ ಪತ್ರ ನೀಡಿದ ಯುವಕರಷ್ಟೇ ಈಕೆಯ ಜೊತೆ ನಟಿಸಬಹುದು. ಯಾವುದಾದರೂ ಮಾರಕ ಲೈಂಗಿಕ ಕಾಯಿಲೆ ಬರಬಹುದೆಂಬ ಭಯದಿಂದ ಈ ರೀತಿ ಮಾಡಿಕೊಂಡಿದ್ದಾಳೆ. ಜಿಸ್ಮ್ 2 ಚಿತ್ರದಲ್ಲಿ ನಟಿಸಬೇಕೆಂದಾಗ ಅದರ ನಾಯಕ ನಟ ರಂದೀಪ್ ಹೂಡ ಬಳಿಯಿಂದಲೂ ವೈದ್ಯಕೀಯ ಪ್ರಮಾಣ ಪತ್ರ ಕೇಳಿದ್ದಳು. ಆದರೆ ಇದರಲ್ಲಿ ಅಂಥಾ ದೃಶ್ಯಗಳಿರದ ಕಾರಣ ಚಿತ್ರ ನಿದರ್ೇಶಕಿ ಪೂಜಾ ಭಟ್ ಇದನ್ನು ತಿರಸ್ಕರಿಸಿದ್ದರು.
 

ಇಂಡಿಯನ್ ಸೆಕ್ಸ್ ರಾಕೆಟ್ ಪ್ರಿಯಾ ಅಂಜಲಿ ರೈ


ಭಾರತದಂತಹಾ ಸಾಂಪ್ರದಾಯಿಕ ದೇಶದಲ್ಲಿ ಹುಟ್ಟಿ ಅಲ್ಲಿಂದ ನೀಲಿಚಿತ್ರಗಳ ಮೂಲಕ ಪಡ್ಡೆಗಳ ಬದುಕನ್ನೇ ಹೈರಾಣಾಗಿಸಿದ ಇಂಡಿಯನ್ ಸೆಕ್ಸ್ ರಾಕೆಟ್ ಪ್ರಿಯಾ ಅಂಜಲಿ ರೈ ಎಂಬ ನೀಲಿ ಹುಡುಗಿಯ ಅಚ್ಚರಿಯ ಕತೆ ಇದು. ಆಕೆಯ ಬದುಕು ಆರಂಭವಾಗಿದ್ದು ಅಮೇರಿಕಾ ಸಂಯುಕ್ತ ಸಂಸ್ಥಾನದ ಮಿನ್ನೆಸೋಟಾದಲ್ಲಿ. ನವದೆಹಲಿಯ ಹಳ್ಳಿಯೊಂದರಲ್ಲಿ ಹುಟ್ಟಿದ ಈಕೆಯನ್ನು ಅಮೇರಿಕಾದ ದಂಪತಿ ದತ್ತು ತೆಗೆದುಕೊಂಡರು.
ಅಂಜಲಿ ಭಾರತಲ್ಲೇ ಹುಟ್ಟಿರುತ್ತಿದ್ದರೆ ಏನಾಗಿರುತ್ತಿದ್ದಳೋ ಏನೋ? ಆದರೆ ಅಮೇರಿಕಾದಂತಹಾ ಮುಕ್ತ ಸೆಕ್ಸ್ ವಾತಾವರಣದಲ್ಲಿ ಸಹಜವಾಗಿಯೇ ಸೌಂದರ್ಯದ ಖಣಿಯಾಗಿದ್ದ ಅಂಜಲಿ ನೀಲಿಚಿತ್ರ ತಾರೆಯಾಗಿದ್ದು ಮಾತ್ರ ವಿಶೇಷ. ತನ್ನಹನ್ನೆರಡನೇ ವಯಸ್ಸಲ್ಲೇ ಪೋನರ್ೋಗ್ರಪಿಗೆ ಪಾದಾರ್ಪಣೆ ಮಾಡಿದ ಈಕೆ ನಿಜವಾಗಿಯೂ ಆ ವೃತ್ತಿಯನ್ನು ಇಷ್ಟಪಟ್ಟು ಮಾಡಿದ್ದಳೋ ಎಂಬುದು ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಆಗ ಆಕೆಗೆ ಹನ್ನೆರಡು ವರ್ಷವಷ್ಟೆ. ತನ್ನ ವಾರಗೆಯ ಹುಡುಗನೊಬ್ಬ ಇಷ್ಟವಾದ. ಸಹಜವಾಗಿಯೇ ಲೈಂಗಿಕ ಭಾವನೆ ಮೂಡವ ವಯಸ್ಸದು. ಆದರೆ ಅದರ ಬಗ್ಗೆ ಸ್ಪಷ್ಟ ಜ್ಞಾನವಿಲ್ಲದಿದ್ದರೂ ಕುತೂಹಲಕ್ಕೆಂದು ಇವರಿಬ್ಬರೂ ಸೇರಿಕೊಂಡಿದ್ದರು. ಆಮೇಲೆ ಆ ಹುಡುಗ ಈಕೆಯನ್ನು ಒತ್ತಾಯಿಸತೊಡಗಿದಾ ಸಹಜವಾಗಿಯೇ ವ್ಯಗ್ರಳಾದಳು. ಆದರೆ ಆ ಹುಡುಗ ಈ ವಿಷಯವನ್ನು ಊರಿನಲ್ಲಿ ಕೆಟ್ಟ ಹೆಸರು ಪಡೆದಿದ್ದ ವ್ಯಕ್ತಿಯೋರ್ವರಲ್ಲಿ ಹೇಳಿದ. ಕೊನೆಗೆ ಈ ಹುಡುಗ ಮತ್ತು ಆತ ಇವಳನ್ನು ಬ್ಲ್ಯಾಕ್ಮೇಲ್ ಮಾಡಿಕೊಂಡು ಆಕೆಯನ್ನು ಬಲಾತ್ಕರಿಸಲು ನೋಡುತ್ತಿದ್ದರು. ಈ ವಿಚಾರವನ್ನು ಆಕೆ ತನ್ನ ಸ್ವಂತ ವೆಬ್ಸೈಟಲ್ಲಿ ಹೇಳಿಕೊಂಡಿದ್ದಾಳೆ. ಆದರೆ ಅವರ ಹೆಸರನ್ನು ಮಾತ್ರ ಬಹುರಂಗಪಡಿಸಿಲ್ಲ.
ನಾನು ನೀಲಿಚಿತ್ರಗಳಲ್ಲಿ ಭಾಗವಹಿಸಲು ಯಾರೂ ನನ್ನ ಒತ್ತಾಯ ಮಾಡಲಿಲ್ಲ. ನನಗೆ ನನ್ನ ವೃತ್ತಿ ಮುಖ್ಯ. ನಾನೂ ಈ ವಿಚಾರದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ಸಲ್ಲಿಸಿರಬಹುದೆಂದು ನನ್ನ ಮನಸ್ಸಿಗೆ ತೃಪ್ತಿ ಇದೆ. ಇಡೀ ಜಗತ್ತಲ್ಲಿ ನನ್ನನ್ನು ಕಂಡಿ ಕ್ಯಾಕರಿಸಿ ಉಗಿದರೂ ನನಗೇನೂ ಚಿಂತೆ ಇಲ್ಲ ಬಿಡಿ ಎಂದು ಹೇಳಿದ್ದಾಳೆ.
ಇಷ್ಟೆಲ್ಲಾ ರಾದ್ಧಾಂತ ಆಗುವ ಹೊತ್ತಿಗೆ ಆಕೆಯನ್ನು ಸಿನಿಮಾ ಕೈ ಬೀಸಿ ಕರೆದಿತ್ತು. ಆಕೆಗೆ ನೀಲಿಚಿತ್ರಗಳಲ್ಲಿ ಭಾಗವಹಿಸಬೇಕೆಂಬ ಮನಸ್ಸಿದ್ದರೂ ಅಪ್ರಾಪ್ತರನ್ನು ಲೈಂಗಿಕ ಶೋಷಣೆಗೆ ಬಳಕೆ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧವಾಗಿರುವುದರಿಂದ ಆಕೆಗೆ ಸಿನಿಮಾ ಇಂಡಸ್ಟ್ರಿ ಅವಕಾಶ ನೀಡಲಿಲ್ಲ. ಆಮೇಲೆ ಈಕೆ ಕೆನಡಾಕ್ಕೆ ವಲಸೆ ಹೋದ ನಂತರ ನೀಲಿ ಚಿತ್ರಗಳಲ್ಲಿ ಭಾಗವಹಿಸಿ ಪಡ್ಡೆಗಳ ಮನವನ್ನು ಕದ್ದಿದ್ದಳು.
ನೀಲಿಚಿತ್ರತಾರೆ ಸನ್ನಿ ಲಿಯೋನ್ ಬಿಗ್ಬಾಸ್ನಲ್ಲಿ ಮಿಂಚಿದ್ದ ನಂತರ 2013ರ ನಿಗ್ಬಾಸ್ಗೆ ಈಕೆಯನ್ನು ಕರೆತರಲು ವೇದಿಕೆ ಸಜ್ಜುಗೊಂಡಿತ್ತು. ಆದರೆ ಕೊನೆಘಳಿಗೆಯಲ್ಲಿ ಏಮೋ ಎಡವಟ್ಟಾಗಿ ಆಕೆಗೆ ಬರಲಿಕ್ಕಾಗಲಿಲ್ಲ.
ಕಾಂಡಮ್ನ ಪ್ರಚಾರಕಳಾದಳು:
ದಶಕದ ಹಿಂದೆ ಏಡ್ಸ್ ಎಂಬ ಮಹಾಮಾರಿ ದಾಂಗುಡಿ ಇಟ್ಟು ಹಲವು ಮಂದಿಯನ್ನು ನುಂಗಿ ನೀರು ಕುಡಿದ ಸಮಯವದು. ಏಡ್ಸ್ ಬಗ್ಗೆ ಸ್ಪಷ್ಟವಾದ ಮಾಹಿತಿ ಯಾರಿಗೂ ಇರಲಿಲ್ಲ. ಅದು ಹೇಗೆ ಬರುತ್ತದೆ ಎಂಬ ಬಗ್ಗೆ ಹಲವು ರೀತಿಯಲ್ಲಿ ಗೊಂದಲವಿತ್ತು. ಈ ಸಂದರ್ಭದಲ್ಲಿ ಪ್ರಿಯಾ ರೈ ಕಾಂಡಮ್ ಅದನ್ನು ಹೇಗೆ ಉಪಯೋಗಿಸುವುದು, ಅದರ ಉಪಯೋಗಗಳು ಮುಂತಾದುವುಗಳ ಬಗ್ಗೆ ಪ್ರಾತ್ಯಕ್ಷತೆ ನೀಡಿದ್ದಳು. ಇದಕ್ಕಾಗಿ ಈಕೆಯನ್ನು ಕೆನಡಾ ಸರಕಾರ ಅಭಿನಂದಿಸಿತ್ತು. ಅಲ್ಲದೆ ಜನರನ್ನು ಕಾಂಡಮ್ ಖರೀದಿಸುವಂತೆ ಪ್ರೇರೇಪಣೆ ನೀಡಿದ್ದಳು.
 

ಕರಾವಳಿಯನ್ನು ನುಂಗಲು ಸಜ್ಜಾಗಿ ನಿಂತಿರುವ ಪೈಪ್ಲೈನ್ ಮಾರಿ


ನಿಡ್ಡೋಡಿಯಲ್ಲಿ ಉಷ್ಣವಿದ್ಯುತ್ ಸ್ಥಾವರ ಹೆಮ್ಮಾರಿ ಸದ್ಯ ಮೌನಕ್ಕೆ ಶರಣಾಗಿದ್ದು ಈಗ ಮತ್ತೊಂದು ಹೆಮ್ಮಾರಿ ಕರಾವಳಿಯನ್ನು ನುಂಗಿ ನೀರು ಕುಡಿಯಲು ಸಜ್ಜಾಗಿ ನಿಂತಿದೆ. ಅದೇ ಪೈಪ್ಲೈನ್ ಅಳವಡಿಕೆ ಎಂಬ ಮಹಾಮಾರಿ. ಯೆಸ್ ಹಿಂದುಸ್ತಾನ್ ಪೆಟ್ರೋಲಿಯಂ ಕಾಪರ್ೋರಷನ್ ಲಿ. ಎಂಬ ಸಂಸ್ಥೆಯು ಮಂಗಳೂರು-ಹಾಸನ- ಮೈಸೂರು-ಸೋಲೂರು ಮುಖಾಂತರ ಎಲ್ಪಿ ಅನಿಲ ಸಾಗಾಣಿಕೆಗಾಗಿ ಪೈಪ್ ಲೈನ್ಅಳವಡಿಕೆಗೆ ಯೋಜನೆ ರೂಪಿಸಿ ಕಾಮಗಾರಿ ನಡೆಸಲು ಮುಂದಾಗಿದೆ. ಈಗಾಗಲೇ ಸಣ್ಣಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಮುಂದಿನ ದಿನ ಪ್ರತಿಭಟನೆ ಭುಗಿಲೇಳುವ ಸ್ಪಷ್ಟ ಸುಳಿವು ಎದ್ದು ಕಾಣುತ್ತಿದೆ.
ಏನದು ಎಲ್ಪಿ ಗ್ಯಾಸ್ ಪೈಪ್ಲೈನ್ ಅಳವಡಿಕೆ:
ಹಿಂದೂಸ್ತಾನ್ ಪೆಟ್ರೋಲಿಯಂ ಕಾಪರ್ೋರೇಷನ್ ಲಿ. ಎಂಬ ಕಂಪೆನಿಯ ಗ್ಯಾಸ್ ಸಾಗಾಟ ನಡೆಸಲು ಮಂಗಳೂರು-ಹಾಸನ-ಮೈಸೂರು -ಸೋಲಾಪುರ ಮೂಲಕ ಸ್ಥಳವನ್ನು ಗುರುತಿಸಲಾಗಿದೆ. ಅದರಲ್ಲಿ  ಮಂಗಳೂರಿನ ಮಳಲಿ, ಮೊಗರು, ಬಡಗುಳಿಪಾಡಿ, ತೆಂಕುಳಿಪಾಡಿ, ಕಂದಾವರ, ಅದ್ಯಪಾಡಿ, ಮರವೂರು ಮುಖಾಂತರ ತೆರಳಲಿದೆ. ಇದಕ್ಕೆ ಸಾವಿರಾರು ಎಕರೆ ಭೂಮಿ ಕಂಪೆನಿ ಪಾಲಾಗಲಿದ್ದು  ಅನಿಲವನ್ನು ಸಾಗಿಸಲು ಪೈಪ್ ಅಳವಡಿಕೆಗಾಗಿ ಸರಕಾರ ಕಾರ್ಯಯೋಜನೆಯನ್ನು ಸಿದ್ಧಗೊಳಿಸಿದೆ. ಈ ಯೋಜನೆಯಿಂದಾಗಿ ಫಲವತ್ತಾದ ಕೃಷಿಭೂಮಿ ಕಂಪೆನಿಯ ಪಾಲಾಗಲಿದ್ದು, ರೈತರು ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಈಗಾಗಲೇ ಸವರ್ೆಕಾರ್ಯ ಆರಂಭಗೊಂಡಿದ್ದು ಈ ಬಗ್ಗೆ ರೈತರಿಗೆ ಯಾವ ಮುನ್ಸೂಚನೆಯನ್ನೂ ನೀಡಿಲ್ಲ. ಒಂದು ವಾರದ ಮುಂಚೆ ಪೈಪ್ ಅಳವಡಿಸಲಾಗುವ ಜಾಗಕ್ಕೆ ಅಧಿಕಾರಿಗಳು ಬಂದು ಜಾಗದ ಪತ್ರಗಳನ್ನು ನೀಡಿ ಸಹಿ ಹಾಕಿಸಲು ಕೇಳಿದ್ದರು. ಆದರೆ ಅಪಾಯದ ಮುನ್ಸೂಚನೆ ಅರಿತ ರೈತರು ಇದನ್ನು ಹರಿದು ಬಿಸಾಡಿದ್ದಾರೆ.
ಸುಮಾರು ಒಂದುವಾರದ ಮುಂಚೆ ಕಂಪೆನಿಯ ಬುಲ್ಡೋಜರ್ ಇದ್ದಕ್ಕಿದ್ದಂತೆ ಮಳಲಿಗೆ ಆಗಮಿಸಿ ಏಕಾಏಕಿ ಮಣ್ಣು ಅಗೆಯಲು ಆರಂಭಿಸಿತ್ತು, ಈ ವೇಳೆ ರೈತರು ಆಗಮಿಸಿ ಪ್ರಶ್ನಸಿದಾಗ ಪೈಪ್ ಲೈನ್ ಅಳವಡಿಕೆಯ ವಿಚಾರವನ್ನು ಪ್ರಸ್ತಾಪಿಸಿದ್ದ. ಈ ಬಗ್ಗೆ ರೈತರಿಗೆ ಯಾವ ಸುಳಿವೂ ಇರಲಿಲ್ಲ. ಕೊನೆಗೆ ರೈತರೇ ಒಟ್ಟಾಗಿ ಬುಲ್ಡೋಜರ್ ವಾಹನದವನ್ನು ತರಾಟೆಗೆ ತೆಗೆದು ಗುರುಪುರ ಕೈಕಂಬದವರೆಗೆ ಓಡಿಸಿ ಆತನನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು. ರೈತರಿಗೆ ಭೂಮಿ ಕಂಪೆನಿ ಪಾಲಾಗುತ್ತದೆ ಎಂಬ ಮಾಹಿ ಅರಿವಾಗಿದ್ದೇ ಈ ಘಟನೆಯ ನಂತರ. ಈ ಮಾಹಿತಿ ಸಿಗುತ್ತಿದ್ದಂತೆ ರೈತರು ಒಟ್ಟಾಗಿದ್ದು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಭೂಮಿಯ ಮೌಲ್ಯದ ಶೇ.10ರಷ್ಟು ಮಾತ್ರ ಪರಿಹಾರ:
ಪೈಪ್ ಅಳವಡಿಕೆಗೆ ಉದ್ದೇಶಿಸಲಾಗಿರುವ ಭೂಮಿಯನ್ನು ಸರಕಾರ ಭೂಮಿಯ ನಿಜವಾದ ಮೌಲ್ಯದ ಕೇವಲ 10 ಶೇ. ಮೌಲ್ಯಕ್ಕೆ ಖರೀದಿಸಲು ಉದ್ದೇಶಿಸಿದೆ. ಇದರಿಂದ ನೂರಾರು ಮಂದಿ ರೈತರು ಭಾರೀ ನಷ್ಟವನ್ನು ಅನುಭವಿಸಲಿದ್ದಾರೆ. ಸರಕಾರ ಕೃಷಿಭೂಮಿಗೆ ಬೆಲೆ ಎಕರೆ ಒಂದಕ್ಕೆ 2.5ಲಕ್ಷ ನಿಗದಿ ಪಡಿಸಿದೆ. ಆದರೆ ಇಲ್ಲಿನ ಕೃಷಿಭೂಮಿಯ ಮೌಲ್ಯ ಸೆಂಟ್ಸ್ ಒಂದಕ್ಕೆ ಮಾರುಕಟ್ಟೆ ಬೆಲೆಯೇ ಲಕ್ಷದ ಗಡಿಯನ್ನು ದಾಟುತ್ತದೆ. ಸರಕಾರದ ನಿಗದಿಪಡಿಸಿದ ಎಕರೆಗೆ ಎರಡೂವರೆ ಲಕ್ಷ ಪರಹಾರವನ್ನು ಹತ್ತು ಶೇಖಡಾಕ್ಕೆ ಭಾಗಿಸಿದರೆ ರೈತರಿಗೆ ಸಿಗುವ ಹಣ ಎಕರೆಯೊಂದಕ್ಕೆ ಇಪ್ಪತೈದು ಸಾವಿರ ಮಾತ್ರ. ಅದರ ಪ್ರಕಾರ ಸೆಂಟ್ಸ್ಗೆ ಎರಡುವರೆ ಸಾವಿರ ರೂ ಮಾತ್ರ ಸಿಗುತ್ತದೆ. ಇದು ರೈತರಿಗೆ ಸರಕಾರ ಮತ್ತು ಕಂಪೆನಿ ಸೇರಿ ಮೋಸ ಮಾಡುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಅಲ್ಲದೆ ಅಲ್ಲಿ ಬೆಳೆಯಲಾಗಿದ್ದ ಅಡಿಕೆ, ತೆಂಗಿಗೆ ಸಾವಿರದ ಒಳಗಡೆ ಬೆಲೆಯನ್ನು ಕಟ್ಟಲಾಗುತ್ತದೆ. ಇದರಿಂದ ರೈತರು ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸಬೇಕಾಗುತ್ತದಲ್ಲದೆ, ಕೃಷಿ ಚಟುವಟಿಕೆ ಸಂಪೂರ್ಣ ಸ್ತಗಿತಗೊಂಡು ಲಕ್ಷಾಂತರ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಸುಮಾರು ಹನ್ನೆರಡು ವರ್ಷಗಳ ಮುಂಚೆ ಇದೇ ಹಾದಿಯಲ್ಲಿ ಡೀಸೆಲ್ ಪೈಪ್ಲೈನ್ ಹಾದುಹೋಗಿತ್ತು, ಆಗ ಸಿಗಬೇಕಾಗಿದ್ದ ಪರಿಹಾರದ ಮೊತ್ತ ಇನ್ನೂ ರೈತರ ಕೈಗೆ ಸೇರಲಿಲ್ಲ. ಕಂಗು ಹಾಗೂ ತೆಂಗಿಗೂ ಕೂಡಾ ಕೇವಲ ಮುನ್ನೂರು ರೂಗಳನ್ನು ನಿಗದಿಪಡಿಸಲಾಗಿತ್ತು. ಅಲ್ಲದೆ ಈ ಜಾಗದಲ್ಲಿ ಈಗ ಕೃಷಿ ಚಟುವಟಿಕೆಗಳನ್ನು ನಡೆಸಲಾಗುವುದಿಲ್ಲ.
ಡೀಸೆಲ್ಪೈಪ್ಲೈನ್ ಅಳವಡಿಕೆ ಮಾಡಿದರೂ ಕಂಪೆನಿ ಯಾವ ರೀತಿಯಲ್ಲಿ ಸುರಕ್ಷಿತ ನಿಯಮಗಳನ್ನು ಪಾಲಿಸುತ್ತದೆಯೋ ಎಂದು ಹೇಳಲಾಗದು. ಯಾಕೆಂದರೆ ಇಲ್ಲಿ ಹಾದುಹೋಗಿರುವ ಪೈಪ್ಲೈನ್ನಿಂದ ನಿರಂತರವಾಗಿ ಡೀಸೆಲ್ ಕಳ್ಳತನ ನಡೆಯುತ್ತಲೇ ಇದೆ. ಈಗಾಗಲೇ ಉಪ್ಪಿನಂಗಡಿಯ ಪೆನರ್ೆ ಗ್ಯಾಸ್ ಟ್ಯಾಂಕರ್ ದುರಂತ ಕಣ್ಣ ಮುಂದಿದೆ. ಕೇವಲ ಒಂದು ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದ್ದಕ್ಕೆಯೇ ಹಲವಾರು ಮಂದಿಯ ಪ್ರಾಣ ಹರಣವಾಗಿದ್ದು ಹಲವಾರು ಮನೆಗಳು ಧ್ವಂಸಗೊಂಡಿತ್ತು. ಗ್ಯಾಸ್ಪೈಪ್ಲೈನ್ ಕೂಡಾ ಯಾವ ಸುರಕ್ಷಿತ ಮಾನದಂಡಗಳನ್ನು ಅಳವಡಿಸುತ್ತದೆ ಎಂದು ಹೇಳಲಾಗದು. ಒಂದು ವೇಳೆ ಪೈಪ್ಲೈನ್ ಸ್ಫೋಟಿಸಿದ್ದೇ ಆದರೆ ಅದರ ಪರಿಣಾಮವನ್ನು ಊಹಿಸುವುದೂ ಕಷ್ಟ. ಅಲ್ಲೆ ಡೀಸೆಲ್ಪೈಪ್ಲೈನ್ನಲ್ಲಿ ಡೀಸೆಲ್ ಕಳ್ಳತನ ನಡೆದಂತೆ ಕಳ್ಳರು ಗ್ಯಾಸ್ಪೈಪ್ಲೈನ್ಗೆ ಕನ್ನತೊರೆದು ಕದಿಯಲು ಆರಂಭಿಸಿ ಅದರಿಂದ ಅನಾಹುತ ಉಂಟಾದರೆ ಅದರ ಭೀಕರ ಪರಿಣಾಮವನ್ನು ದ.ಕ. ಜಿಲ್ಲೆ ಅನುಭವಿಸಬೇಕಾಗುತ್ತದೆ.
ಅಪಾರ ಕೃಷಿಭೂಮಿಯನ್ನು ಸ್ವಾಹಾ ಮಾಡಿಕೊಂಡು ರೈತರನ್ನು ಬೀದಿಗೆ ತಳ್ಳುವಂಥಾ ಇಂಥಾ ಯೋಜನೆಯನ್ನು ಸರಕಾರ ಖಂಡಿತಾ ಕೈಬಿಡಬೇಕು ಎಂದು ಪೈಪ್ಲೈನ್ ವಿರೋಧಿ ಹೋರಾಟ ಸಮಿತಿಯ ಒತ್ತಾಯವಾಗಿದೆ. ಈಗಾಗಲೇ ಕೆಪಿಟಿಸಿಎಲ್ನಿಂದ ಹೈಟೆನ್ಷನ್ ವಯರ್ ಹಾದು ಹೋಗಿದೆ. ಕೆಐಡಿಬಿಯವರು ಗಂಜಿಮಠದಲ್ಲಿ ಇಂಡಸ್ಟ್ರಿಯಲ್ ಪ್ರಮೋಶನ್ ಪಾಕರ್್ ನಿಮರ್ಾಣಕ್ಕೆ 500 ಎಕರೆ ಕೃಷಿಭೂಮಿಯನ್ನು ಕಸಿದುಕೊಂಡಿದೆ. ಇದೀಗ ಗ್ಯಾಸ್ಪೈಪ್ಲೈನ್ ಅಳವಡಿಕೆ ಕೃಷಿಕರನ್ನು ದುಸ್ವಪ್ನದಂತೆ ಕಾಡುತ್ತದೆ.

Friday, January 10, 2014

ಕೊಲೆಯಾಗಿ ಹೋದ ಸೌಜನ್ಯಾಳ ಕಣ್ಣೀರ ಕಥೆ...ಚಿಕ್ಕಂದಿನಿಂದಲೂ ಆಧ್ಯಾತ್ಮದ ಬಗಗೆ ವಿಶೇಷ ಆಸಕ್ತಿ ವಹಿಸುತ್ತಿದ್ದ ಧರ್ಮಸ್ಥಳದ ಹುಡುಗಿ ಕಾಮ ಪಿಪಾಸುಗಳ ಕೈಗೆ ಸಿಕ್ಕು ಬಲಿಯಾಗಿ ಒಂದು ವರ್ಷವಾಗ್ತಾ ಬಂದಿದೆ. ಆದರೂ ನಿಜವಾದ ಆರೋಪಗಳ ಪತ್ತೆಯಾಗಲಿಲ್ಲ ಎನ್ನುವುದು ಇನ್ನೊಂದು ನೋವಿನ ಸಂಗತಿ. ಆಕೆಯ ಬಾಳಿನ ಸಂಕ್ಷಿಪ್ತ ಕಥೆಯ ಇಣುಕುನೋಟ ಇಲ್ಲಿದೆ.
ಧರ್ಮಸ್ಥಳದಲ್ಲಿ ಮಂಜುನಾಥನ ಸನ್ನಿಧಿ ಇರುವುದರಿಂದಲೇ ವಿಶ್ವವಿಖ್ಯಾತ ಗಳಿಸಿದೆ. ಜೊತೆಗೆ ಸೌಮ್ಯವಾಗಿ ಹರಿಯುವ ನೇತ್ರಾವತಿ ನದಿ. ಗುಡ್ಡ ಬೆಟ್ಟ, ಮರಗಿಡಗಳಿಂದ ತುಂಬಿದ ಈ ಊರನ್ನು ನೋಡುವುದೇ ಒಂದು ಚಂದ. ಅಲ್ಲದೆ ಧರ್ಮಸ್ಥಳ ಮಂಜುನಾಥನ ಶಕ್ತಿ ಕೇಂದ್ರ. ಅಣ್ಣಪ್ಪ ಮತ್ತು ಪರಿವಾರ ದೈವಗಳ ಕಾರಣಿಕದ ಸ್ಥಳ. ಆದುದರಿಂದಲೇ ಇಲ್ಲಿನ ಜನರಲ್ಲಿ ಸಹಜವಾದ ಸಂಸ್ಕಾರವೊಂದು ನೆಲೆಗೂಡಿದೆ.
ಅದು ಧರ್ಮಸ್ಥಳದ ಪಾಂಗಳ ಎಂಬ ಹಳ್ಳಿ. ಅಲ್ಲಿ ಇದೆ ಬಾಬುಗೌಡರ ತುಂಬು ಕುಟುಂಬ. ಇದೇ ಕುಟುಂಬದಲ್ಲಿ ಜನಿಸಿದಳು ಸೌಜನ್ಯ. ನಾಲ್ಕು ಹೆಣ್ಣು ಮಕ್ಕಳು ಒಬ್ಬ ಗಂಡು ಮಗಳಲ್ಲಿ ಎರಡನೆಯವಳೇ ಸೌಜನ್ಯ. ಅಕ್ಟೋಬರ್ ೧೮, ೧೯೯೫ರಲ್ಲಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಗೆ ಹುಟ್ಟಿದ ಸೌಜನ್ಯಳನ್ನು ಕಂಡು ಮನೆಮಂದಿಯೆಲ್ಲಾ ಸಾಕ್ಷಾತ್ ಲಕ್ಷ್ಮೀದೇವಿಯೇ ಆಮಿಸಿದ್ದಾಳೆ ಎಂದು ಭಾವಿಸಿದ್ದರು.
ಸೌಮ್ಯವಾಗಿದ್ದ ಈ ಮುದ್ದು ಮುಖದ ಕಂದ ಸೌಜನ್ಯಾ ಬಾಲ್ಯದಿಂದಲೇ ಸಹಜವಾಗಿ ದೈವಭಕ್ತೆಯಾಗಿದ್ದಳು. ಆಧ್ಯಾತ್ಮದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಳು. ಜೊತೆಗೆ ಮಂಜುನಾಥನ ಭಕ್ತೆಯಾಗಿದ್ದಳು.
ಆಕೆಯ ಬಾಲ್ಯದ ಆಟವೆಂದರೆ ಅದು ದೇವರ ಆಟ. ತನ್ನ ಅಕ್ಕ ತಂಗಿ, ತಮ್ಮಂದಿರ ಜೊತೆ ಸೇರಿ ಕಲ್ಲುಗಳನ್ನು ಜೋಡಿಸಿ, ಅದಕ್ಕೆ ಹೂ, ಅರಶಿನ ದಾರವನ್ನು ಕಟ್ಟಿಕೊಂಡು ಇದು ಸಾಕ್ಷಾತ್ ಮಂಜುನಾಥನೇ ಎಂದು ನಂಬಿಕೊಂಡು ಆರಾಧಿಸುತ್ತಿದ್ದಳು. ಈಕೆಯ ಆಟವನ್ನು ಕಂಡು ಮನೆಮಂದಿಗೆಲ್ಲಾ ಒಂತರಾ ಪುಳಕ, ಖಷಿ. ಅಲ್ಲದೆ ಚಿಕ್ಕಂದಿನಿಂದಲೇ ಅದ್ಭುತ ಗ್ರಹಣ ಶಕ್ತಿ, ತಿಳುವಳಿಕೆ ಹೊಂದಿದ್ದ ಈಕೆಯ ದೈತ್ಯ ಪ್ರತಿಭೆಯನ್ನು ಕಂಡು ಎಲ್ಲರಿಗೂ ಅಚ್ಚರಿಯೋ ಅಚ್ಚರಿ. ಮುಂದೊಂದು ದಿನ ಈಕೆ ಏನಾದರೊಂದು ಸಾಧನೆ ಮಾಡಿಯೇ ಮಾಡುತ್ತಾಳೆ ಎಂದು ತಾಯಿ ಕುಸುಮಾವತಿ ನಂಬಿಕೊಂಡಿದ್ದರು.
ಆಗ ಸೌಜನ್ಯಳಿಗೆ ಮೂರು ವರ್ಷ. ಆಗ ಅವಳನ್ನು ಅಂಗನವಾಡಿಗೆ ಸೇರಿಸಲಾಯ್ತು. ಆಕೆಯ ಬುದ್ಧಿ ಪಕ್ವವಾಗುತ್ತಿದ್ದಂತೆ ದೇವರ ಮೇಲೆ ಇನ್ನಷ್ಟು ಆಸಕ್ತಿವಹಿಸಿಕೊಂಡಳು. ಮನೆಗೆ ಬಂದು ಅಜ್ಜ ಅಜ್ಜಿಯವರಲ್ಲಿ ಮಂಜುನಾಥ ಸ್ವಾಮಿಯ ಕಥೆ ಹೇಳುವಂತೆ ಪೀಡಿಸುತ್ತಿದ್ದಳು. ಈ ಕಥೆಯನ್ನು ಅಂಗನವಾಡಿಯ ಗೆಳತಿಯರೊಂದಿಗೆ ಹೇಳುವುದು ಈಕೆಗೆ ಬಲು ಇಷ್ಟ. ಪ್ರಾಣಿ ಪಕ್ಷಿಗಳಲ್ಲೂ ಆಸಕ್ತಿ ವಹಿಸಿಕೊಂಡ ಸೌಜನ್ಯಾ ದಾರಿಯಲ್ಲಿ ತಿರುಗಾಡುತ್ತಿದ್ದ ಮುದ್ದು ಪ್ರಾಣಿಗಳನ್ನು ಅಪ್ಪಿ ಮುದ್ದಾಡಿ ಏನಾದರೊಂದು ತಿಂಡಿ ಹಾಕಿ ಕಳಿಸುತ್ತಿದ್ದಳು.
ಒಂದು ದಿನ ಸೌಜನ್ಯಳಿಗೆ ಏನೆನಿಸಿತೋ ಏನೋ? ಮಣ್ಣಿನ ಗೊಂಬೆಯೊಂದನ್ನು ತಯಾರಿಸಿ ಅದಕ್ಕೆ ಬಟ್ಟೆ ಬರೆಗಳನ್ನು ತೊಡಿಸಿ ಶೃಂಗರಿಸತೊಡಗಿದಳು. ಆಕೆಯ ಪ್ರಕಾರ ಅದು ಮಂಜುನಾಥ ಸ್ವಾಮಿಯಂತೆ. ಅದನ್ನೇ ಪೂಜಿಸಿ ಕೃತಾರ್ಥಳಾಗುತಿದ್ದಳು.
ನಂತರ ಸೌಜನ್ಯಳಿಗೆ ಆರು ತುಂಬಿತು. ಅಮ್ಮ ಅವಳನ್ನು ಧರ್ಮಸ್ಥಳದ ಪ್ರಾಥಮಿಕ ಶಾಲೆಗೆ ಕಳುಹಿಸಿದರು. ಆಕೆ ಎಂದಿಗೂ ಶಾಲೆಗೆ ಹೋಗಲು ತಕರಾರು ಎತ್ತಿದವಳಲ್ಲ. ವಯಸ್ಸಿಗೆ ಮೀರಿದ ಬುದ್ಧಿ ಶಕ್ತಿಯಿಂದಲೇ ಪ್ರಾಥಮಿಕ ಶಿಕ್ಷಣದಲ್ಲೂ ಸೈ ಎನಿಸಿದಳು. ಶಾಲೆಕಳ್ಳಿಯಾಗದೆ, ತನ್ನ ಪುಸ್ತಕವನ್ನು ತಾನೇ ಹೊಂದಿಸಿ, ಅತ್ತ ಅಮ್ಮನಿಗೂ ಸಹಾಯ ಮಾಡಿಕೊಂಡು ಹೋಗುತ್ತಿದ್ದಳು. ಸಹಪಾಠಿಗಳಿಗೂ ಆಕೆಯ ಮೇಲೆ ಶಿಕ್ಷಕರಿಗೂ ಅಚ್ಚುಮೆಚ್ಚು.
ನಂತರ ಸೌಜನ್ಯಾ ಎಸ್‌ಡಿಎಂನಲ್ಲಿ ಹೈಸ್ಕೂಲು ಶಿಕ್ಷಣಕ್ಕೆ ಅಡಿ ಇಟ್ಟಳು. ಸೌಜನ್ಯಾ ಎಂದೂ ಜಾಲಿ ಮಾಡಿದ ಹುಡುಗಿಯಲ್ಲ. ದೇವರ ಧ್ಯಾನ, ಭಜನೆ ಮಾಡಿಕೊಂಡು ಮಂಜುನಾಥನಲ್ಲಿ ಐಕ್ಯಳಾಗುತ್ತಿದ್ದಳು. ತಾನಾಯಿತು ತನ್ನ ಶಿಕ್ಷಣವಾಯ್ತು ಅಷ್ಟೆ.
ಆಕೆಯ ತಾತ ಬಾಬುಗೌಡ ಆಕೆಯ ಗುಣದ ಬಗ್ಗೆ ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರಲ್ಲಿ ಒಂದು ಜೀಪಿತ್ತು. ಸೌಜನ್ಯ ಹೋಗುವ ದಾರಿಯಲ್ಲೇ ಇವರದ್ದೂ ಪಯಣ. ಒಂದು ದಿನ ಇದ್ದಕ್ಕಿದ್ದಂತೆ ತನ್ನ ಜೀಪನ್ನು ಹತ್ತಿರದಲ್ಲೇ ನಿಲ್ಲಿಸಿದರೂ ತಲೆ ಎತ್ತಿ ನೋಡಲಿಲ್ಲ ಸೌಜನ್ಯ. ಕೊನೆಗೆ ತಾತನೇ ಬುದ್ಧಿ ಹೇಳಿ ನಾನು ನಿನ್ನ ಹತ್ತಿರಲ್ಲೇ ಜೀಪು ನಿಲ್ಲಿಸಿದರೂ ಯಾಕೆ ತಲೆ ಎತ್ತಿ ನೋಡಬಾರದೇ? ಹೀಗೆ ಮಾಡುವುದು ಅಪಾಯ ಎಂದಾಗ, ನನಗೆ ಮಂಜುನಾಥ ಸ್ವಾಮಿಯ ಕೃಪೆ ಇದೆ ನಾನ್ಯಾಕೆ ಹೆದರಬೇಕು ಅಜ್ಜಾ ಎಂದು ಪ್ರಶ್ನಿಸಿದ್ದಳು. ಅವಳ ಧೈರ್ಯವನ್ನು ಕಂಡು ಈಗಲೂ ಕಣ್ಣೀರಾಗುತ್ತಾರೆ ಬಾಬುಗೌಡ.
ಹತ್ತನೇ ತರಗತಿಯಲ್ಲಿ ಬರೋಬ್ಬರಿ ೭೫ ಶೇ. ಅಂಕದೊಂದಿಗೆ ಉತ್ತೀರ್ಣಳಾದಳು. ನಂತರ ಈಕೆಯನ್ನು ಎಸ್‌ಡಿಎಂ ಕಾಲೇಜ್‌ಗೆ ಸೇರಿಸಲಾಯ್ತು. ಕಾಲೇಜ್‌ನಲ್ಲಿ ಇದ್ದಾಗಲೂ ಆಕೆ ಜಾಲಿ ಮಾಡುತ್ತಿರಲಿಲ್ಲ. ತಾನಾಯ್ತು ತನ್ನ ಕೆಲಸವಾಯ್ತು. ಯಾರೊಂದಿಗೂ ಜಗಳ ಕಾಯ್ತಿರಲಿಲ್ಲ. ಕಡಿಮೆ ಮಾತು, ಸರಳ ವ್ಯಕ್ತಿತ್ವ. ಮೊಬೈಲ್ ಅಂದ್ರೆ ಅಷ್ಟೇ ದೂರ. ಈ ಬಗ್ಗೆ ಆಕೆಯ ಗೆಳತಿ ವರ್ಷಾ ಈಗಲೂ ನೆನಪಿಸಿಕೊಳ್ಳುತ್ತಾಳೆ.
ಈ ಸಂದರ್ಭದಲ್ಲಿ ಆಕೆ ಮಾವನ ವಿಠ್ಠಲ ಗೌಡ ಅವರ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಳ್ಳಲು ಆರಂಭಿಸಿದ್ದಳು. ಜೊತೆಗೆ ತೋಟದಲ್ಲಿ ಅಡಿಕೆ ಸುಲಿಯುವುದು, ತೋಟಕ್ಕೆ ಗೊಬ್ಬರ ಹೊರುವುದು. ಶುಕ್ರವಾರ ದಿವಸ ದೇವರಿಗೆ ಹೂವಿನ ಮಾಲೆಯನ್ನು ಅರ್ಪಿಸದೆ ಕಾಲೇಜ್‌ಗೆ ಹೋಗುತ್ತಿರಲಿಲ್ಲ. ಇಂಜಿನಿಯರ್ ಆಗಬೇಕೆಂದು ಕನಸು ಕಂಡಿದ್ದಳು.
ನೆನಪಿನಂಗಳಕ್ಕೆ ಇಳಿದ ಮಾವ ವಿಠ್ಠಲ ಗೌಡ:
ಸೌಜನ್ಯಾಳ ಬಗ್ಗೆ ನೆನಪಿನಂಗಳಕ್ಕೆ ಇಳಿದ ಆಕೆಯ ಮಾವ ವಿಠ್ಠಲ ಗೌಡ, ಮನೆಯಲ್ಲೆ ಆಕೆಯೇ ಟೀಚರ್. ರಜೆಯ ದಿವಸದಲ್ಲಿ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ನನ್ನ ಹೋಟೆಲ್‌ಗೆ ಕೆಲಸ ಮಾಡಲು ಬರುತ್ತಿದ್ದಳು. ಅಡಿಗೆಯಿಂದ ಹಿಡಿದು ಟೇಬಲ್ ಒರಸುವುದು, ಪಾತ್ರೆ ತೊಳೆಯುವುದು, ಗಲ್ಲಾ ಪೆಟ್ಟಿಗೆಯಲ್ಲಿ ಕುಳಿತು ನನಗೆ ಸಹಾಯ ಮಾಡುತ್ತಿದ್ದಳು. ನಾವಾ ಆಕೆಗೆ ನೂರೋ, ಇನ್ನೂರೋ ಕೊಡುತ್ತಿದ್ದೆವು. ಅದನ್ನು ಆಕೆ ತನ್ನ ಬ್ಯಾಂಕ್‌ನ ಉಳಿತಾಯ ಖಾತೆಗೆ ಹಾಕುತ್ತಿದ್ದಳು. ಎಂಜಿನಿಯರ್ ಮುಗಿಸಿ ತಾಯಿಗೊಂದು ಕೈನಟಿಕ್ ಸ್ಕೂಟರ್ ತೆಗೆಸಿಕೊಡಬೇಕೆಂದು ಕನಸು ಕಂಡಿದ್ದಳು. ಆ ಸಂದರ್ಭದಲ್ಲಿ ಆಕೆಯ ಅಕ್ಕ ಸೌಮ್ಯಳಿಗೆ ಮದುವೆ ಫಿಕ್ಸ್ ಆಗಿತ್ತು. ಈ ಸಂದರ್ಭದಲ್ಲಿ ೨೦೦೦ ರೂ. ಹಣವನ್ನು ಕೂಡಿಟ್ಟುಕೊಂಡದ್ದ ಸೌಜನ್ಯಾ ತನನ ಅಕ್ಕನ ಮದುವೆಗೆ ನನ್ನ ಬಟ್ಟೆಯನ್ನು ನಾನೇ ತೆಗೆದುಕೊಳ್ಳುತ್ತೇನೆ. ನೀವು ಅದಕ್ಕಾಗಿ ಖರ್ಚು ಮಾಡುವುದು ಬೇಡ ಎಂದು ಹೇಳಿದ್ದಳು ಎಂದು ಆಕೆಯ ಮಾವ ಎಂದು ನೆನಪಿಸಿಕೊಳ್ಳುತ್ತಾರೆ.
ಅದರಂತೆ ಆಕೆಯ ಅಕ್ಕನ ಮದುವೆಗೆಂದು ಆಕೆಯೇ ಕೊಂಡಿದ್ದ ವಾಚ್, ಬಳೆ, ಚೂಡಿದಾರ್ ಈಗಲೂ ಮನೆಯಲ್ಲಿ ಭದ್ರವಾಗಿದೆ. ಆಕೆಯ ಪುಸ್ತಕ, ಬ್ಯಾಗ್ ಕೊಡೆಯನ್ನು ಮನೆಯವರು ಇಂದಿಗೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ.
ಸೌಜನ್ಯಾಳ ಪಾಲಿಗೆ ಕರಾಳ ಅಧ್ಯಾಯ ಬರೆದ ಅಕ್ಟೋಬರ್ ೯, ೨೦೧೨:
ಅಂದು ಅಕ್ಟೋಬರ್ ೯, ೨೦೧೨ನೇ ಇಸ್ವಿ. ಎಂದಿನಂತೆ ತನ್ನ ಅಮ್ಮ ಕುಸುಮಾವತಿಯವರನ್ನು ಕರೆದು, ‘ಅಮ್ಮಾ ಕಾಲೇಜ್‌ಗೆ ಹೋಗಿ ಮಧ್ಯಾಹ್ನ ೧.೩೦ಗೆ ಮನೆಗೆ ಬರುತ್ತೇನೆ. ಮನೆಯಲ್ಲಿ ಎಲ್ಲರೂ ಒಟ್ಟಾಗಿ ಊಟ ಮಾಡೋಣ ಎಂದು ಹೇಳಿದ್ದಳು. ಆಗ ಅಮ್ಮ ಆಕೆಯ ಮುಖವನ್ನೂ ನೋಡದೆ ಮನೆಯೊಳಗಿನಿಂದಲೇ ಹೂಂಗುಟ್ಟಿದ್ದರು. ಆದರೆ ಆಕೆ ಮರುದಿನ ಆಗಮಿಸಿದ್ದು ಹೆಣದ ರೂಪದಲ್ಲಿಯೇ.
ತನ್ನಿಬ್ಬರು ಗೆಳತಿಯರೊಂದಿಗೆ ಉಜಿರೆಯ ಬಸ್ ಹತ್ತಿ ಕಾಲೇಜ್‌ಗೆ ತೆರಳಿದ್ದಳು. ನಂತರ ಮಧ್ಯಾಹ್ನ ಉಜಿರೆಯಿಂದ ಬಸ್ ಹತ್ತಿ ಶಾಂತಿವನ ಬಸ್‌ನಿಲ್ದಾಣದಲ್ಲಿ ಇಳಿದಿದ್ದಾಳೆ. ಇದನ್ನು ಅಲ್ಲಿನ ಟೀ ಅಂಗಡಿಯವ ನೋಡಿದ್ದಾನೆ. ಪಾಂಗಳಕ್ಕೆ ಹೋಗಬೇಕಾದರೆ ಅಲ್ಲೊಂದು ಕಾಲುದಾರಿಯಿದೆ. ನಿತ್ಯವೂ ಅಲ್ಲಿಂದಲೇ ಮನೆಗೆ ಬರುತ್ತಿದ್ದ ಸೌಜನ್ಯ ಅಂದು ಮನೆಗೆ ಬರಲೇ ಇಲ್ಲ. ಹೀಗೆ ಮನೆಯವರು ಆರು ಗಂಟೆಯವರೆಗೆ ಕಾದರು. ನಂತರ ಮನೆಯವರೆಲ್ಲಾ ಸೇರಿ ಹುಡುಕಾಡಿದರೂ ಸೌಜನ್ಯ ಸಿಗಲಿಲ್ಲ. ತಕ್ಷಣ ಪಕ್ಕದ ಹೊರಠಾಣೆ ಮತ್ತು ಬೆಳ್ತಂಗಡಿ ಠಾಣೆಗೆ ದೂರಿಟ್ಟರು. ಪೊಲೀಸರು ತಕ್ಷಣ ಆಕೆಯ ಹುಡುಕಾಟದಲ್ಲಿ ತೊಡಗಿದರು.
ಸ್ವಲ್ಪ ಹೊತ್ತಿನ ಬಳಿಕ ಶಾಂತಿವನದಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಸೌಜನ್ಯಾಳ ಅರೆನಗ್ನ ದೇಹ ಪತ್ತೆಯಾಗಿದೆ ಎಂದು ಸುದ್ದಿ ಮನೆಯವರಿಗೆ ಬಂದಿದ್ದೇ ತಡ. ಎಲ್ಲರೂ ಕಣ್ಣೀರಲ್ಲಿ ಕೈತೊಳೆದುಕೊಂಡರು. ಆಕೆಯ ಅರೆಬರೆ ಉಡುಪು, ನಗ್ನಾವಸ್ಥೆಯ ಸ್ಥಿಯಲ್ಲಿನ ಶವವನನು ಕಂಡು ಊರಿಗೆ ಊರೇ ಕಣ್ಣೀರಿಟ್ಟಿತು.
ಮರುದಿನ ಅ.೧೦ಕ್ಕೆ ಮನೆಗೆ ಶವ ಬಂದಾಗ ತಾಯಿ ಕುಸುಮಾವತಿ ಭೂಮಿಗೆ ಇಳಿದೇ ಹೋಗಿದ್ದರು.
ಆದರೆ ಮರುದಿನ ಶಾಂತಿವನದ ಪಕ್ಕದಲ್ಲೇ ಅನುಮಾನಾಸ್ಪದವಾಗಿ ತಿರುಗಾಡಿಕೊಂಡಿದ್ದ ವ್ಯಕ್ತಿಯೋರ್ವನ ಪತ್ತೆಯಾಯ್ತು. ಆತನ ಹೆಸರು ಸಂತೋಷ್. ಆತನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಆದರೆ ಆತ ಅರೆಹುಚ್ಚನಾಗಿದ್ದ. ಆತನೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಕಥೆ ಕಟ್ಟಲಾರಂಭಿಸಿದರು. ನಿಜವಾದ ಆರೋಪಿ ಯಾರೆಂದು ಇದುವರೆಗೂ ಪತ್ತೆಯಾಗಲಿಲ್ಲ. ಆಕೆಯ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದ್ದು ಸಿಬಿಐ ತನಿಖೆಗೆ ಒತ್ತಾಯವೊಂದು ಕೇಳಿಬಂದಿದೆ.


೩೭೦ ಪರಿಚ್ಛೇದ ರದ್ದುಗೊಳಿಸುವುದೇ ಸೂಕ್ತ.



ನರೇಂದ್ರ ಮೋದಿ ಇತ್ತೀಚೆಗೆ ಕಾಶ್ಮೀರಕ್ಕಾಗಿ ಇರುವ ಪರಿಚ್ಛೇದ ೩೭೦ರ ಕುರಿತು ಚರ್ಚಿಸಬೇಕೆಂದು ಹೇಳಿದ್ದರು.
೩೭೦ ಪರಿಚ್ಛೇದದ ದುಷ್ಪರಿಣಾಮಕ್ಕೆ ನೆಹರೂರವರೇ ಜವಾಬ್ದಾರರು. ಇದು ನಿಜವಾಗಿಯೂ ಕಾಶ್ಮೀರದ ಬಂಡುಕೋರರಿಗೆ ಕೊಡುವ ಅತ್ಯುನ್ನತ ಸೌಲಭ್ಯವಾಗಿದೆ. ಇದು ನೆಹರೂ ರೂಪಿಸಿದ ವಿಧಿಯಾಗಿದೆ. ಭಾರತಕ್ಕೆ ಒಳಪಡುವ ಸಂಸ್ಥಾನಗಳನ್ನು ಭಾರತಕ್ಕೆ ವಿಲೀನಗೊಳಿಸುವ ಜವಾಬ್ದಾರಿ ಸರ್ದಾರ್ ವಲ್ಲಭಾಯ್ ಪಟೇಲರ ಮೇಲಿತ್ತು. ಆಗ ಸರ್ದಾರ್ ನೆಹರೂರವರಲ್ಲಿ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೇಳಿಕೊಂಡರು. ಬೇರೆ ಸಂಸ್ಥಾನಗಳು ತಕ್ಷಣ ವಿಲೀನವಾದವು. ಆದರೆವ ಅಲ್ಲಿನ ರಾಜಾ ಹರಿಸಿಂಗ್ ಮಾಡಿದ ಕೊಂಚ ಎಡವಟ್ಟಿನಿಂದ ಮತ್ತು ನೆಹರೂರವರ ಎಡವಟ್ಟಿನಿಂದ ಕಾಶ್ಮೀರ ಇಂದಿನವರೆಗೆ ಸಮಸ್ಯೆ ನೀಡುತ್ತಲೇ ಬಂದಿದೆ. ಲೊನೆಗೆ ಚೀನಾ ೩೬ ಸಾವಿರ ಮೈಲ ವಿಸ್ತೀರ್ಣದ ಭೂಭಾಗವನ್ನು ಸ್ವಾಧೀನಗೊಳಿಸಿತು.
ಪಾಕಿಸ್ತಾನ ಕಾಶ್ಮೀರಕ್ಕೆ ಚೀನಾವನ್ನು ಕಳುಹಿಸಿದ್ದಾಗ ರಾಜಾ ಹರಿಸಿಂಗ್‌ನು ಸೈನ್ಯ ಕಳುಹಿಸಲು ವಿನಂತಿಸುತ್ತಿದ್ದನು; ಆದರೆ ನೆಹರು ಬಾಯಿ ಮುಚ್ಚಿಕೊಂಡಿದ್ದರು. ಪಾಕಿಸ್ತಾನವು ಅರ್ಧ ಕಾಶ್ಮೀರವನ್ನು ವಶಪಡಿಸಿದ ನಂತರ ಸರದಾರ ಪಟೇಲರು ಸ್ವತಃ ಸೈನ್ಯ ಕಳುಹಿಸಿ ಪಾಕಿಸ್ತಾನದ ಸೈನ್ಯವನ್ನು ತಡೆದರು. ಆದ್ದರಿಂದ ಕಾಶ್ಮೀರ ಅರ್ಧ ವಾದರೂ ಉಳಿಯಿತು. ಆದರೆ ಪಾಲಿಸ್ತಾನಕ್ಕೆ ಸರಿಯಾದ ಉತ್ತರ ನೀಡಲು ಕಾಂಗ್ರೆಸ್ ಸರಕಾರಕ್ಕೆ ಮನಸ್ಸಾಗಲೇ ಇಲ್ಲ. ಆದರೆ ಮೋದಿ ಮಾತ್ರ ಪಾಕಿಸ್ತಾನಕ್ಕೆ ತಕ್ಕ ಉತ್ತರ ಮೀಡಬಲ್ಲವರಾಗಿರುವುದರಿಂದ ಅವರನ್ನು ಪ್ರಧಾನಿ ಮಾಡುವುದು ಅಗತ್ಯವಾಗಿದೆ.
ಗಡಿ ಸಮಸ್ಯೆ ಸಂಯುಕ್ತ ರಾಷ್ಟ್ರ ಸಂಘಕ್ಕೆ ಹೋದಾಗ ನೆಹರೂರವರು ಶೇಖ್ ಅಬ್ದುಲ್ಲಾ ಎಂಬವರನ್ನು ಕಳುಹಿಸಿದರು. ಆಗ ಅವರು ಕಾಧ್ಮೀರ ಭಾರತದ್ದೂ ಅಲ್ಲ, ಪಾಕಿಸ್ತಾನದ್ದೂ ಅಲ್ಲ ಎಂಬ ಹೇಳಿಕೆ ನೀಡಿದರು. ಇದರಿಂದಾಗಿಯೇ ಪಾಕ್ ಇದುವರೆಗೂ ತಮ್ಮದೆಂದು ಹೇಳಿಕೊಳ್ಳುತ್ತಿದೆ. ಇದು ನೆಹರೂ ಮಾಡಿದ ತಪ್ಪಾಗಿದ್ದು, ಈ ತಪ್ಪನ್ನು ಕೇಂದ್ರದಲ್ಲಿ ಇದುವರೆಗೆ ಅಧಿಕಾರದಲ್ಲಿ ಕೂತ ಕಾಮಗ್ರೆಸ್ ಸರಕಾರ ಬಗೆಹರಿಸಲು ಹೋಗಿಲ್ಲ.
ನಂತರ ಲಾಧ್ಮೀರದಲ್ಲಿ ೩೭೦ನೇ  ಪರಿಚ್ಛೇದ ಚಾಲ್ತಿಗೆ ಬಂದಿತು. ಇದರಿಂದಾಗಿ ಸಾವಿರಾರು ಕಾಶ್ಮೀರಿ ಯುವತಿಯರಿಗೆ ವರಾನ್ವೇ ವರಾನ್ವೇಶಣೆಗೆ ಅಡ್ಡಿಯಾಗುತ್ತಿದೆ. ಕಾಶ್ಮೀರಿ ಯುವತಿ ಭಾರತದ ಮುಸಲ್ಮಾನನೊಂದಿಗೆ ವಿವಾಹ ವಾಗುವಂತಿಲ್ಲ, ಆದರೆ ಕಾಶ್ಮೀರಿ ಯುವಕರು ಯಾರೊಂದಿಗೂ ವಿವಾಹವಾಗ ಬಹುದು. ಇಂತಹ ಭೇದ ಭಾವವೇಕೇ? ಈ ಬಗ್ಗೆ ಸಮಾನತೆಯ ಬಗ್ಗೆ ಕೂಗು ಹಾಕುವ ಪ್ರಗತಿಪರರು, ಮಹಿಳಾವಾದಿಗಳು ಯಾಕೆ ಬೊಬ್ಬೆ ಹಾಕಲಿಲ್ಲ?
೩೭೦ರ ಪರಿಚ್ಛೇದದ ದುಷ್ಪರಿಣಾಮಗಳು:
ಕಾಶ್ಮೀರದಲ್ಲಿ ಭಾರತೀಯರಿಗೆ ವಾಸಿಸುವಂತಿಲ್ಲ. ಇದ್ದರೆ ಅತಿಥಿಗಳಂತೆ ಸ್ವಲ್ಪದಿನ ಇದ್ದು ಬರಬಹುದು. ರಾಷ್ಟ್ರಪತಿಗೂ ಅಲ್ಲಿ ನೆಲೆಸಲು ಸಾಧ್ಯವಿಲ್ಲ. ಅಲ್ಲಿ ಆಲಿ ಇಂಡಿಯಾ ರೇಡಿಯೋ ಇಲ್ಲ. ಅಲ್ಲಿ ರೇಡಿಯೋ ಕಾಶ್ಮೀರವಿದೆ. ಅಂಬೇಡ್ಕರ್ ಸಂವಿಧಾನವನ್ನು ಅನ್ವಯಿಸುವಾಗ ನೆಹರು ಅದನ್ನು ಕಾಶ್ಮೀರದಿಂದ ದೂರವಿಟ್ಟರು. ಸಂವಿಧಾನದಲ್ಲಿನ ಯಾವುದೇ ಪರಿಚ್ಛೇದವೂ ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ ಎಂದರು. ಕಾಶ್ಮೀರದ ಮುಖ್ಯಮಂತ್ರಿಗೆ ಭಾರತದ ಪ್ರಧಾನಿಗಿರುವ ಅಧಿಕಾರ ಮರ್ಯಾದೆ ಇದೆ. ಇದರಿಂದಾಗಿ ಒಂದು ದೇಶದಲ್ಲಿ ಎರಡು ಪ್ರಧಾನಿಗಳಂತೆ. ಆದುದರಿಂದ ಈ ದೇಶದ್ರೋಹಿ ೩೭೦ ಪರಿಚ್ಛೇದವನ್ನು ರದ್ದುಪಡಿಸಿದಾಲೇ ಭಾರತ ನಿಜವಾಗಿಯೂ ಸ್ವತಂತ್ರಯವಾಗಲಿದೆ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಕಾಶ್ಮೀರಕ್ಕೆ ಅನ್ವಯವಾಗುವ ೩೭೦ನೇ ಪರಿಚ್ಛೇದವನ್ನು ರದ್ದುಗೊಳಿಸಬೇಕು ಎಂಬ ಹೇಳಿಕೆಯನ್ನು ನೀಡಿದರು. ಆದರೆ ಆ ಹೇಳಿಕೆ ಹೊರಬಿದ್ದ ತಕ್ಷಣ ಮೋದಿಯವರನ್ನು ದೇಶದ್ರೋಹಿಯಂತೆ ಚಿತ್ರಿಸಲಾಯ್ತು. ಕಂಗ್ರೆಸ್ ಕೃಪಾಪೋಷಿತ ಮಾಧ್ಯಮ,ಗಳು ಮೋದಿಯವರ ಮೇಲೆ ಛೂ ಬಿದ್ದವು. ೩೭೦ನೇ ಪರಿಚ್ಛೇದದ ದುಷ್ಪರಿಣಾಮದ ಬಗ್ಗೆ ಯಾವ ಮಾಧ್ಯಮಗಳೂ ಜನರಿಗೆ ತಿಳುವಳಿಕೆಯನ್ನು ನೀಡಲಿಲ್ಲ.
ಈ ಕಾಶ್ಮೀರ ಸಮಸ್ಯೆ ಬಗೆಹರಿದಿದ್ದರೆ ಲಕ್ಷಾಂತರ ಅಮಾಯಕ ಜನರು ಸಾವಿಗೀಡಾಗಬೇಕಾಗುತ್ತಿರಲಿಲ್ಲ. ಕಾಶ್ಮೀರಿ ಪಂಡಿತರು ದೇಶಬಿಟ್ಟು ಹೋಗಿ ಬೀದಿಬದಿಗಳಲ್ಲಿ ಚಪ್ಪಲಿ ಹೊಲಿಯುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಕಾಶ್ಮೀರದ ಮುಖ್ಯಮಂತ್ರಿ ಭಾರತ ದೇಶದ ವಿರುದ್ಧ ಹೇಳಿಕೆಯನ್ನು ನೀಡಬೇಕಾಗಿರಲಿಲ್ಲ. ಭಾರತದ ಹೆಮ್ಮೆಯ ಲಕ್ಷಾಂತರ ಸೈನಿಕರು ಪ್ರಾಣ ತ್ಯಾಗ ಮಾಡಬೇಕಾಗಿರಲಿಲ್ಲ.    ಯುದ್ಧಕ್ಕಾಗಿ ಭಾರತ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಬೇಕಾಗುತ್ತಿರಲಿಲ್ಲ. ಮುಖ್ಯವಾಗಿ ಭಯೋತ್ಪಾದನೆ ಈ ಪರಿ ಬೆಳೆಯಲೂ ಸಾಧ್ಯವಾಗುತ್ತಿರಲಿಲ್ಲ.
ನರೇಂದ್ರ ಮೋದಿ ಪ್ರಧಾನಿಯಾದರೆ ಕಾಂಗ್ರೆಸ್ ನಾಯಕರು ಜೈಲು ಪಾಲಾಗುವುದು ಸ್ಪಷ್ಟ. ಸಿಖ್ಖರ ಸಾವಿಗೆ ಕಾರಣವಾದ ಕಾಂಗ್ರೆಸ್ ಅದರ ಅಧಿನಾಯಕಿ ಅಂತರರಾಷ್ಟ್ರೀಯ ಕಟಕಟೆಯಲ್ಲಿ ನಿಲ್ಲಬೇಕಾದ ಪ್ರಮೇಯ ಒದಗಿ ಬರುತ್ತದೆ. ಭೋಪಾಲ್ ಅನಿಲ ದುರಂತ ಮತ್ತೆ ಜಿಗಿತುಕೊಂಡು ಅದರ ಹಿಂದಿರುವ ಕರಾಳ ಮುಖಗಳು ಜೈಲುಪಾಲಾಗುವುದು ಖಂಡಿತ. ಭೋಪೋರ್ಸ್ ಹಗರಣ ಮೇಲೆ ಬೀಳುತ್ತದೆ. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಕೋಟಿಗಟ್ಟಲೆ ಜನರ ಸಾವಿಗೆ ಕಾರಣವಾದ ಕಾಂಗ್ರೆಸ್ ಮೋದಿ ಪ್ರಧಾನಿಯಾದರೆ ಖಂಡಿತಾ ಮೂಲೋತ್ಪಾಟನೆಗೊಳ್ಳುತ್ತದೆ.
ಕಾಂಗ್ರೆಸ್ ಈಗ ನಡುಕವಾಗಿದ್ದು ಮೋದಿಯವರನ್ನು ಸಾವಿನ ವ್ಯಾಪಾರಿ ಎಂದು ಜರೆಯುತ್ತಿದೆ. ಅವರ ಮೇಲೆ ಒಂದಲ್ಲಾ ಒಂದು ಕೇಸ್ ಜಡಿಯುತ್ತದೆ. ಅವರನ್ನು ಪ್ರಧಾನಿಯಾಗದಂತೆ ಶತಾಯಗತಾಯ ಪ್ರಯತ್ನಿಸುತ್ತಿದೆ. ನಮಗೆ ಇರುವುದು ಕಡೆಯ ಅವಕಾಶ. ಇಂದು ನಾವುಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡದಿದ್ದರೆ ನಾವು ಮತ್ತೆ ಸಮಸ್ಯೆಯಿಂದ ಬಳಲಬೇಕಾಗುತ್ತದೆ.
ಈ ಎಲ್ಲಾ ಅಂಶಗಳೆನ್ನು ಗಮನಿಸಿದಾಗ ಕಾಶ್ಮೀರ ಸಮಸ್ಯೆ ದೇಶದ ಅಭಿವೃದ್ಧಿಯಲ್ಲಿ ತೊಡಕಾಗಿರುವುದು ಗಮನಕ್ಕೆ ಬರುತ್ತದೆ. ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬಲ್ಲ ಮೋದಿಯವರನ್ನು ನಾವು ಪ್ರಧಾನಿಯನ್ನಾಗಿಸಬೇಕು.

ಇದು ಮೂಡನಂಬಿಕೆ ಯಲ್ಲವೇ ಸಿದ್ದರಾಮಯ್ಯನವರೇ?


ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿ ಹಲವು ರೋಗಿಗಳನ್ನು ಗುಣಪಡಿಸಿ(ದಂತೆ ನಾಟಕವಾಡಿ)ಹೋದ ಕ್ರೈಸ್ತ ಮಿಷಿನರಿ ಬೆನ್ನಿ ಹಿನ್ ಮತ್ತೊಮ್ಮೆ ಬೆಂಗಳೂರಿಗೆ ಕಾಲಿಡುತ್ತಿದ್ದೇನೆ. ಕೇವಲ ಕೈಯ ಸ್ಪರ್ಶದಿಂದ ಕುರುಡರಿಗೆ ಕಣ್ಣು ಬರುವಂತೆ ಮಾಡುವುದು, ಕಿವುಡರಿಗೆ ಕಿವಿ ಕೇಳಿಸುವಂತೆ ಮಾಡುವುದು, ಬರೀ ಪ್ರಾರ್ಥನೆಯಿಂದಲೇ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳನ್ನು ಗುಣಪಡಿಸುವುದು ಈತನ ಸ್ಪೆಷಾಲಿಟಿ. ಈತ ಒಂಥರಾ ಮಲ್ಟಿಸ್ಪೆಷಾಲಿಟಿ ಡಾಕ್ಟರ್. ಯಾವುದೇ ಮದ್ದು ನೀಡದೆ ರೋಗ ಗುಣ ಪಡಿಸುವ ಜಾದೂಗಾರ ವೈದ್ಯ. ಅಂದಹಾಗೆ ನಮ್ಮ ಸಿ.ಎಂ ಸಿದ್ದರಾಮಯ್ಯನವರು ಯಾವತ್ತೋ ಮೂಡನಂಬಿಕೆ ನಿಷೇಧದ ಬಗ್ಗೆ ಮಾತನಾಡಿದ್ದ ನೆನಪು. ಪಾಪ ಅವರಿಗೆ ಬರೀ ಹಿಂದೂ ಧರ್ಮದಲ್ಲಿರುವ ಮೂಡನಂಬಿಕೆಗಳ ಬಗ್ಗೆ ಮಾತ್ರ ತಿಳಿದಿದೆಯೋ ಏನೋ. ಅವರ ಸಚಿವರ ಪಟಲಾಂ ಕೂಡಾ ಬೆನ್ನಿ ಹಿನ್ ನ ಕುತಂತ್ರಗಳ ಬಗ್ಗೆ ಅವರಿಗೆ ತಿಳಿಸದೆ ಇರಬಹುದು. ಅದಕ್ಕಾಗಿ ನಾನು ತಿಳಿಸುತ್ತಿದ್ದೇನೆ.
ಬೆನ್ನಿ ಹಿನ್ ಒಬ್ಬ ಮಹಾ ವಂಚಕ. ಆತನ ಸ್ಪರ್ಶದಿಂದ ರೋಗ ಗುಣವಾದ ಒಂದು ಪುರಾವೆ ಕೂಡಾ ಇಡೀ ಜಗತ್ತಿನಲ್ಲಿಲ್ಲ. ಆತನದೇನಿದ್ದರೂ ಮುಗ್ಧ ಜನರನ್ನು ಮರುಳು ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಆ ಮೂಲಕ ಹಣ ಬಾಚುವ ಪಕ್ಕಾ ವ್ಯವಹಾರ. ಈತ ಜನರನ್ನು ಒಟ್ಟುಗೂಡಿಸಿ ಸಮೂಹಸನ್ನಿಗೆ ಒಳಪಡಿಸುತ್ತಾನೆ. ಆದುದರಿಂದ ಆ ಸಮಯದಲ್ಲಿ ಆತ ಮಾಡುವುದೆಲ್ಲವೂ ನಿಜ ಎಂಬ ಭ್ರಮೆ ಉಂಟಾಗುತ್ತದೆ. ವಾಸ್ತವದಲ್ಲಿ  ಆತ ಯಾವ ರೋಗವನ್ನೂ ಗುಣಪಡಿಸಿರುವುದಿಲ್ಲ. ಈ ಬಗ್ಗೆ ಈತನಿಂದ ಸ್ಫರ್ಶ ಪಡೆದು ತಮ್ಮ ರೋಗ ಗುಣವಾಗಿದೆ ಎಂದು ಹೇಳಿಕೊಂಡಿದ್ದ ಬಹುತೇಕ ಎಲ್ಲರೂ ನಂತರದ ದಿನಗಳಲ್ಲಿ ನಾವು ಆತನ ಪ್ರಭಾವಕ್ಕೆ ಒಳಗಾಗಿ ಈ ರೀತಿಯ ಹೇಳಿಕೆ ನೀಡಿದ್ದೆವು ಎಂಬುದನ್ನು ಒಪ್ಪಿದ್ದಾರೆ. ಬೆನ್ನಿಹಿನ್ ಕಪಟವನ್ನರಿತ ಹಲವು ಕ್ರೈಸ್ತ ದೇಶಗಳು ಹಾಗೂ ಸಂಘಗಳು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಆದರೆ ನಮ್ಮದು ಏನಿದ್ದರೂ  ವೋಟ್‌ಬ್ಯಾಂಕ್ ರಾಜಕೀಯ ನೋಡಿ. ಹಾಗಾಗಿ ಬೆನ್ನಿ ಹಿನ್ ಅಲ್ಲ ಅಲ್ಪಸಂಖ್ಯಾತರ ಪರವಾಗಿ ಯಾವ ಬಾಬಾ, ಮಾಟಗಾರ ಅಥವಾ ದೇಶವನ್ನು ಸೂರೆಗೈಯ್ಯುವವನೇ ಬಂದರೂ ಆತನನ್ನು ಸ್ವಾಗತಿಸುವುದು ನಮ್ಮ ಪರಮ ಧರ್ಮ. ಈ ಹಿಂದೆ ಬೆನ್ನಿಹಿನ್ ಬೆಂಗಳೂರಿಗೆ ಆಗಮಿಸಿದ್ದಾಗ ಅಂದಿನ ಧರಂ ಸಿಂಗ್ ಸರಕಾರ ಕಾನೂನನ್ನೇ ಉಲ್ಲಂಘಿಸಿ ಆತನಿಗೆ ಇಲ್ಲಿ ಸಭೆ ನಡೆಸಲು ಅನುಮತಿ ನೀಡಿತ್ತು. ಅಂಥ ಮಹಾನ್ ರಾಜಕೀಯ ನಮ್ಮದು. ಅಂಥದ್ದರಲ್ಲಿ ಈಗ ಅದೇ ಪಕ್ಷದ ಸಿ.ಎಂ ತಾವೇ ಮಾಡಿರುವ ಮೂಡನಂಬಿಕೆ ನಿಷಿದ್ಧ ಕಾನೂನನ್ನು ಬೆನ್ನಿಹಿನ್‌ಗಾಗಿ ಸ್ವಲ್ಪ ಸಮಯ ನಂತರ ಜಾರಿಗೆ ತಂದರೆ ಯಾವ ಮಹಾನ್ ತಪ್ಪಾದೀತು, ಅಲ್ಲವೇ?. ಆತ ತನ್ನ ಸಭೆ ನಡೆಸಿ, ಇಲ್ಲಿ ರಾಜನಂತೆ ಮೆರೆದು, ಜನರನ್ನು ಮೋಸಗೊಳಿಸಿ ಒಂದಿಷ್ಟು ಹಣ ಲಪಟಾಯಿಸಿ ಹೋದ ನಂತರ ಪುನಃ ಹಿಂದೂಗಳ ಮೇಲೆ ಮೂಡನಂಬಿಕೆ ನಿಷೇಧ ಕಾಯಿದೆಯನ್ನು ಹೇರಿದರಾಯಿತು. ಎಷ್ಟಾದರೂ ಹಿಂದೂಗಳು ಇರುವುದೇ ರಾಜಕಾರಣಿಗಳ ಕಪಟ ನಾಟಕಗಳಿಗೆ ಬಲಿಯಾಗಲು. ಈ ಬಾರಿಯೂ ಆ ನಾಟಕ ನಡೆಯಲಿ.
ಕ್ರೈಸ್ತರು ತಮ್ಮ ಧರ್ಮ ಹಾಗೂ ದೇವರಿಗೆ ಅತ್ಯಂತ ಗೌರವ ನೀಡುವವರು. ಅವರ ಭಕ್ತಿ ಹಾಗೂ ಅರ್ಪಣೆಯು ಪ್ರಶ್ನಾತೀತ. ಆದರೆ ದೇವರ ಹೆಸರಲ್ಲಿ ಬಡವರನ್ನು ಸುಲಿಯುವ ಬೆನ್ನಿಹಿನ್‌ನಂಥ ಮೋಸಗಾರನಿಗೆ ಪ್ರೋತ್ಸಾಹ ನೀಡುವುದು ಯಾಕೆ. ಕೇವಲ ಸ್ಪರ್ಶ ಮಾತ್ರದಿಂದ ರೋಗಗಳು ಗುಣಮುಖವಾಗುವುದಿದ್ದರೆ ಕ್ರೈಸ್ತರಲ್ಲಿ ಒಬ್ಬನಾದರೂ ರೋಗಿ ಅಥವಾ ಅಂಗವಿಕಲ ಇರುತ್ತಿದ್ದನೇ? ಇದನ್ನು ಕ್ರೈಸ್ತರೂ ಕೂಡಾ ಅರಿತುಕೊಳ್ಳಬೇಕಿದೆ. ಏಸು ಸ್ವಾಮಿಯನ್ನು ಪೂಜಿಸಲು ಮನೆಗಳಲ್ಲಿ, ಚರ್ಚ್‌ಗಳಲ್ಲಿ ಬೇಕಾದಷ್ಟು ಅವಕಾಶವಿದೆ. ಅದಕ್ಕಾಗಿ ಬೆನ್ನಿಹಿನ್ ಹಿಂದೆ ಹೋಗಬೇಕಾದ ಅನಿವಾರ್ಯತೆಯಿಲ್ಲ. ಹಿಂದೂಗಳಲ್ಲಿ ಅಸಾರಾಂ, ನಿತ್ಯಾನಂದ ಹೇಗೋ ಬೆನ್ನಿಹಿನ್ ಕೂಡಾ ಅದೇ ಪಂಗಡಕ್ಕೆ ಸೇರಿದಾತ. ಇವರಿಗೆಲ್ಲಾ ಧರ್ಮದ ಮೇಲೆ ಗೌರವವಿರುವುದಿಲ್ಲ ಅವರದ್ದೇನಿದ್ದರೂ ವ್ಯಾಪಾರಿ ಮನೋಭಾವ. ಹಣ ಸಂಪಾದಿಸುವುದು, ಐಷಾರಾಮಿ ಜೀವನ ಸಾಗಿಸುವುದು ಇವರ ಮುಖ್ಯ ಉದ್ದೇಶ. ಸರಕಾರ ವೋಟಿಗಾಗಿ ಜನರ ಹಿತಾಸಕ್ತಿಯನ್ನು ಕೊಲ್ಲಲು ಸದಾ ಸಿದ್ಧವಾಗಿಯೇ ಇರುತ್ತದೆ. ಅದರಲ್ಲೇನೂ ಆಶ್ಚರ್ಯವಿಲ್ಲ. ಆದರೆ ಕಪಟಿಯೊಬ್ಬನ ಕೈಯಿಂದ ಮೋಸಹೋಗದಂತೆ ಜನರನ್ನು ಜಾಗೃತಗೊಳಿಸುವುದು ಜನಸಾಮಾನ್ಯರ ಕರ್ತವ್ಯ. ಈ ಬಗ್ಗೆ ಪ್ರಜ್ಞಾವಂತ ಕ್ರೈಸ್ತರೂ ಕೂಡಾ ಜಾಗೃತರಾಗಬೇಕಿದೆ.
ಈ ಬಾರಿ ಬೆನ್ನಿಹಿನ್ ಬೆಂಗಳೂರಿನ ಯಲಹಂಕದಲ್ಲಿ ಸಭೆ ನಡೆಸಲಿದ್ದಾನೆ. ಸಿ.ಎಂ ಸಿದ್ದರಾಮಯ್ಯನವರ ಸಮೇತ ಎಲ್ಲಾ ಮಂತ್ರಿಗಳು ಅಲ್ಲಿಗೆ ತೆರಳಿ ಆತನ ಪವಾಡಗಳನ್ನು ಕಣ್ಣಾರೆ ಕಂಡು ಧನ್ಯರಾದರೆ ರಾಜ್ಯದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲವು ಉಪಾಯಗಳು ಸಿಗಬಹುದು. ಹಾಗಾದಾಗ ಸರಕಾರದ ವತಿಯಿಂದ ರೋಗಿಗಳಿಗೆ ನೀಡಲಾಗುವ ಸವಲತ್ತಿನ ಖರ್ಚು ಉಳಿದು ಬೊಕ್ಕಸಕ್ಕೆ ಅಪಾರ ಲಾಭವಾಗಬಹುದು. ಏನಂತೀರಿ. ಸಿ.ಎಂ ಸಾಹೆಬ್ರೆ?
ಯುಗಾದಿ ಹಬ್ಬ ಹಿಂದೂಗಳ ಹೊಸವರ್ಷ
ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಪಾಶ್ಚ್ಯಾತ್ಯ ಅನುಕರಣೆ ಮಾಡುವುದು ಹೆಚ್ಚಾಗುತ್ತಿದೆ. ಪಾಶ್ವ್ಯಾತ್ಯರು ಯಾವುದು ತಮಗೆ ಬೇಡವೆಂದು ದೂರ ಮಾಡುತ್ತಾರೋ ಅದನ್ನೇ ಭಾರತೀಯರು ಯಾಬುದೇ ಮರ್ಜಿ ಇಲ್ಲದೆ ಆಚರಿಸುತ್ತಾರೆ. ಅವುಗಳಲ್ಲಿ ಡಿ.೩೧ ಆಗುತ್ತಿದ್ದಂತೆ ಬಾರ್, ಪಬ್‌ಗಳಲ್ಲಿ ಯುವಕ-ಯುವತಿಯರು ಯಾವುದೇ ನಾಚಿಕೆ ಮಾನಮರ್ಯಾದೆ ಇಲ್ಲದೆ ಲಜ್ಜೆ ಬಿಟ್ಟು ಕುಣಿಯುತ್ತಾರೆ. ದೃಶ್ಯ ಮಾಧ್ಯಮಗಳಂತೂ ಈ ಕಾರ್ಯಕ್ರಮದ ಸ್ಪೆಷಲ್ ಎಪಿಸೋಡ್ ಮೂಲಕ ಕಾರ್ಯಕ್ರಮ ಪ್ರಸಾರಿಸಿ ವೈಭವೀಕರಿಸುತ್ತಾರೆ.
ಹಿಂದೂಗಳಿಗೆ ಡಿಸೆಂಬರ್ ೩೧ರ ರಾತ್ರಿ ಎಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಆಚರಿಸುವ ದಿನವಾಗಿದೆ. ಅಲ್ಲದೆ ಸರಕಾರ ಕೂಡಾ ಇದಕ್ಕೆ ಪ್ರತ್ಯಕ್ಷವಾಗಿ ಪ್ರೋತ್ಸಾಹಿಸಿ ಹೊಸವರ್ಷದ ವಿಚಾರದಲ್ಲಿ ನಡೆಯುವ ವೈಭವೀಕರಣವನ್ನು ಪ್ರೋತ್ಸಾಹಿಸುತ್ತದೆ.
ಹಾಗಾಗಿ ಈ ರಾತಿಯಂದು ಮದ್ಯ, ಮಾಂಸ ಸೇವಿಸಿ ಡಿಜೆ ಡ್ಯಾನ್ಸ್‌ಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲದೆ ಕೆಲವೆಡೆ ಮಾಂಸದಂಧೆಗಳೂ ಸಹ ಎಗ್ಗಿಲ್ಲದೆ ನಡೆಯುತ್ತದೆ. ಆದುದರಿಂದ ಇಲ್ಲಿ ನೈತಿಕತೆಗೆ ಮಸಿಬಳಿಯುವಂತಹ ಘಟನೆಗಳು ಸಾರಾಸಗಟಾಗಿ ನಡೆಯುತ್ತವೆ ಎಂದು ಹೇಳಬಹುದು.
ಡಿ.೩೧ ಗ್ರಹ ಮತ್ತು ಮಿಸರ್ಗಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವಿರುವುದಿಲ್ಲ. ನಿಜವಾಗಿ ನೋಡಿದರೆ ಜ.೧ ಹೊಸವರ್ಷವೇ ಅಲ್ಲ. ಜ. ೧ನ್ನು ಆಚರಿಸುವುದರಿಂದ ಹಿಂದೂಗಳು ಅನ್ಯ ಧರ್ಮಕ್ಕೆ ಮತಾಂತರಾವದಂತೆ ಆಗುತ್ತದೆ. ಡಿ. ೩೧ರಂದು ರಾತ್ರಿ ಎಲ್ಲೆಡೆಗಳಲ್ಲಿ ಫಿಲ್ಮ್ ಡ್ಯಾನ್ಸ್, ಪಟಾಕಿಗಳ ಅಬ್ಬರ, ಮದ್ಯ ಸೇವನೆ ಇವುಗಳಿಂದ ಡಿ.೧ ಭಯಾನಕವಾಗಿ ಪರಿಣಮಿಸುತ್ತದೆ. ಅಲ್ಲಲ್ಲಿ ಗಲಾಟೆ ನಡೆದು ಪೊಲೀಸರಿಗೆ ನಿಯಂತ್ರಿಸಲಾರದಷ್ಟು ದೊಡ್ಡಮಟ್ಟದಲ್ಲಿ ಗಲಭೆಗಳೂ ನಡೆಯುತ್ತದೆ.
ಹಿಂದೂಗಳು ಆಚರಿಸುವ ಪ್ರತಿಯೊಂದು ಧಾರ್ಮಿಕ ಹಬ್ಬಗಳಲ್ಲಿ ದೇವರ ಸಾನಿಧ್ಯವರುತ್ತದೆ. ಧಾರ್ಮಿಕ ಹಬ್ಬಗಳಿಂದ ಮನಸ್ಸು ಸಾತ್ವಿಕಗೊಂಡು ಆಧ್ಯಾತ್ಮಿಕ ಲಾಭವಾಗುತ್ತದೆ. ಹಿಂದೂ ಧಾರ್ಮಿಕ ಹಬ್ಬಗಳಲ್ಲಿ ತ್ಯಾಗ, ಸಂಯಮ, ದೇವರ ನಾಪಜಪ ಮುಂತಾದುವಗಳು ಇರುವುದರಿಂದ ವ್ಯಕ್ತಿಗೆ ಮತ್ತು ಪ್ರಕೃತಿಗೆ ತುಂಬಾ ಲಾಭವಾಗುತ್ತದೆ. ಸಂಸ್ಕೃತಿಯ ಆಚರಣೆ ಹಿಂದೂ ಹಬ್ಬಗಳಲ್ಲಿ ಕಂಡುಬರುತ್ತದೆ.
ಡಿ.೩೧ರ ಆಚರಣೆಯ ಹಾನಿಯನ್ನು ನಮ್ಮ ಯುವಜನಾಂಗಕ್ಕೆ ಹೇಳಿಕೊಡುವ ಪರಿಪಾಠ ಬೆಳೆಯಬೇಕಾಗಿತ್ತು. ಆದರೆ ಸರಕಾರ ಮಾತ್ರ ಜಾತ್ಯತೀತ ಎಂಬ ನಿಲುವಿಗೆ ಬಿದ್ದು ಯಾರಿಗೂ ಧಾರ್ಮಿಕ ಶಿಕ್ಷಣವನ್ನು ಕಲಿಸುತ್ತಿಲ್ಲ. ಇದರಿಂದ ಯುವಜನಾಂಗ ದಿಕ್ಕೆಟ್ಟು ಹೋಗುತ್ತಿದೆ. ಭಾವೀ ಪೀಳಿಗೆಗೆ ಪಾಶ್ಚಾತ್ಯ ಆಚರಣೆ ಅನಾಗರಿಕವೆಂದು ಅನಿಸುವುದೇ ಇಲ್ಲ. ಹಾಗಾಗಿ ಜನವರಿ ೧ರಂದು ನಡೆಯುವ ಸಂಸ್ಕೃತಿಯ ನಾಶವನ್ನು ತಡೆಗಟ್ಟಲು ಹಿಂದೂಗಳು ಪ್ರಯತ್ನಿಸಲೇಬೇಕು.
ಆದುದರಿಂದ ಹಿಂದೂಗಳು ಹೊಸವರ್ಷವನ್ನು ಯುಗಾದಿಯಂದೇ ಆಚರಿಸಬೇಕು. ಚೈತ್ರ ಶುಕ್ಲ ಪಾಡ್ಯದ ದಿನವು ಈ ಸೃಷ್ಟಿಯ ನಿರ್ಮಾಣದ ದಿನವಾಗಿದೆ. ಹಾಗಾಗಿ ಈ ದಿನ ನಿಜವಾದ ವರ್ಷಾರಂಭದ ದಿನವಾಗಿದೆ. ಆದರೆ ಪಾಶ್ಚಾತ್ಯರ ಅಂಧಾನುಕರಣೆಯಾದ ಜನವರಿ ೧ನ್ನು ಹೊಸವರ್ಷವನ್ನಾಗಿ ಆಚರಿಸುವುದುಹಿಂದೂಗಳ ಒಂದು ದಿನದ ಮತಾಂತರವೇ ಆಗಿದೆ.
ಪಾಶ್ಚಾತ್ಯರ ಭೋಗ ಮತ್ತು ಧರ್ಮ ಮತ್ತು ಸಂಸ್ಕೃತಿಯ ಮೇಲಾಗುವ ಹಾನಿಯನ್ನು ತಡೆಗಟ್ಟಲು ಜನವರಿ ೧ ರಂದು ಯಾವುದೇ ಹಿಂದೂವಿಗೆ ಹೊಸವರ್ಷದ ಶುಭಾಶಯಗಳನ್ನು ಹೇಳಬಾರದು. ಫೇಸ್‌ಬುಕ್‌ನಂತಹಾ ಜಾಲತಾಣಗಳಲ್ಲೂ ಜ.೧ರ ಶುಭಾಷಯ ಸಲ್ಲಿಸಬಾರದು. ಯುಗಾದಿಯಂದು ಆದಷ್ಟು ಹೆಚ್ಚು ಹಿಂದೂಗಳಿಗೆ ಶುಭಾಶಯ ಪತ್ರ, ದೂರವಾಣಿ, ಎಸ್‌ಎಂಎಸ್ ಮುಂತಾದವುಗಳ ಮೂಲಕ ಹೊಸವರ್ಷದ ಶುಭಾಶಯಗಳನ್ನು ನೀಡಬಹುದು.

ಮಾಹಿತಿ ಹಕ್ಕಿನಿಂದ ಕೇಳಲಾದ ಆರು ಪ್ರಶ್ನೆಗಳಿಗೆ ಸಚಿವರಿಗೆ ಉತ್ತರಿಸಲಾಗಿಲ್ಲಾ...


ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ರಾಜ್ಯದ ಸಚಿವರಿಗೆ ಆರು ಪ್ರಶ್ನೆಗಳನ್ನು ಕೇಳಲಾಗಿತ್ತು. ಇದರಲ್ಲಿ ಆರು ಶಾಸಕರು ಅಪೂರ್ಣ ಉತ್ತರವನ್ನು ನೀಡಿದ್ದರೆ ಉಳಿದ ೧೬ ಶಾಸಕರು ಉತ್ತರ ನೀಡುವ ಗೋಜಿಗೆ ಹೋಗಿಲ್ಲ. ಸಚಿವರ ಈ ಕಾರ್ಯವೈಖರಿಯ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಲ್ಲದೆ ಕೆಲವು ಶಾಸಕರು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯನ್ನು ರದ್ದುಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆರು ಪ್ರಶ್ನೆಗಳು
ಪ್ರಶ್ನೆ೧: ಸಚಿವರಾದ ನಂತರ ಕಳೆದ ಆರು ತಿಂಗಳಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಯಾವ ಯಾವ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿರುವಿರಿ ಎಂಬ ಬಗ್ಗೆ ದಿನಾಂಕ ಹಾಗೂ ಸಮಯಗಳೊಂದಿಗೆ ವಿವರ ನೀಡುವುದು.
ಪ್ರಶ್ನೆ ೨: ಆರು ತಿಂಗಳ ಅವಧಿಯಲ್ಲಿ ನಡೆಸಲಾದ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಕಂಡುಬಂದಿರುವ ಲೋಪದೋಷಗಳು ಹಾಗೂ ಇವುಗಳನ್ನು ಸರಿಪಡಿಸಲು ಮತ್ತು ಇಲಾಖೆಯಲ್ಲಿ ಸುಧಾರಣೆ ತರಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸಭೆಗಳ ದಿನಾಂಕ ಮತ್ತು ಸ್ಥಳಗಳೊಂದಿಗೆ ವಿವರ ನೀಡುವುದು:
ಪ್ರಶ್ನೆ೩: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನಾಂಕದಿಂದ ಇಲ್ಲಿಯವರೆಗೆ ಸಾರ್ವಜನಿಕರಿಂದ ತಮ್ಮ ಕಚೇರಿಯಲ್ಲಿ ಸ್ವೀಕರಿಸಲಾದ ಅರ್ಜಿಗಳ ಸಂಖ್ಯೆ ಹಾಗೂ ಇವುಗಳಲ್ಲಿ ವಿಲೇವಾರಿ ಮಾಡಲಾದ ಅರ್ಜಿಗಳು ಮತ್ತು ಬಾಕಿ ಉಳಿದ ಅರ್ಜಿಗಳ ಹಾಗೂ ಈ ರೀತಿ ಬಾಕಿ  ಇರುವುದಕ್ಕೆ ಇರುವ ಕಾರಣಗಳ ವಿವರ ನೀಡುವುದು.
ಪ್ರಶ್ನೆ೪: ಉಸ್ತುವಾರಿ ಸಚಿವರಾಗಿರುವ ಜಿಲ್ಲೆಗಳಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಮತ್ತು ೨೦ ಮತ್ತು ೧೫ ಅಂಶಗಳ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿರುವ ದಿನಾಂಕ ಹಾಗೂ ಸ್ಥಳಗಳೊಂದಿಗೆ ವಿವರ ನೀಡುವುದು.
ಪ್ರಶನೆ೫: ಪಕ್ಷದ ಅಧ್ಯಕ್ಷರ ನಿರ್ದೇಶನದ ಪ್ರಕಾರ ತಾವುಗಳು ಪಕ್ಷದ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ದಿನಾಂಕಗಳ ವಿವರ ನೀಡುವುದು.
ಪ್ರಶ್ನೆ೬: ತಮ್ಮ ಕ್ಷೇತ್ರದ ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವಿವರ ಹಾಗೂ ಜನತಾ ದರ್ಶನ ನಡೆಸಿದ ಕಾರ್ಯಕ್ರಮಗಳ ವಿವರ ನೀಡುವುದು.
ಇದಕ್ಕೆ ಆರೋಗ್ಯ ಸಚಿವರಾದ ಯು.ಟಿ.ಖಾದರ್‌ರವರು ಆರು ಪ್ರಶ್ನೆಗಳಿಗೂ ಅಪೂರ್ಣವಾದ ಉತ್ತರ ನೀಡಿದ್ದಾರೆ. ಅಲ್ಲದೆ ಆಯಾ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುತ್ತಾರೆ ಎಂದಷ್ಟೆ ಹೇಳಿ ಉತ್ತರದಿಂದ ಜಾರಿಕೊಂಡಿದ್ದಾರೆ. ಅಲ್ಲದೆ ಸ್ವೀಕರಿಸದ ಅರ್ಜಿ ಹಾಗೂ ವಿಲೇವಾರಿಗೊಂಡ ಅರ್ಜಿಯ ಬಗ್ಗೆ ಹಾಗೂ ತಾವು ಭೇಟಿ ನೀಡಿದ ಸ್ಥಳದ ಬಗ್ಗೆ ಯಾವ ಮಾಹಿತಿಯನ್ನೂ ನೀಡಲಿಲ್ಲ. ಅಲ್ಲದೆ ಕೊನೆಯ ಪ್ರಶ್ನೆಗೆ ತನಗದು ಅನ್ವಯಿಸುವುದಿಲ್ಲ ಎಂದಷ್ಟೇ ಹೇಳಿದ್ದಾರೆ.
ವಸತಿ ಸಚಿವರಾದ ಅಂಬರೀಷ್‌ರವರು ಆಯಾಯ ಜಿಲ್ಲೆಗಳಿಗೆಗೆ ಭೇಟಿ ನೀಡಿದ ವಿವರಣೆಗಳನ್ನಷ್ಟೇ ನೀಡಿದ್ದಾರೆ. ಅಲ್ಲದೆ ಎರಡನೇ ಪ್ರಶ್ನೆಗೆ ಅಧಿಕಾರಗಳ ಜೊತೆ ಪ್ರತೀವಾರ ಚರ್ಚೆ ನಡೆಸುತ್ತೇನೆ ಎಂದಷ್ಟೇ ಹೇಳಿದ್ದಾರೆ.ಇವರು ಇದುವರೆಗೆ ೧೯೭೭ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಿದ್ದಾರೆ. ಅಲ್ಲದೆ ಕೆ.ಇ.ಡಿಬಿ ಸಭೆಗಳನ್ನು ಮಾಡಿದ್ದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ಸಂಬಧಿಸಿದವರಿಗೆ ಮಾಹಿತಿ ಹಕ್ಕು ಅಧಿನಿಯಮ ೨೦೦೫ರ ನಿಯಮ೬(೨) ದಂತೆ ವರ್ಗಾಯಿಸಲಾಗಿದೆ.  ಎಂದು ಎರಡು ಹಾಗೂ ನಾಲ್ಕನೇ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇವರು ಒಟ್ಟು ೬೨೪೬ ಅರ್ಜಿಗಳನ್ನು ಸ್ವೀಕರಿಸಿ ಎಲ್ಲವನ್ನೂ ವಿಲೇವಾರಿಗೊಳಿಸಿದ್ದಾರೆ. ಅಲ್ಲದೆ ಉಳಿದ ಪ್ರಶ್ನೆಗಳಿಗೆ ಉತ್ತರಿಸಲು ಹೋಗಲೇ ಇಲ್ಲ.
ಯುವಜನ ಸೇವೆ ಮೀನುಗಾರಿಕೆ ರಾಜ್ಯ ಸಚಿವರಾದ  ಅಭಯಚಂದ್ರ ಜೈನ್ ತಾವು ಭೇಟಿ ನೀಡಿದ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ. ಅಲ್ಲದೆ ಮೊದಲ, ನಾಲ್ಕನೇ ಪ್ರಶ್ನೆಗಳಿಗೆ  ವಿವರಗಳನ್ನು ಲಗತ್ತಿಸಲಾಗಿದೆ ಎಂಬಷ್ಟೇ ಉತ್ತರವನ್ನು ನೀಡಿದ್ದಾರೆ. ೧೬೮೪ ಅರ್ಜಿಗಳನ್ನು ವಿಲೇವಾರಿ ಗೊಳಿಸಲಾಗಿದ್ದು ಬಾಕಿ ಉಳಿಸಿಲ್ಲ. ಬಾಕಿ ಉಳಿದ ಪ್ರಶ್ನೆಗಳಿಗೆ ಅಪರಿಪೂರ್ಣ ಉತ್ತರ ನೀಡಿ ಕೈತೊಳೆದುಕೊಂಡಿದ್ದಾರೆ.
ಕೃಷಿ ಮಾರುಕಟ್ಟೆ, ಮತ್ತು ತೋಟಗಾರಿಕೆ ಸಚಿವರಾದ ಶ್ಯಾಮನೂರು ಶಿವಶಂಕರಪ್ಪ ಮೊದಲ ಪ್ರಶ್ನೆಗೆ ಸಭೆಯ ವಿವರಗಳನಷ್ಟೇ ನೀಡಿ ಉಳಿದ ಐದು ಪ್ರಶ್ನೆಗಳಿಗೆ ಉತ್ತರ ನೀಡದೆ ತಪ್ಪಿಸಿಕೊಂಡಿದ್ದಾರೆ.
ಜವಳಿ, ಬಂದರು, ಹಾಗೂ ಒಳನಾಡು  ಹಾಗೂ ಸಾರಿಗೆ ಸಚಿವರಾದ ಬಾಬುರಾವ್ ಚಿಂಚನಸೂರು ವಿವರಗಳನ್ನು ಪ್ರತ್ಯೇಕ ಅನುಬಂಧದಲ್ಲಿ ಲಗತ್ತಿಸಲಾಗಿದೆ ಎಂದಷ್ಟೇ ಉತ್ತರಿಸಿದ್ದಾರೆ. ಇವರು ೨೪೦೩ ಅರ್ಜಿಗಳನ್ನು ಸ್ವೀಕರಿಸಿ ಎಲ್ಲಾ ಅರ್ಜಿಗಳನ್ನು ವಿಲೇವಾರಿಗೊಳಿಸಿದ್ದಾರೆ. ಅಲ್ಲದೆ ನಾಲ್ಕನೇ ಪ್ರಶ್ನೆಗೆ ಇದುವರೆಗೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯನಿರ್ವಹಣಾಧಿಕಾರಿ ಯಾದಗಿರಿ ಜಿಲ್ಲೆ ಇಲ್ಲಿ ಜರಗಿಸಲಾಗಿದೆ. ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಷ್ಟೇ ಹೇಳಿ ಉಳಿದ ಯಾವ ಪ್ರಶ್ನೆಗಳಿಗೂ ಉತ್ತರಿಸಲು ಹೋಗಿಲ್ಲ. ವಕ್ಫ್ ಸಚಿವ ಖಮರುಲ್ ಇಸ್ಲಾಂರವರು ಕ್ರಮಕೈಗೊಳ್ಳಲಾಗಿದೆ ಎಂದಷ್ಟೆ ಉತ್ತರಿಸಿದ್ದಾರೆ. ಇದರಲ್ಲಿ ಉತ್ತರ ನೀಡದ ೧೬ ಸಚಿವರುಗಳ ಪೈಕಿ ಅರಣ್ಯ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥರೈ ಕೂಡಾ ಉತ್ತರಿಸಲು ಹೋಗಿಯೇ ಇಲ್ಲ.
ಆರು ತಿಂಗಳು ಕಳೆದರೂ ಅಭಿವೃದ್ಧಿಗೆ ಶ್ರಮಿಸದೇ ಇರುವ ಸಚಿವರ ಹೊಣೆಗೇಡಿತನ ಮಾಹಿತಿಹಕ್ಕಿನಿಂದ ಬಯಲಾಗಿದ್ದು ರಾಜ್ಯದ ಜನರು ಹಿಡಿಶಾಪ ಹಾಕಿದ್ದಾರೆ.
ವಿಶ್ವನುಡಿಸಿರಿ ವಿರಾಸತ್;
ಇದು ಬಂಡವಾಳಶಾಹಿಗಳ ಕೂಟವಲ್ಲ
ಆಳ್ವಾಸ್ ವಿಶ್ವ ನುಡಿಸಿರಿ ಬಂಡವಾಳಶಾಹಿಗಳ ಕೂಟವೆಂದು ಜರೆದವರೇ ಜಾಸ್ತಿ. ಅದಕ್ಕೆ ಪರ್ಯಾಯವಾಗಿ ಜನನುಡಿಯೂ ಮಾರ್ದನಿಸಿತು. ಆಳ್ವರದು ಶಿಕ್ಷಣದ ವ್ಯಾಪಾರೀಕರಣ ಎಂದೂ ಜರೆಯಲಾಯಿತು. ಆದರೆ ಕಾರ್ಯಕ್ರಮದ ರೂವಾರಿ ಮೋಹನ್ ಆಳ್ವರು ಇದೆಕ್ಕೆಲ್ಲಾ ಸೊಪ್ಪು  ಹಾಕದೆ ಕಾರ್ಯಕ್ರ ನಡೆಸಿಯೇ ಬಿಟ್ಟರು. ಅಲ್ಲಿ ಗೊಂದಲವಿರಲಿಲ್ಲ, ಎಡರುತೊಡರುಗಳಿರಲಿಲ್ಲ, ನಾಲ್ಕು ದಿನಗಳ ಶಿಸ್ತುಬದ್ಧ ಕಾರ್ಯಕ್ರಮವು ಆಳ್ವಾಸ್ ವೇದಿಕೆಯ ಹಲವಾರು ವೇದಿಕೆಗಳಲ್ಲಿ ನಡೆದೇ ಹೋಯ್ತು, ಆ ಮೂಲಕ ಕನ್ನಡ ಮನಸ್ಸುಗಳ ಭಾವನೆಗಳು ಒಂದಕ್ಕೊಂದು ಮೇಳಯಿಸಿದವು.
ಆಳ್ವಾಸ್ ನುಡಿಸಿರಿಯನ್ನು ಬಂಡವಾಳಶಾಹಿಗಳ ಕೂಟ, ನುಡಿಸಿರಿಯ ಆಶಯ ಮಾಯವಾಗಿದೆ, ಫ್ಯಾಸಿಸ್ಟ್ ಮನುವಾದಿಗಳು ಹೂಂಕರಿಸುತ್ತಿದ್ದಾರೆ ಎಂದೆಲ್ಲಾ ವಾದಿಸಿದಾಗ ಯಾವನೇ ಒಬ್ಬ ವ್ಯಕ್ತಿ ಬಿದ್ದುಹೋಗುವುದು ಸಾಮಾನ್ಯ. ಈ ಎಡಪಂಥೀಯ ಪ್ರಗತಿಪರ ಮನಸ್ಸುಗಳನ್ನು ನೋಯಿಸಿದರೆ ಆತನ ಒಂದು ಅಧ್ಯಾಯ ಮುಗಿದೇ ಹೋಯ್ತು ಎನ್ನುವ ಕಾಲವೊಂದಿತ್ತು. ಆದರೆ ಬದಲಾವಣೆಯ ಬಿರುಗಾಳಿ ಕನ್ನಡ ಸಾಹಿತ್ಯಕ್ಕೂ ತಗಲಿರುವಿದರಿಂದ ನುಡಿಸಿರಿಗೆ ಯಾವುದೇ ಪೆಟ್ಟು ನೀಡಲಿಲ್ಲ. ನೀವು ಏನು ಬೇಕಾದರೂ ಹೇಳಿ, ನಾನು ಕಾರ್ಯಕ್ರಮ ಮಾಡಿಯೇ ತೀರುತ್ತೇನೆ, ನೀವು ಜಪ್ಪಯ್ಯ ಎಂದರೂ ನಾನೇನೂ ಕಾರ್ಯಕ್ರಮ ನಿಲ್ಲಿಸುವುದಿಲ್ಲ, ಎಲ್ಲರನ್ನೂ ಸಂತುಷ್ಟರನ್ನಾಗಿಸುವುದು ಕಷ್ಟದ ಕೆಲಸ ಎಂಬುದು ಆಳ್ವರು ಹೇಳಿದ್ದಾರೆ, ಇದು ಪರೋಕ್ಷವಾಗಿ ಪ್ರಗತಿಪರರ ವಾದಕ್ಕೆ ಆಳ್ವರದು ಪ್ರತಿವಾದ ಎಂದು ಭಾವಿಸಲಾಗುತ್ತಿದೆ, ಒಟ್ಟಿನಲ್ಲಿ ಸಾಹಿತ್ಯ ಜಾತ್ರೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ.
ನುಡಿಸಿರಿಯ ಯಾವುದೇ ವೇದಿಕೆಗಳಲ್ಲೂ ಬಂಡವಾಳ ಶಾಹಿಗಳ ಕಾಣಲಿಲ್ಲ. ಉದ್ಯಮಪತಿಗಳು, ಕಾರ್ಮಿಕರನ್ನು ನಾಯಿಯಂತೆ ದುಡಿಸಿ ಸಂಬಳ ಕೊಡುವಾಗ ಮೂದಲಿಸುವವರಾಗಲೀ, ಸಾಫ್ಟ್‌ವೇರ್ ಕಂಪೆನಿಗಳಲ್ಲಿ ದುಡಿಯುವ ಕೋಟಿಗಟ್ಟಲೆ ಹಣ ಹೊಂದಿರುವ ವ್ಯಕ್ತಿಗಳಾಗಲೀ ಎಲ್ಲೂ ಕಂಡುಬರಲಿಲ್ಲ, ಬದಲಿಗೆ ತನ್ನ ಕಲೆಯೇ ಸರ್ವಸ್ವ, ಅದಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿಕೊಂಡು ಕೂಲಿಕಾರ್ಮಿಕರಿಗಿಂತಲೂ ಕಡೆಯಾಗಿ ಬದುಕುವ ಕಲಾವಿದರು ಕಂಡುಬಂದರು. ಅಲೆಮಾರಿಯಾಗಿ ತಿರುಗಾಡಿಕೊಂಡು ‘ತನ್ನ ಕಲೆ ಉಳಿದರೆ ಸಾಕಪ್ಪಾ, ಪ್ರೋತ್ಸಾಹಿಸುವವರು ಯಾರೂ ಇಲ ಎಂದು ಹೆಣಗಾಡುವ ಅಲೆಮಾರಿ ಡೊಂಬರು ಹೀಗೆ ಅಲ್ಲಿ ಕಂಡುಬಂದರು. ಈ ಸಾಹಿತ್ಯದಿಂದ ನಯಾಪೈಸೆಯೂ ಸಿಗುವುದಿಲ್ಲ, ಆದರೂ ಇದನ್ನು ಬಿಡಲಾಗುವುದಿಲ್ಲ, ಯಾರ ಕಾಲಿಗೂ ಬೀಳದ ತನ್ನ ಸಾಹಿತ್ಯ ಕೃಷಿಯನ್ನು ಎಲೆಮರೆಯ ಕಾಯಾಗಿ ಮಾಡಿಕೊಂಡು ಕನ್ನಡಮ್ಮನ ಸೇವೆ ಮಾಡುತ್ತಿರುವ ಬಡ ಸಾಹಿತಿಗಳು ಕಂಡುಬಂದರು. ಅಲ್ಲದೆ ವೆಸ್ಟರ್ನ್ ಸ್ಟೈಲಿಷ್‌ಗಳ ಮಧ್ಯೆ ನಾನೂ ಒಬ್ಬನಿದ್ದೇನೆ ಎಂದು ಸಾರಿ ಹೇಳುವಂತೆ ಕಾಣುವ ಜನಪದರು ಕಂಡುಬಂದರು. ಇದನ್ನೆಲ್ಲಾ ಅನುಭವಿಸಬೇಕು, ಸನಾತನ ಸಂಸ್ಕೃತಿ ಎಂದರೆ ಇಷ್ಟೆಲ್ಲಾ ಇದೆಯಪ್ಪಾ ಅಯ್ಯೋ ರಾಮ ಎಂದು ಕೀಳರಿಮೆ ಬದಿಗಿಟ್ಟು ಬಂದಿರುವ ಸಾವಿರಾರು ಮಂದಿ ಕಲಾಸಕ್ತರು ಬಂದಿದ್ದರು.
ಹಾಗಾದರೆ ಇದು ನಿಜವಾಗಿಯೂ ಬಂಡವಾಳ ಶಾಹಿಗಳ ಕೂಟವಲ್ಲ, ಶಿಕ್ಷಣದ ವ್ಯಾಪಾರೀಕರಣವೂ ಅಲ್ಲ, ಬಂಡವಾಳ ಹೂಡಿ ಹಣ ಮಾಡುವ ಲಕ್ಷಾಂತರ ಅವಕಾಶಗಳಿದ್ದರೂ ಅದನ್ನೆಲ್ಲಾ ಬದಿಗಿಟ್ಟು ಕನ್ನಡ  ಜನರು ಕನ್ನಡ ಮಾತಾಡಬೇಕು, ಹಿಂದಿನ ಸನಾತನ ಸಂಸ್ಕೃತಿ ಉಳಿಯಬೇಕು, ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು ಎಂಬ ದಿವ್ಯದೃಷ್ಟಿಯಿಂದಾಗಿ ಆಳ್ವಾಸ್ ನುಡಿಸಿರಿ ವಿಶ್ವಮಟ್ಟದಲ್ಲಿ ಅನಾವರಣಗೊಳ್ಳುತ್ತಿದೆ.
ಕನ್ನಡ ವಿಶ್ವ ಭಾಷೆಯಾಗಬೇಕಾದರೆ ಅದನ್ನು ಆಧುನೀಕತೆಗೆ ತಕ್ಕಂತೆ ಒಗ್ಗಿಸಬೇಕಾಗುತ್ತದೆ. ಇಷ್ಟರವರೆಗೆ ಕನ್ನಡ ಸಾಹಿತಿಗಳು, ಬಲ, ಎಡ ಎಂಬ ಜಿದ್ದಿಗೆ ಬಿದ್ದು ಬೀದಿ ಕಾಳಗ ಮಾಡಿದ್ದೇ ಹೆಚ್ಚು. ಕನ್ನಡ ಎಷ್ಟರ ಮಟ್ಟಿಗೆ ಕೊಚ್ಚೆಯ ತಿಪ್ಪೆಗುಂಡಿಯಾಗಿದೆಯೆಂದರೆ ಬೀದಿಯಲ್ಲಿ ಮೈಕ್ ಇಟ್ಟು ಒಟ್ರಾಸಿ ಬಾಯಿಗೆ ಬಂದಂತೆ ಅರಚಿ ತನ್ನ ತೀಟೆ ತೀರಿಸುವ ಮಟ್ಟಿಗೆ ದುರವಸ್ಥೆ ಪಡುತ್ತಿದೆ. ಇದಕ್ಕೆಲ್ಲಾ ನಮ್ಮ ಕನ್ನಡ ಸಾಹಿತಿಗಳೇ ಕಾರಣವೆಂದು ಸ್ವಲ್ಪ ಮತಿ ಇದ್ದವನಿಗೂ ಗೊತ್ತಾಗುತ್ತೆ ಬಿಡಿ. ಬೆಂಗಳೂರಿನಲ್ಲೊಂದು ಸೈಟ್ ಪಡೆಯುವುದಕ್ಕೋಸ್ಕರವೇ ಬರೆಯುವವರಿಗೇನೂ ನಮ್ಮಲ್ಲಿ ಕೊರತೆ ಇಲ್ಲ, ಯಾವ ರಾಜಕೀಯ ಪುಡಾರಿಗಿಂತಲೂ ಕಡಿಮೆ ಇರದ ಸಾಹಿತಿ ವರ್ಗದಿಂದಲೇ ಇಂದು ಕನ್ನಡ ಗಬ್ಬೆನ್ನುತ್ತಿದೆ. ಇದನ್ನೆಲ್ಲಾ ದಾಟಿ ಬರಬೇಕಾದರೆ ಕನ್ನಡದ ವಿಶಿಷ್ಠ ಶಕ್ತಿ ಇಡೀ ಜಗತ್ತಿಗೆ ಮನವರಿಕೆಯಾಗಬೇಕು.
ಇದನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸಿದ ಆಳ್ವರು ಬೇರೆಯದೇ ರೀತಿಯಲ್ಲಿ ಚಿಂತಿಸಿದರು. ಅವರಿಗೆ ಬಾಯಿಗೆ ಬಂದಂತೆ ಬರೆದು ರಾಜಕೀಯ ಮಾಡಲು ತಿಳಿದಿಲ್ಲ. ಕನ್ನಡವನ್ನು ವೈಭವೀಕರಿಸುವ ನಿಟ್ಟಿನಲ್ಲಿ ಎಲ್ಲಾ ಸಮಾನ ಮನಸ್ಕರನ್ನು ಒಟ್ಟು ಸೇರಿಸಿದರ ಪರಿಣಾಮವಾಗಿ ಇಂದು ನುಡಿಸಿರಿಯಾಗಿ ಕನ್ನಡ ಮನಸ್ಸಿನ ಆಶಯ ಇಂದು ಬಿಚ್ಚಿಕೊಳ್ಳುತ್ತಿದೆ,
ನುಡಿಸಿರಿಯ ಹತ್ತನೇ ವರ್ಷದ ಸಂಭ್ರಮದಲ್ಲಿ ಆಳ್ವಾಸ್ ಕಂಗೊಳಿಸುತ್ತಿದೆ. ಈ ಬಗ್ಗೆ ಆಶಯ ಭಾಷಣ ಮಾಡಿದ ನುಡಿಸಿರಿಯ ಸಮ್ಮೇಳನಾಧ್ಯಕ್ಷ ಬಿ.ವಿ. ವಿವೇಕ ರೈ ಕನ್ನಡ ವಿಶ್ವಭಾಷೆಯಾಗಬೇಕಾದರೆ ಅದಕ್ಕೆ ಒಂದು ಜಾಗತಿಕ ಶಿಷ್ಟತೆ ಬೇಕಾಗುತ್ತದೆ, ಅದುವೇ ಯುನಿಕೋಡ್, ಈ ಭಾಷೆ ಯುನಿಕೋಡ್ ಶಿಷ್ಟತೆಯನ್ನು ಕಡ್ಡಾಯವಾಗಿ ಪ್ರಕಟಿಸುವುದು ಮತ್ತು ಕನ್ನಡದ ಎಲ್ಲಾ ಕೆಲಸಗಳು ಹಾಗೂ ಅಂತರ್ಜಾಲ ತಾಣಗಳು ಯೂನಿಕೋಡಲ್ಲೇ ಇರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಯೂನಿಕೋಡ್ ಶಿಷ್ಠತೆ ಇರದಿರುವುದರಿಂದ ಪ್ರಪಂಚದ ಎಲ್ಲಾ ಭಾಷೆಗಳನ್ನು ಒಂದೇ ಕಡತದಲ್ಲಿ ಸಂಗ್ರಹಿಸಿಡಲಾಗುತ್ತಿಲ್ಲ.
ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸುವುದು ಅನಿವಾರ್ಯ, ಅದಲ್ಲದೆ ಅನುವಾದ ಕ್ಷೇತ್ರದಲ್ಲೂ ಕನ್ನಡ ಮುಂದುವರಿಯಬೇಕು ಎಂದು ವಿವೇಕ್ ಆಶಯ ವ್ಯಕ್ತಪಡಿಸಿದ್ದಾರೆ. ಇದು ಕನ್ನಡದ ಬಗ್ಗೆ ಯೋಗ್ಯ ರೀತಿಯಲ್ಲಿ ಯೋಚಿಸುವವರ ಎಲ್ಲರ ಯೋಚನೆಯೂ ಆಗಿದೆ,
ನುಡಿಯೇ ನಿಜವಾದ ಸಿರಿ!
ನಿಜವಾಗಿ ಇಂದು ನುಡಿಯೇ ನಿಜವಾದ ಸಿರಿ. ಸೊಗಸಾಗಿ ನುಡಿಯಲು ಬರುವವನು ನಿಜವಾದ ಸಿರುವಂತ. ಈ ಸಿರಿತನಕ್ಕೆ ಸಾಕ್ಷಿಯಾಗುತ್ತಿದೆ ನುಡಿಸಿರಿ. ಈ ಬಾರಿ ಹತ್ತನೇ ವರ್ಷದ ಸಂಭ್ರಮಾಚರಣೆಯಲ್ಲಿ ಮಿಂದೇಳುತ್ತಿರುವ ನುಡಿಸಿರಿಗೆ ಹತ್ತನೇ ವರ್ಷದ ಸಂಭ್ರಮ. ಜೊತೆಗೆ ವಿರಾಸತ್ ಕೂಡಾ ಜೊತೆಯಾಗಿ ಹೆಜ್ಜೆ ಹಾಕುತ್ತಿದೆ. ಆದುದರಿಂದಲೇ ಇದು ವಿಶ್ವನುಡಿಸಿರಿ ವಿರಾಸತ್ ಆಗುತ್ತಿದೆ, ಗುರುವಾರದಿಂದ ಮೊದಲ್ಗೊಂಡು ಭಾನುವಾರದವರೆಗೆ ಮೂಡಬಿದಿರೆ ಕೃಷಿಮಯ, ಸಂಸ್ಕೃತಿಮಯ, ಕನ್ನಡಮಯವ.... ವಾವ್.
ವಿದ್ಯಾಗಿರಿಯ ಒಂಬತ್ತು ವೇದಿಕೆಗಳು ಒಂದಲ್ಲಾ ಒಂದು ರೀತಿಯ ಕಲರವದಿಂದ ಕಂಗೊಳಿಸುತ್ತಿದೆ. ಅಲ್ಲದೆ ಬಂದ ಅತಿಥಿಗಳನ್ನು ಸ್ವಾಗತಿಸಲು ಶಿಸ್ತಿನಿಂದ ಕೆಲಸ ಮಾಡುತ್ತಿರುವ ವಿದ್ಯಾರ್ಥಿ ಪ್ರತಿನಿಧಿಗಳು ನಿದ್ದೆ ಬಿಟ್ಟು ಸತ್ಕರಿಸುತ್ತಿದ್ದಾರೆ.
ಅಲ್ಲದೆ ಪುಸ್ತಕ ಮಳಿಗೆಗಳು ಇರುವ ಜೊತೆಗೆ ಇನ್ನೂ ವಿಶಿಷ್ಠವೆಂದರೆ ಕೆಲವರು ಕಡಿಮೆ ಬೆಲೆಗೆ ಹಳೆಯ ಪುಸ್ತಕಗಳನ್ನು ಮಾರುತ್ತಿದ್ದಾರೆ. ಜನರು ಇವುಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಶಿವರಾಮ ಕಾರಂತ ಸಭಾಂಗಣದಲ್ಲಿ ನಿಂತು ದೃಷ್ಟಿ ಹರಿಸಿದರೆ ನೋಡಲು ಕಣ್ಣೇ ಸಾಲದು. ಯಾವುದನ್ನು ಹಿಡಿಯುವುದು ಯಾವುದನ್ನು ಬಿಡುವುದು? ಪರಶುರಾಮ, ನಾಟ್ಯಗಣಪತಿ, ಭಗವಾನ್ ಬಾಹುಬಲಿ, ಕೋಟಿಚೆನ್ನಯರು ಶಿಸ್ತಾಗಿ ನಿಂತು ಕಾರ್ಯಕ್ರಮಕ್ಕೆ ಮೆರುಗನ್ನು ನೀಡುತ್ತಿದ್ದಾರೆ, ಜೊತೆಗೆ ಕಲಾ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ , ತರಕಾರಿ ಪ್ರದರ್ಶನ, ಆಹಾರೋತ್ಸವ.... ಒಂದೇ ಎರಡೇ... ವಿವರಿಸಲಸದಳ.
ಯಾವ ಪತ್ರಿಕೆಗೂ ಕಮ್ಮಿ ಇಲ್ಲದ ಆಳ್ವಾಸ್ ಮಾಧ್ಯಮ.
ಆಳ್ವಾಸ್ ಕಾಲೇಜಿನ ಪತ್ರಿಕೋಧ್ಯಮ ವಿದ್ಯಾರ್ಥಿಗಳೇ ರೂಪಿಸಿದ ಆಳ್ವಾಸ್ ಮಾಧ್ಯಮ ಪತ್ರಿಕೆ ಯಾವ ಕನ್ನಡ ದಿನಪತ್ರಿಕೆಗಿಂತಲೂ ಕಡಿಮೆ ಇಲ್ಲ. ಪ್ರಬುದ್ಧ ಶೈಲಿಯ ಬರಹ, ಎಲ್ಲಾ ಸುದ್ದಿಯನ್ನು ಒಂದುಗೂಡಿಸುವುದು ಮಕ್ಕಳ ಭವಿಷ್ಯದ ಬಗ್ಗೆ ಈಗಲೇ ಅಂದಾಜಾಗುತ್ತದೆ. ಪತ್ರಿಕೆಗೆ ಬೇಕಾದ ವಿದ್ಯಾರ್ಥಿಗಳನ್ನು ಆಳ್ವಾಸ್ ರೂಪಿಸುತ್ತಿದೆ. ಜೊತೆಗೆ ಪತ್ರಕರ್ತರರನ್ನು ಆತ್ಮೀಯತೆಯಿಂದ ಬರಮಾಡುತ್ತಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳ ನಡತೆ ಎಲ್ಲರನ್ನೂ ಸೂರೆಗೊಂಡಿದೆ.
ಎಲ್ಲರೆದುರೇ ತನ್ನ ಸಂಗಡಿಗನ ತಲೆ ತುಂಡರಿಸಿದ ಭೂಪ
ಜನರಲ್ಲಿ ತಮಾಷೆಯ ಮಾಡ್ತಾ ಮಾಡ್ತಾ ಭೂಪನೊಬ್ಬ ತನ್ನ ತಲೆಯನ್ನು ತುಂಡುಮಾಡಿ ಅದನ್ನು ಕೈಯ್ಯಲ್ಲಿ ದೂರ ಮಾಡಿದ. ನಂತರ ಇದಕ್ಕೆ ಕಂಬಳಿ ಹೊದ್ದ. ಜನರು ಬೆಕ್ಕಸಬೆರಗಾಗಿ ನೋಡುವುದರಲ್ಲೇ ಬಾಕಿ. ಕೊನೆಗೆ ಜನರು ಒತ್ತಾಯಪಡಿಸಿದ್ದರಿಂದ ಆತನ ತಲೆಯನ್ನು ಮರುಜೋಡಿಸಿದ. ಗಾಬರಿಯಾಗಬೇಡಿ. ಇದು ರಾಜಸ್ತಾನದ ಅಲೆಮಾರಿ ಜಾದುಗಾರ್ ಫಾರುಖ್ ಶಾಹ ಮಾಡಿದ ಝಳಕ್. ದೂರದ ರಾಜಸ್ತಾನದಿಂದ ಬಂದು ನುಡಿಸಿರಿಗೆ ವಿಶೇಷ ಮೆರುಗನ್ನು ನೀಡಿದ್ದ ಈತ ಎಲ್ಲರ ಉಸಿರುಬಿಗಿಹಿಡಿಯುವಂತೆ ಮಾಡಲು ಸಫಲನಾಗಿದ್ದ.
ಇಷ್ಟು ಮಾತ್ರವಲ್ಲ ಜನಪದ ಶೈಲಿಯ ವೇಷ  ಧರಿಸಿದವರು, ಡೊಳ್ಳುಕುಣಿತ, ಕಂಸಾಲೆ ನೃತ್ಯ, ಪುರುಲಿಯ ವೇಷಗಳು, ಪಂಜಾಬಿನ ಭಲ್ಲೇಗಳು, ಮಣಿಪುರದ ಚೆಲುವೆಯರು. ಹೀಗೆ ಕನ್ನಡವನ್ನು ಕಟ್ಟಲು ಎಷ್ಟು ಪರಿಶ್ರಮ ಪಟ್ಟಿದ್ದಾರೆ ಆಳ್ವರು? ಇದೆಲ್ಲಾ ವಿರೋಧಿಗಳಿಗೆ ಹೇಗೆ ಅರ್ಥವಾಗಬೇಕು? ಯಾಕೆಂದರೆ ಕಟ್ಟುವುದು ಕಷ್ಟ ಬೀಳಿಸುವುದು ಸುಲಭ.
ಬರಗೂರು ಗುರ್....
ಆಳ್ವಾಸ್ ವಿಶವ ನುಡಿಸಿರಿ ಕೋಟಿಗಟ್ಟಲೆ ಸಂಪತ್ತಿನ ವೈಭವೀಕರಣ ಕಿರಿಕಿರಿ ಉಂಟುಮಾಡಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ನುಡಿಸಿರಿ ವಿರುದ್ಧ ಗುರ್ ಎಂದಿರುವುದು ಈ ಸಾರಿಯ ವಿಶ್ವನುಡಿಸಿರಿಯಲ್ಲಿ ಕಂಡುಬಂದ ಅಚ್ಚರಿದಾಯಕ ಬೆಳವಣಿಗೆ. ಅಲ್ಲದೆ ‘ಸಮಾಜ ಎಂಬ ವಿಷಯದ ಬಗ್ಗೆ ಮಾತನಾಡಬೇಕಾಗಿದ್ದ ಬರಗೂರು ಗೈರು ಹಾಜರಾಗಿ ತನ್ನ ಅಸಮಾಧಾನ ಪ್ರದರ್ಶಿಸಿದರು. ನುಡಿಸಿರಿಯ ಮೊದಲ ಅಧ್ಯಕ್ಷನಾಗಿದ್ದ ನಾನು ಅಲ್ಲಿ ನನ್ನ ವಿವರಗಳನ್ನು ಮಂಡಿಸಿದ್ದೆ. ಅದರ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿದ್ದವು. ಆದರೆ ಈ ಬಾರಿಯ ನುಡಿಸಿರಿಯ ಮೂಲ ಆಶಯಕ್ಕೆ ಧಕ್ಕೆ ಉಂಟಾಗಿದೆ . ಜನಪರ ವಿಚಾರಗಳಿಗೆ ಆಸ್ಪದ ನೀಡಲಿಲ್ಲ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಾಕಷ್ಟು ಸುದ್ದಿ ಮಾಡಿದ್ದರೂ ಚರ್ಚೆ ನಡೆಯಲಿಲ್ಲ.  ನನಗೆ ಆ ಪ್ರಕರಣದ ಬಗ್ಗೆ ಪ್ರಸ್ತಾಪಿಸುವ ಇರಾದೆ ಇತ್ತು ಎಂದು ನುಡಿಸಿರಿ ಬಗ್ಗೆ ಬಂಡಾಯವೆದ್ದಿದ್ದಾರೆ. ಆದರೆ  ಬರಗೂರು ನುಡಿಸಿರಿಯ ಮೊದಲ ದಿನ ಸನ್ಮಾನ ಸ್ವೀಕರಿಸಿದ್ದು ಮಾತ್ರ ವಿಶೇಷ. ಇದು ಆರಂಭವೆಂಬಂತೆ ಕಂಡುಬರುತ್ತಿದ್ದು, ನುಡಿಸರಿ ಮತ್ತು ಜನನುಡಿ ಪ್ರತಿಸ್ಪರ್ಧಿಯಾಗುವ ಸ್ಪಷ್ಟ ಲಕ್ಷಣ ಎನ್ನಲಾಗುತ್ತಿದೆ,
ಮಾತು ಮುಗಿಸುವ ಮುನ್ನ:
ಕನ್ನಡ ಸಾಹಿತ್ಯಲೋಕ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದ್ದರೂ, ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೆಪಮಾತ್ರಕ್ಕೆ ಸಿಕ್ಕಿದೆ. ಇದನ್ನು ಗಳಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ.