Friday, August 10, 2018

ಸಾವರ್ಕರ್ 21 ದಿನಗಳ ಕಾಲ ಉಪವಾಸ ಹೂಡಿ ದೇಹತ್ಯಾಗ ಮಾಡಿದ್ದು ಯಾಕೆ?

ವಿನಾಯಕ ದಾಮೋದರ ಸಾವರ್ಕರ್.... ಇಡೀ ಇಂಗ್ಲೆಂಡ್ ಸಾಮ್ರಾಜ್ಯವನ್ನೇ ಗಡಗಡ ನಡುಗುವಂತೆ ಮಾಡಿದ,  ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಬದುಕನ್ನು, ತಮ್ಮ ಇಡೀ ಕುಟುಂಬವನ್ನೇ ಸಮರ್ಪಿಸಿದ, ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿತ್ತು ಗೊತ್ತಾ? ಛೇ ಇಂತಹಾ ಕಷ್ಟ ಯಾರಿಗೂ ಬರಬಾರದಿತ್ತು... ಕೊನೆಗೆ 21 ದಿನಗಳ ಕಾಲ ಉಪವಾಸ ಮಾಡಿಕೊಂಡು ದೇಹವನ್ನೇ ತ್ಯಾಗ ಮಾಡಿದರು ಸಾವರ್ಕರ್. 

ಛೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಸೇನಾನಿಯನ್ನು  ನಮ್ಮಿಂದ ಉಳಿಸಲು ಸಾಧ್ಯವಾಗಲಿಲ್ಲವಲ್ಲ!

ಅಘಾತಗಳ ಮೇಲೆ ಅಘಾತ...!

ವಿದೇಶಕ್ಕೆ ತೆರಳಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಸಾವರ್ಕರ್ ನಿಜವಾಗಿಯೂ ಅಪ್ರತಿಮ ದೇಶಭಕ್ತ. ವಿದೇಶಕ್ಕೆ ತೆರಳಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿ ದೇಶಭಕ್ತಿ ಪ್ರದರ್ಶಿಸಿದ್ದಕ್ಕಾಗಿ ಇಂಗ್ಲೆಂಡ್ ಅವರಿಗೆ ಇಡೀ ಜಗತ್ತಲ್ಲೇ ಯಾರಿಗೂ ಕೊಡದ ಭೀಕರ ಶಿಕ್ಷೆಯನ್ನು ನೀಡಿತ್ತು.  ಅದೇ 50 ವರ್ಷಗಳ ಕರಿನೀರಿನ ಶಿಕ್ಷೆ.  ಕರಿನೀರಿನ ಶಿಕ್ಷೆ ಎಂದರೆ ಅದನ್ನು ಸಾವಿನ ಮನೆ ಎಂದೇ ಕರೆಯಲಾಗುತ್ತಿತ್ತು. ಶಿಕ್ಷೆಯ ಹೆಸರು ಕೇಳಿದರೇನೇ ಹೃದಯಾಘಾತಕ್ಕೊಳಗಾಗಬೇಕು...! ಹೊರಗಿನ ಯಾವ ಸಂಪರ್ಕವೂ ಇಲ್ಲದೆ ನಾಲ್ಕು ಗೋಡೆಗಳ ಕತ್ತಲ ಕೋಣೆಯಲ್ಲಿ ಏಕಾಂಗಿಯಾಗಿರುವ ಎದೆಬಿರಿಯುವ ಶಿಕ್ಷೆಯನ್ನು ನೀಡಿದರೂ ವಿಚಲಿತರಾಗದ ಸಾವರ್ಕರ್ ಜೋರಾಗಿ ಗಹಗಹಿಸಿ ನಕ್ಕಿದ್ದರಂತೆ... ಯಾಕೆ ಗೊತ್ತಾ? 50 ವರ್ಷಗಳ ಕಾಲ ನಿಮ್ಮ ಸರಕಾರ ಇದ್ದರೆ ತಾನೆ? ಸಾವರ್ಕರ್ಗೆ ದೇಶ ಶೀಘ್ರ ಸ್ವಾತಂತ್ರ್ಯಗೊಂಡು ಸ್ವತಂತ್ರ್ಯ ಭಾರತದಲ್ಲಿ ನೆಮ್ಮದಿಯಿಂದ ಇರಬಹುದೆಂದು ಎನಿಸಿದ್ದರು. ಆದರೆ ಸ್ವಾತಂತ್ರ್ಯಗೊಂಡ ಬಳಿಕ ನೆಹರೂ ಸರಕಾರ ಅವರನ್ನು ಯಾವ ರೀತಿ ನಡೆಸಿತ್ತು ಅಂದರೆ ಖಂಡಿತಾ ನಿಮ್ಮ ಕಣ್ಣಲ್ಲಿ ಧಾರಾಕಾರ ನೀರು ಸುರಿಯುವುದು ಖಂಡಿತಾ!!!

ಇಟಲಿ ರಾಷ್ಟ್ರಭಕ್ತ ಮ್ಯಾಝಿನಿಯನ್ನು ಆದರ್ಶನಾಯಕನನ್ನಾಗಿ ಇಟ್ಟುಕೊಂಡಿದ್ದ ಸಾವರ್ಕರ್ ಮ್ಯಾಝಿನಿ ಚರಿತ್ರೆಯನ್ನು ವೀರಾವೇಶದ ನುಡಿಯಲ್ಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರೇಪಣೆ ನೀಡುವ ಶೈಲಿಯಲ್ಲಿ ಬರೆದು ಭಾರತಕ್ಕೆ ಕಳುಹಿಸಿದ್ದರು.  ಸಾವರ್ಕರ್ರ ಬರಹದ ಶೈಲಿ ಇಡೀ ದೇಶದಲ್ಲೇ ಕ್ರಾಂತಿಗೆ ಪ್ರೇರಣೆ ನೀಡಬಹುದೆಂದು ಬೆಚ್ಚಿದ ಇಂಗ್ಲೆಂಡ್ ಸರಕಾರ ಅವರು ಬರೆದ `ಮ್ಯಾಝಿನಿ' ಪುಸ್ತಕ ಮುಟ್ಟುಗೋಲು ಹಾಕಲ್ಪಟ್ಟಿತು.

ಛಲ ಬಿಡದ ಸಾವರ್ಕರ್ `ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ -1857' ಎಂಬ ಕೃತಿಯನ್ನು ಬರೆದರು.  ಈ ಪುಸ್ತಕವನ್ನು ಅವರ ಅಣ್ಣ ಗಣೇಶ(ಬಾಬಾ) ಸಾವರ್ಕರರು ಪ್ರಕಟಿಸಲು ಸಾಕಷ್ಟು ಯತ್ನಿಸಿದರು. ಆದರೆ ಮಾಹಿತಿ ಅರಿತ ಇಂಗ್ಲೆಂಡ್ ಆ ಪುಸ್ತಕವನ್ನು ಮುಟ್ಟುಗೋಲು ಹಾಕಿಸಲು  ಇಂಗ್ಲೆಂಡ್ ಮುದ್ರಾಣಯದ ಮೇಲೆ ನಿರಂತರವಾಗಿ ದಾಳಿ ನಡೆಸಿತು. ಆದರೆ ಎಷ್ಟು ದಾಳಿ ನಡೆಸಿದರೂ ಪುಸ್ತಕದ ಹಸ್ತಪ್ರತಿ ಸಿಗಲಿಲ್ಲ. ಕೊನೆಗೆ ಇದನ್ನು ಫ್ರಾನ್ಸ್‍ಗೆ ರವಾನಿಸಲಾಯಿತು. ಭಾರತೀಯ ಭಾಷೆಯಲ್ಲಿರುವ ಪುಸ್ತಕ ಫ್ರಾನ್ಸ್‍ನಲ್ಲಿ ಮುದ್ರಣವಾಗದ ಕಾರಣ ಮತ್ತೆ ಆ ಕೃತಿಯನ್ನು ಇಂಗ್ಲೀಷ್‍ಗೆ ತರ್ಜುಮೆ ಮಾಡಿ ಮುದ್ರಿಸಲಾಯಿತು. ಇದನ್ನು ಗ್ರಹಿಸಿದ ಇಂಗ್ಲೆಂಡ್ ಪುಸ್ತಕವನ್ನು ಮುಟ್ಟುಗೋಲು ಹಾಕಿತು. ಆದರೆ ಈ ಗ್ರಂಥ ಇಡೀ ದೇಶದ ಸ್ವಾತಂತ್ರ್ಯ ಚಳುವಳಿಯ ದಿಕ್ಕನ್ನೇ ಬದಲಿಸಿತು. ಭಗತ್ ಸಿಂಗ್, ಅಜಾದ್, ಸುಭಾಷ್‍ಚಂದ್ರ ಬೋಸ್‍ನಂತಹಾ ಸಾವಿರಾರು ಕ್ರಾಂತಿಕಾರರು ಹುಟ್ಟಿಕೊಂಡರು. ಇದಕ್ಕಾಗಿ ಸಾವರ್ಕರ್ರನ್ನು ಬಂಧಿಸಿ ರಾಜದ್ರೋಹದ ಆಪಾದನೆ ಹೊರಿಸಿ ಅಜನ್ಮ ಕಾರಾವಾಸದ ಶಿಕ್ಷೆ ವಿಧಿಸಲ್ಪಟ್ಟಿತು. 

ಸಾವರ್ಕರ್ಗೆ ಚಿಕ್ಕಂದಿನಿಂದಲೇ ಅನೇಕ ಕಷ್ಟಗಳನ್ನು ಅನುಭವಿಸಿದ್ದರು. ಚಿಕ್ಕಂದಿನಲ್ಲಿಯೇ ಅವರು ತಾಯಿಯನ್ನು ಕಳೆದುಕೊಂಡಿದ್ದರು. ಅವರ ಚಿಕ್ಕಮಗ ಸಿಡುಬಿಗೆ ಬಲಿಯಾದ. ಅವರ ಹಿರಿಯ ಸಹೋದರ ಗಣೇಶ್‍ಪಂತ್ (ಬಾಬಾರಾವ್) ಗಡೀಪಾರು ಶಿಕ್ಷೆಗೆ ಒಳಗಾದರು. ಕಿರಿಯ ಸಹೋದರ ನಾರಾಯಣರಾವ್ ಅವರನ್ನು ಬಂಧಿಸಲಾಯಿತು. ಇಂಗ್ಲೆಂಡ್ ಸರಕಾರ ಅವರ ಮನೆ ಹಾಗೂ ಆಸ್ತಿಯನ್ನು ಮುಟ್ಟುಗೋಲು ಹಾಕಿತು.  ಅವರ ಶಿಷ್ಯ ಮದನ್‍ಲಾಲ್ ಧಿಂಗ್ರಾರನ್ನು ಲಂಡನ್‍ನಲ್ಲಿ ಗಲ್ಲಿಗೇರಿಸಲಾಯಿತು. ಸಾವರ್ಕರ್ ಬ್ಯಾರಿಸ್ಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತಕ್ಕೆ ಬರುವ ಯೋಚನೆಯಲ್ಲಿದ್ದಾಗ ಅವರನ್ನು ರಾಜದ್ರೋಹ, ಒಳಸಂಚು ಮತು ಕ್ರಾಂತೀಯ ಪ್ರಚೋದನೆಗಾಗಿ 1910 ಮಾರ್ಚ್ 13ರಂದು ಬಂಧಿಸಲಾಯಿತು! ಅವರನ್ನು ಬ್ರಿಕ್ಸ್‍ಟನ್ ಕಾರಾಗೃಹದಲ್ಲಿ ಇರಿಸಿದ ನಂತರ ಭಾರತಕ್ಕೆ ಕಳುಹಿಸುವ ಪ್ರಯತ್ನ ನಡೆಯಿತು. ಹೀಗೆ ಆಘಾತಗಳ ಸರಮಾಲೆ ಸಾವರ್ಕರ್ರನ್ನು ಸುತ್ತಿಕೊಂಡಿತು!

ಸಾವರ್ಕರ್ರನ್ನು ಭಾರತಕ್ಕೆ ಹಡಗಿನಲ್ಲಿ ಕಳುಹಿಸಲು ನಿರ್ಧರಿಸಲಾಯಿತು. ಹಡಗು ಫ್ರಾನ್ಸ್‍ನ ಬಂದರು ಮರ್ಸೈಲ್ಸ್  ತಲುಪಿದಾಗ ಲಂಗರು ಹಾಕಬೇಕಾಯಿತು. ಅಲ್ಲಿಂದ ಹೇಗಾದರೂ ಪಾರಾಗುವ ಸಾಹಸಕ್ಕೆ ಸಾವರ್ಕರ್ ಅನುವಾದರು. ಸಾವರ್ಕರ್ ತಪ್ಪಿಸದಂತೆ ಕಾವಲುಗಾರರು ತೀವ್ರ ನಿಗಾ ವಹಿಸಿದ್ದರು. ಅಲ್ಲಿಂದ ತಪ್ಪಿಸುವಂತೆಯೇ ಇರಲಿಲ್ಲ. ಅದಕ್ಕಾಗಿ ಉಪಾಯ ಮಾಡಿದ ದಾಮೋದರ್, ಕಾವಲುಗಾರರಲ್ಲಿ ತನಗೆ ಶೌಚಕ್ಕೆ ಹೋಗಬೇಕೆಂದು ತಿಳಿಸಿದರು. ಶೌಚಾಲಯದ ಬಾಗಿಲು ಹಾಕಿದ ಸಾವರ್ಕರ್ ಚಿಲಕ ಭದ್ರಪಡಿಸಿಕೊಂಡು ಕಿಟಕಿಯನ್ನು ಅಂಗಿಯಲ್ಲಿ ಮುಚ್ಚಿಕೊಂಡು ಹಡಗಿನ ಕಿಂಡಿಯಿಂದ ಸಮುದ್ರಕ್ಕೆ ಧುಮುಕಿದರು. ಸಾವರ್ಕರ್ ಇನ್ನೂ ಶೌಚಾಲಯದಿಂದ ಹೊರಬಾರದಿರುವುದನ್ನು ಗಮನಿಸಿ ದಿಗಿಲುಬಿದ್ದ ಕಾವಲುಗಾರರು ಸುದ್ದಿಮುಟ್ಟಿಸಿದರು. ಹತ್ತಾರು ಸಣ್ಣ ದೋಣಿಗಳ ಮೂಲಕ ಸಾವರ್ಕರ್ ಅವರ ಬೆನ್ನುಬಿದ್ದರು. ಫ್ರಾನ್ಸ್ ನೆಲದಲ್ಲಿ ತನ್ನನ್ನು ಬಂಧಿಸುವ ಅಧಿಕಾರ ತಮಗಿಲ್ಲ ಎಂದೂ ಕೇಳದೆ ಮತ್ತೆ ಸೆರೆಹಿಡಿದು ಹಡಗಿನಲ್ಲಿ ಮರಳಿ ತರಲಾಯಿತು. 

ಮುಂದೆ ಅವರಿಗೆ ಐವತ್ತು ವರ್ಷಗಳ ಕಾಲ  ಅಂಡಮಾನಿನ ಕಾರಾಗೃಹದಲ್ಲಿ ಕರಿನೀರಿನ ಶಿಕ್ಷೆಗೆ ಒಳಗಾದರು. ಬೆಳಗ್ಗಿನಿಂದ ಸಂಜೆ ತನಕ ಎಣ್ಣೆ ಹಿಂಡುವ ಗಾಣವನ್ನು ಎತ್ತಿನಂತೆ ದೂಡುವುದು, ಹಗ್ಗ ಹೊಸೆಯುವುದು, ಸರಿಯಾದ ಆಹಾರವಿಲ್ಲದೆ ಕ್ಷಯರೋಗ ಬಡಿದವರಂತೆ ಬಿಡುಗಡೆಯ ದಾರಿಯಿಲ್ಲದೆ, ಮಾತನಾಡಲು ಮನುಷ್ಯ ಸಹವಾಸವಿಲ್ಲದೆ, ನೊಣ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಅನೇಕ ಕಠಿಣ ಶಿಕ್ಷೆಗಳನ್ನು ಅನುಭವಿಸಿದರು. ಕೆಲಸ ಮಾಡಲಾಗದಿದ್ದರೆ ಬೆತ್ತದ ಏಟುಗಳನ್ನು ತಿನ್ನಬೇಕಾಗಿತ್ತು. ಕೆಲಸವಾದ ಮೇಲೆ ಸಂಕೋಲೆಯ ಮುಖಾಂತರ ಬಂಧಿಸಲಾಗುತ್ತಿತ್ತು. 

ಅಂತೂ ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಆದರೆ ಅವರ ವಿಧಿಬರಹ ಚೆನ್ನಾಗಿರಲಿಲ್ಲವೇನೋ? ಸ್ವತಂತ್ರ್ಯ ಭಾರತದಲ್ಲಿ ನೆಮ್ಮದಿಯಿಂದ ಇರಬೇಕಾಗಿದ್ದ ಅದೇ ಸಾವರ್ಕರ್ ಮತ್ತೆ ಬಂಧನಕ್ಕೊಳಗಾದರು. ಪಾಪ ತನ್ನ ಜೀವನ ಪೂರ್ತಿ ಜೈಲಿನಲ್ಲೇ ಕೊಳೆದರು ಸಾವರ್ಕರ್.  ಅಂಡಮಾನ್‍ನಿಂದ ಬಿಡುಗಡೆಗೊಂಡರೂ ಮತ್ತೆ ಅವರ ಮೇಲೆ ಸುಳ್ಳಾರೋಪ ಹೊರಿಸಲಾಯಿತು. ಅದೇ ಗಾಂಧಿ ಹತ್ಯೆ...!

ಗಾಂಧಿ ಹತ್ಯೆಯಾದ ಬಳಿಕ ಒಂದೇ ವಾರದ ಅಂತರದಲ್ಲಿ ಸಾವರ್ಕರ್ರನ್ನು ಬಂಧಿಸಲಾಯಿತು.  ಅವರ ಇಡೀ ಮನೆಯನ್ನು ಜಾಲಾಡಿ 143 ಕಡತಗಳನ್ನು, ಸಾವಿರಾರು ಪತ್ರಗಳನ್ನು ಕಾಂಗ್ರೆಸ್ ಸರಕಾರ ವಶಕ್ಕೆ ತೆಗೆದುಕೊಂಡಿತು. 26 ವರ್ಷ ಜೈಲಲ್ಲಿ ಕಳೆದು ಅನಾರೋಗ್ಯಪೀಡಿತನಾಗಿದ್ದ ಸಾವರ್ಕರ್ಗೆ ಮತ್ತೆಲೊಂದು ವರ್ಷ ಜೈಲು ಶಿಕ್ಷೆ ನೀಡಿ 1949ರಂದು ನಿರ್ದೋಶಿಯಾಗಿ ಸಾಬೀತಾಗಿರುವುದರಿಂದ ಅವರನ್ನು ಬಿಡುಗಡೆಗೊಳಿಸಲಾಯಿತು. ಜೈಲಿಗಟ್ಟಿದ ಕಾಂಗ್ರೆಸ್ ಅವರನ್ನು ಬ್ರಿಟಿಷರಿಗಿಂತಲೂ ಕ್ರೂರವಾಗಿ ನಡೆಸಿತು. ಅವರ ಹೆಂಡತಿಮಕ್ಕಳಿಗೂ ಮಾತಾಡಲು ಅವಕಾಶ ನೀಡಲಿಲ್ಲ. ಗಾಂಧಿ ಕೊಲೆಯಾದಾಗ ಮೊರಾರ್ಜಿ ದೇಸಾಯಿ ಮುಂಬಯಿ ಸರಕಾರದ ಗೃಹಸಚಿವರಾಗಿದ್ದರು. ಗಾಂಧಿ ಹತ್ಯೆಗೊಂಡ ಬಳಿಕ ಜನ ರೊಚ್ಚಿಗೆದ್ದಿದ್ದರು. ಮೊದಲೇ ಸಾವರ್ಕರ್ ಅವರನ್ನು ಅನ್ಯಾಯವಾಗಿ ಬಂಧಿಸಿ ಜೈಲಿಗಟ್ಟಿದ್ದರಿಂದ ಜನರಿಗೆ ಅವರಮೇಲೆಯೂ ಸಂಶಯ ಉಂಟಾಗಿ ಜೀವಬೆದರಿಕೆಯಿತ್ತು. ಈ ಬಗ್ಗೆ ಸರಕಾರಕ್ಕೆ ಸಾಕಷ್ಟು ಮನವರಿಕೆ ಮಾಡಿದರೂ ಮೊರಾರ್ಜಿ ದೇಸಾಯಿ ಕ್ಯಾರ್ ಮಾಡಲೇ ಇಲ್ಲ. ಈ ವೇಳೆ ಸಾವರ್ಕರ್ ಮನೆಗೆ ದಾಳಿ ನಡೆಯಿತು. ಸರಕಾರ ರಕ್ಷಣೆ ನೀಡದಿರುವುದನ್ನು ಗಮನಿಸಿದ ಅವರ ಬಂಧುಗಳು, ಅಭಿಮಾನಿಗಳು ಮನೆಗೆ ರಕ್ಷಣೆ ನೀಡಿದರು. 


ಸಾವರ್ಕರರ ತಮ್ಮ ನಾರಾಯಣ ರಾಯನನ್ನು ಪುಂಡರ ಗುಂಪೆÇಂದು ರಸ್ತೆಯಲ್ಲಿ ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ, ಅವರು ಒಂದೂವರೆ ವರ್ಷ ಹಾಸಿಗೆ ಹಿಡಿದು ಅನ್ಯಾಯವಾಗಿ ತೀರಿಕೊಂಡರು. ಸಾವರ್ಕರರ ಅಂಗರಕ್ಷಕನಾಗಿದ್ದ ಅಪ್ಪಾ ರಾಮಚಂದ್ರ ಕಾಸರ ಎಂಬವರಿಗೆ ಪೆÇಲೀಸರು ಎಷ್ಟು ಚಿತ್ರಹಿಂಸೆ ನೀಡಿದರೆಂದರೆ  ಜೈಲಿನಲ್ಲಿ ಉಗುರುಗಳನ್ನು ಕಿತ್ತು ನಾನಾ ರೀತಿಯಲ್ಲಿ ಹಿಂಸಿಸಿ ಗಾಂಧಿ ಹತ್ಯೆಯನ್ನು ಒಪ್ಪುವಂತೆ ಬಲವಂತ ಪಡಿಸಿದರು. ಆದರೆ ಪುಣ್ಯಾತ್ಮ ಶಿಕ್ಷೆಗೆ ಬಗ್ಗಲೇ ಇಲ್ಲ. ಏನೇ ತಂತ್ರ ಹೂಡಿದರೂ ಸಾವರ್ಕರ್ನನ್ನು ಕೊಲೆಗಾರ ಎಂದು ರೂಪಿಸಲು ಕಾಂಗ್ರೆಸಿಗೆ ಸಾಧ್ಯವೇ ಆಗಲಿಲ್ಲ. ಕೊನೆಗೂ ಸಾವರ್ಕರ್ ನಿರ್ದೋಶಿ ಎಂದು ಬಿಡುಗಡೆಗೊಳ್ಳಬೇಕಿತ್ತು. 

ಆದರೆ ಈ ನೆಹರೂ ಏನು ಮಾಡಿದ ಗೊತ್ತೇ? ತೀರ್ಪು ಬಂದ ತಕ್ಷಣ ಪಂಜಾಬ್ ನ್ಯಾಯಾಲಯದ ಮೂಲಕ, ಸಾವರ್ಕರ್ ಅಪಾಯ ಕಾರಿ ಎಂದು ಪಂಜಾಬ್ ಮತ್ತು ದೆಹಲಿಯಲ್ಲಿ ಮೂರು ತಿಂಗಳು ಬಹಿಷ್ಕಾರ ಹಾಕಲಾಗಿದೆ ಎಂದು ಮತ್ತೊಂದು ತೀರ್ಪು ಹೊರಡಿಸಿ, ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಿ ಪೆÇಲೀಸ್ ಸರ್ಪ ಗಾವಲಿನಲ್ಲಿ ಮುಂಬಯಿಗೆ ಕಳಿಸಿದ! 1950ರಲ್ಲಿ ಲಿಯಾಖತ್ ಅಲಿ ಭಾರತ ಭೇಟಿಗೆ ಬಂದಾಗ ಸಾರ್ವಕರ್ ಹಿಂದುತ್ವ ನಿಷ್ಠರಾಗಿದ್ದರು ಎಂಬ ಏಕೈಕ ಕಾರಣಕ್ಕೆ ದೈಹಿಕವಾಗಿ ಜರ್ಜರಿತರಾಗಿದ್ದ ಅರವತ್ತೇಳು ವರ್ಷದ ವೃದ್ಧ ಸಾವರ್ಕರ್ರನ್ನು ಬಂಧಿಸಿ ಸರ್ಕಾರ ಬೆಳಗಾವಿ ಜೈಲಿಗೆ ಕಳಿಹಿಸಲಾಯಿತು. ಅಲ್ಲದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾರಣ ಅವರಿಗೆ ಸರಕಾರ ಕಿಂಚಿತ್ತೂ ಧನಸಹಾಯ ನೀಡಲಿಲ್ಲ. ಅವರು ಸಾಯುವವರೆಗೂ ಅವರ ಮೇಲೆ  ಗೂಢಚಾರಿಕೆ ನಡೆಸಲಾಯಿತು. 

ಸಾವರ್ಕರ್ ಅವರನ್ನು ಆರೋಪಿಯೆಂದು ಸಾಬೀತುಪಡಿಸಿ ನೇಣುಗಂಭಕ್ಕೆ ಹಾಕಲು ಇನ್ನಿಲ್ಲದಂತೆ ಪ್ರಯತ್ನಿಸಲಾಗಿತ್ತಿತ್ತು. ಆದರೆ ಸಾವರ್ಕರ್ ಅವರ ಸತ್ಯಸಂದತೆ, ನಿಷ್ಠೆ, ಜೊತೆಗೆ ಕಷ್ಟವನ್ನು ಸಹಿಸಿ, ಎದುರಿಸಬಲ್ಲೆ ಎಂಬ ಛಲ ಎಲ್ಲವೂ ಅವರನ್ನು ಆರೋಪಮುಕ್ತರನ್ನಾಗಿಸಿತ್ತು. ಆದರೆ ಎಷ್ಟೂಂತ ಕಷ್ಟಗಳನ್ನು ಸಹಿಸುವುದು? ಜೊತೆಗೆ ಹಿಂದೂಗಳಿಗೆ ಹಿಂದೂ ಎಂಬ ಹೆಸರನ್ನು ನೀಡಿದ ಸಿಂಧು ನದಿ, ಹಿಂದೂಗಳಿಗೆ ವೇದಗಳನ್ನಿತ್ತ ಆರ್ಯಾವರ್ತ ಪ್ರದೇಶ ಭಾರತದ ಹೊರಗೆ ಉಳಿದು ಪಾಕಿಸ್ತಾನ ಎಂಬ ಬೇರೆಯೇ ರಾಷ್ಟ್ರ ನಿರ್ಮಾಣವಾದದ್ದು ಅವರಿಗೆ ಸಹ್ಯವಾಗಿರಲಿಲ್ಲ. ಬ್ರಿಟಿಷರು ವಶಪಡಿಸಿಕೊಂಡಿದ್ದ ಸಾವರ್ಕರ್ ಮನೆಯನ್ನು ಸ್ವಾತಂತ್ರ್ಯಾ ನಂತರವೂ ಹಿಂದಿರುಗಿಸುವ ಸೌಜನ್ಯವನ್ನು ನೆಹರೂ ಸರ್ಕಾರ ತೋರಲಿಲ್ಲ. ಇಲ್ಲಿನ ವ್ಯವಸ್ಥೆಗೆ ತೀವ್ರ ನೊಂದುಕೊಂಡ ಸಾವರ್ಕರ್ 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ 1966ರ ಫೆಬ್ರುವರಿ 26 ರಂದು ಆತ್ಮಾರ್ಪಣೆಗೈದರು ಛೇ...

Girish Malali

ಶ್ರೀರಾಮಾಯಣದಲ್ಲಿ ಉಲ್ಲೇಖಗೊಂಡ ನಿಗೂಢ ಸ್ಥಳವಾದ `ಋಕ್ಷಬಿಲ' ಇಂದಿಗೂ ಹಾಗೆಯೇ ಇದೆಯೇ? ಋಷ್ಯಬಿಲದೊಳಗಿನ ನಿಗೂಢ ರಹಸ್ಯವೇನು ಗೊತ್ತೇ?


ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗಿದ್ದ ಸುಳಿವು ಸುಗ್ರೀವನ ಕಪಿಸೇನೆಗೆ ಲಭಿಸಿದ್ದರೂ ಸೀತೆಯನ್ನು ಆತ ಎಲ್ಲಿ ಅಡಗಿಸಿದ್ದ ಎನ್ನುವುದು ಗೊತ್ತೇ ಇರಲಿಲ್ಲ. ಒಂದು ತಿಂಗಳ ಅವಧಿಯೊಳಗಡೆ ಸೀತೆ ಎಲ್ಲಿದ್ದಾಳೆ ಎಂಬುವುದನ್ನು ಪತ್ತೆಹಚ್ಚಿ ಕೊಡಬೇಕು ಎಂದು ವಾನರ ರಾಜ ಸುಗ್ರೀವನು ಆದೇಶ ನೀಡಿದ್ದನು. ಆದರೆ ಒಂದು ತಿಂಗಳ ಅವಧಿ ಹತ್ತಿರ ಬರುತ್ತಿವುದನ್ನು ಮನಗಂಡ ಕಪಿಸೇನೆ ತೀವ್ರವಾಗಿ ನೊಂದಿತು. ತಾವು ಸೀತೆ ಇರುವ ಜಾಗವನ್ನು ಹುಡುಕದೇ ಇದ್ದರೆ ಕೋಪಿಷ್ಟನಾದ ಸುಗ್ರೀವ ರಾಜನು ನಮಗೆ ದಂಡನೆ ವಿಧಿಸಬಹುದು, ಪ್ರಭಾವಶಾಲಿಯಾದ ಶ್ರೀರಾಮನಿಗೂ ಕಪಿಸೇನೆ ಹೆದರಿ, ಕೊನೆಗೆ ಹಠದಿಂದ ಬಿಡದೆ ಹುಡುಕೋಣ, ಗೆದ್ದರೂ ಗೆಲ್ಲಬಹುದು ಎಂದು ಇನ್ನೊಮ್ಮೆ ಹುಡುಕಲು ಆರಂಭಿಸಿದರು. 

ಅವರು ರಜತಪರ್ವತದಲ್ಲಿ ಹುಡುಕಲಾರಂಭಿಸಿದರು. ಅದು ಬಿಳುಪಾದ ಪರ್ವತವಾಗಿದ್ದು ಅದರ ಬುಡದಿಂದ ತುದಿಯವರೆಗೆ ಹುಡುಕಲಾರಂಭಿಸಿದರು. ಆ ಬಳಿಕ ವಿಂಧ್ಯ ಪರ್ವತವನ್ನು ಜಾಲಾಡಿದರು. ಎಲ್ಲಾ ಮುಗಿದಾಗ ಸುಗ್ರೀವ ನೀಡಿದ್ದ ಒಂದು ತಿಂಗಳ ಗಡುವು ಮುಗಿದಾಗಿತ್ತು. ಆದರೂ ಮತ್ತೆ ಮತ್ತೆ ಇದ್ದಬಿದ್ದ ಎಲ್ಲಾ ಗುಹೆಗಳನ್ನು ಬಿಡದೆ ಹುಡುಕಲಾರಂಭಿಸಿದರು. ಹಸಿವು, ನೀರಡಿಕೆಗಳಿಂದ ಬಳಲಿದ ಕಪಿಸೇನೆ ಪ್ರಾಣ ಉಳಿಸಿಕೊಳ್ಳಲು ನೀರಾದರೂ ಸಿಗುವುದೇ ಎಂದು ಹುಡುಕಲಾರಂಭಿಸಿದರು. ಆದರೆ ಅಲ್ಲೊಂದು ಅಚ್ಚರಿ ಕಾದಿತ್ತು. ದೂರದಲ್ಲಿ ನೋಡಿದಾಗ ಒಂದು ನಿಗೂಢವಾಗಿರುವ ಬಿಲವೊಂದು ಕಾಣಿಸಿತು.

ಆ ಬಿಲದ ಹೆಸರು ಋಕ್ಷಬಿಲ!

ಅದರ ದ್ವಾರವು ಮರಬಳ್ಳಿಗಳಿಂದ ಮುಚ್ಚಿಹೋಗಿತ್ತು. ಅಲ್ಲೇ ನಿಂತು ಏನು ಮಾಡುವುದು ಎಂದು ಯೋಚಿಸಿದಾಗ ಕ್ರೌಂಚ, ಹಂಸ, ಸಾರಸ ಮುಂತಾದ ಪಕ್ಷಿಗಳು ಅಲ್ಲಿಂದ ಹಾರಿ ಹೊರಗಡೆ ಬರುತ್ತಿರುವುದನ್ನು ಕಂಡರು. ನೀರಿನ ಬಿಂದುಗಳು ತಾವರೆ ಹೂವಿನಲ್ಲಿ ಅಂಟಿಕೊಂಡು ಕೆಂಪಾಗಿ ಕಾಣುತ್ತಿತ್ತು. ಅದರಿಂದ ಮೋಹಕವಾದ ಪರಿಮಳವು ಎಲ್ಲೆಡೆ ಹರಡಿತ್ತು. ಆದರೆ ಆ ಬಿಲವು ನಿಗೂಢವೂ, ಘೋರವಾಗಿಯೂ ಇದ್ದುದರಿಂದ ಅದರ ಒಳಗಡೆ ಹೋಗುವಂತಿರಲಿಲ್ಲ. ಹಸಿವಿನಿಂದ ಬಳಲಿದ್ದ ಅವರಿಗೆ ಹನುಮಂತನು, `ವ್ಯರ್ಥವಾದ ಹುಡುಕಾಟದಿಂದ ನಾವೆಲ್ಲಾ ಬಳಲಿದ್ದೇವೆ. ಈ ಬಿಲದೊಳಗಡೆ ನೀರಿರುವುದು ಜಲಚರ ಪಕ್ಷಿಗಳಿಂದ ಗೊತ್ತಾಗುತ್ತದೆ. ಈ ಬಿಲದ ದ್ವಾರದಲ್ಲಿ ಹಚ್ಚಹಸುರಾದ ಮರಗಳು ಬೆಳೆದುನಿಂತಿರುವುದು ಕಾಣಿಸುತ್ತಿದೆ. ಆದ್ದರಿಂದ ಹೇಗಾದರೂ ಮಾಡಿ ಈ ಬಿಲದೊಳಗಡೆ ಪ್ರವೇಶಿಸೋಣ' ಎಂದು ತಿಳಿಸಿದನು.

ಒಳಗಡೆ ಗವ್ ಎನ್ನುವ ಕತ್ತಲೆ. ಯಾರಿಗೂ ಏನೂ ಕಾಣಿಸುತ್ತಿರಲಿಲ್ಲ. ವಾನರೆಲ್ಲರೂ ಒಬ್ಬರನೊಬ್ಬರು ಕೈಯ್ಯನ್ನು ಸರಪಳಿಯಾಗಿ ಹಿಡಿದು ತಡಕಾಡುತ್ತಾ ಹೆಜ್ಜೆಯ ಮೇಲೆ ಹೆಜ್ಜೆನ್ನಿಟ್ಟು ಮುಂದುವರಿಯಲಾರಂಭಿಸಿದರು. ಸುಮಾರು ಒಂದು ಯೋಜನದಷ್ಟು ನಡೆದಾಗ ಆ ಪ್ರದೇಶ ರಮ್ಯರಮಣೀಯವಾಗಿರುವುದು, ದಿವ್ಯವಾದ ಬೆಳಕಿನಿಂದ ಹೊಳೆಯುತ್ತಿರುವುದು ಕಾಣಿಸಿತು. ವಿವರಿಸಲೂ ಸಾಧ್ಯವಾಗದ ರೀತಿಯ ಸ್ವರ್ಗೀಯ ರೀತಿಯಲ್ಲಿರುವ ಸುಂದರವಾದ ಉದ್ಯಾನವನ್ನು ಕಂಡು ಎಲ್ಲರೂ ಮೈಮರೆತರು. ಪುಷ್ಪಭರಿತವಾದ, ಫಲಭರಿತವಾದ ಸುಂದರವಾದ ವೃಕ್ಷಗಳು ಬಂಗಾರದ ಪ್ರಕಾಶದಿಂದ ಹೊಳೆಯುವ ಪ್ರದೇಶವು ಬೇರೊಂದು ಲೋಕವನ್ನೇ ನೆನಪಿಸುವಂತಿತ್ತು. ಹವಳದ ಮಣಿಗಳಂತೆ ಹೊಳೆಯುವ ಪುಷ್ಫಗಳು ಮಕರಂದವನ್ನು ಹೀರುವ ಚಿನ್ನದಂತೆ ಹೊಳೆಯುವ ದುಂಬಿಗಳು, ರತ್ನಪ್ರಕಾಶವುಳ್ಳ ಹೊಳೆಯುವ ಶುಭ್ರನೀರಿನ ಕೊಳಗಳು, ಅದರಲ್ಲಿ ಕೆಂಪಾಗಿ ಹೊಳೆಯುವ ತಾವರೆಗಳು, ಸುವರ್ಣ ವರ್ಣದ ಮೀನುಗಳು, ಬೃಹದಾಕಾರದ ಆಮೆಗಳು, ಬೆಳ್ಳಿ ಬಂಗಾರದಿಂದ ನಿರ್ಮಿತವಾಗಿರುವಂಥಾ ಸುಂದರವಾದ ಗೃಹಗಳು, ಅವುಗಳಿಗೆ ಮುತ್ತಿನ ಗೊಂಚಲುಗಳಿಂದ ಅಲಂಕೃತವಾದ ಚಿನ್ನದ ಕಿಟಕಿಗಳು, ವಜ್ರ ವೈಢೂರ್ಯಗಳಿಂದ ಭೂಷಿತವಾದ ಬಾಗಿಲುಗಳು, ರತ್ನಖಚಿತವಾದ ಮಂಚಗಳು, ಪೀಠಗಳು, ಅವುಗಳ ಮೇಲೆ ಸುಗಂಧ ದ್ರವ್ಯಗಳು, ಶುಚಿರುಚಿಯಾದ ಖಾದ್ಯಗಳು, ಕಂದಮೂಲ ಫಲಗಳು, ಬಗೆಬಗೆಯ ಪರಿಮಳಯುಕ್ತ ಪೇಯಗಳು, ಹೊಚ್ಚಹೊಸ ಜೇನು ತುಂಬಿದ ಪಾತ್ರೆಗಳು, ಜೊತೆಗೆ ದಿವ್ಯವಾದ ವಸ್ತ್ರಗಳ ರಾಶಿ, ಬೆಂಕಿಯ ಜ್ವಾಲೆಯಂತೆ ಹೊಳೆಯುವ ಚಿನ್ನದ ಇಟ್ಟಿಗೆಗಳು ತುಂಬಿದ್ದವು. ಇದನ್ನು ನೋಡಿ ಕಪಿವೀರರೆಲ್ಲಾ ಅಚ್ಚರಿಯಿಂದ ಅವಲೋಕಿಸುತ್ತಿದ್ದರು.

ಇದರ ನಡುವೆ ನಾರುಮುಡಿ, ಕೃಷ್ಣಾಜಿನಗಳನ್ನು ಇಟ್ಟು ತಪೋನಿರತಳಾದ ಸ್ತ್ರೀಯೋರ್ವಳನ್ನು ಕಂಡರು. ಅವಳ ತೇಜಸ್ಸನ್ನು ನೋಡಿ ಎಲ್ಲರೋ ಒಮ್ಮೆಲೆ ಸ್ಥಬ್ದರಾಗಿ ನಿಂತಿದ್ದರು. ಇವರ ಪೈಕಿ ಹನುಮಂತನೊಬ್ಬನು ಧೈರ್ಯದಿಂದ ಮುಂದೆ ಬಂದು ಆಕೆಯ ಮುಂದೆ ಮಂಡಿಯೂರಿ ಕೈಮುಗಿದು ನಿಂತನು. `ದೇವಿ ನೀನ್ಯಾರು? ಈ ಭವನವೂ ಬಿಲವೂ ಯಾರದ್ದು? ಈ ಉತ್ತಮೋತ್ತವಾದ ವಸ್ತುಗಳು ಯಾರಿಗೆ ಸೇರಿದ್ದು? ನಾವೆಲ್ಲಿದ್ದೇವೆಂದೇ ತಿಳಿಯುತ್ತಿಲ್ಲ.  ಹಸಿವು ಬಾಯಾರಿಕೆಗಳಿಂದ ಬಳಲಿರುವ ನಾವು, ಬಿಲದಿಂದ ಪಕ್ಷಿಗಳು ಹೊರಬರುತ್ತಿರುವುದನ್ನು ಕಂಡು ನೀರನ್ನು ಅರಸುತ್ತಾ ಇಲ್ಲಿಯವರೆಗೆ ಬಂದೆವು. ಯಾರ ತಪಸ್ಸಿನಿಂದ ಇದರ ಸೃಷ್ಟಿಯಾಯಿತು?' ಎಂದು ಕುತೂಹಲದಿಂದ ಕೇಳಿಕೊಂಡನು. 

ಅದಕ್ಕೆ ಆ ತಪಸ್ವಿಯು ಉತ್ತರಿಸಿ, `ಮಯನೆಂಬ ಅಸುರ ಶಿಲ್ಪಿಯು ತನ್ನ ದಿವ್ಯಪ್ರಭಾವದಿಂದ ಈ ಉದ್ಯಾನವನ್ನು ಸೃಷ್ಟಿಸಿದನು. ಸಾವಿರಾರು ವರ್ಷಗಳ ತಪಸ್ಸಿನಿಂದ ಬ್ರಹ್ಮನಿಂದ ಶಿಲ್ಪವಿದ್ಯೆಯನ್ನು ವರವಾಗಿ ಪಡೆದ ಆತನು ಈ ವನವನ್ನು ನಿರ್ಮಿಸಿ ಹೇಮೆ ಎಂಬ ಅಪ್ಸರ ಸ್ತ್ರೀಯೊಂದಿಗೆ ಇಲ್ಲಿ ಸುಖವಾಗಿ ವಾಸಿಸುತ್ತಿದ್ದನು. ಯುದ್ಧದಲ್ಲಿ ಇಂದ್ರನು ಮಯನನ್ನು ಸೋಲಿಸಿ ಕೊಂದ ಬಳಿಕ ಬ್ರಹ್ಮನು ಹೇಮೆಗೆ ಈ ವನವನ್ನು ಒಪ್ಪಿಸಿದನು. ನಾನು ಮೇರುಸಾವರ್ಣಿಯ ಮಗಳಾದ ಸ್ವಯಂಪ್ರಭೆ ಎಂದು ನನ್ನ ಹೆಸರು. ಹೇಮೆ ನನ್ನ ಗೆಳತಿಯಾಗಿದ್ದು, ಅವಳ ವನವನ್ನು ರಕ್ಷಿಸಿಕೊಂಡು ಬರುತ್ತಿದ್ದೇನೆ. ನೀವ್ಯಾರು? ಯಾಕಾಗಿ ಈ ವನವನ್ನು ಸುತ್ತಾಡುತ್ತಿದ್ದೀರಿ? ಇಲ್ಲಿನ ಫಲಮೂಲಗಳನ್ನು ತಿಂದು ವಿಶ್ರಮಿಸಿಕೊಳ್ಳಿರಿ, ಇಲ್ಲಿನ ನೀರನ್ನು ಕುಡಿದು ಬಾಯಾರಿಕೆಯನ್ನು ತಣಿಸಿಕೊಳ್ಳಿರಿ. ಆಮೇಲೆ ನಿಮ್ಮ ವೃತ್ತಾಂತವನ್ನು ತಿಳಿಸಿರಿ..' ಎಂದಳು.

ಅವಳು ಹೇಳಿದಂತೆ ಅಲ್ಲಿನ ದಿವ್ಯಫಲಗಳನ್ನು ಭಕ್ಷಿಸಿ, ನೀರನ್ನು ಕುಡಿದು ಆಯಾಸವನ್ನು ಪರಿಹರಿಸಿಕೊಂಡರು. ಹನುಮಂತನೇ ಮುಂದಾಗಿ ನಿಂತು, ಭಗವಾನ್ ಶ್ರೀರಾಮನಿಗೆ ಒದಗಿದ ಸಂಕಷ್ಟ, ಶ್ರೀರಾಮನಿಗೆ ಅಗ್ನಿಸಾಕ್ಷಿಯಾಗಿ ಸುಗ್ರೀವನ ಜೊತೆ ಉಂಟಾದ ಸ್ನೇಹ, ಸುಗ್ರೀವನು ಸೀತೆಯನ್ನು ಹುಡುಕಾಡಲು ತಮಗೊಪ್ಪಿಸಿದ ಕರ್ತವ್ಯ, ಸೀತೆ ಎಲ್ಲಿರುವಳೆಂದು ತಾವು ನಡೆಸುವ ಹುಡುಕಾಟದ ಬಗ್ಗೆ ತಿಳಿಸಿದನು. ಆ ಬಳಿಕ ಹನುಮಂತನು, `ತಾಯಿ ಬಳಲಿದ್ದ ನಮಗೆ ಬಳಲಿದ್ದ ನಮಗೆ ಉಪಚಾರವನ್ನು ನೀಡಿದೆ. ಈ ಆತಿಥ್ಯಕ್ಕೆ ಪ್ರತಿಯಾಗಿ ನಾವು ಮಾಡಬಹುದಾದ ಕಾರ್ಯವೇನೇ ಇದ್ದರು ತಿಳಿಸು, ಸಂತೋಷವಾಗಿ ಮಾಡಿಕೊಡುವೆವು' ಎಂದು ತಿಳಿಸಿದನು. 

ಸ್ವಯಂಪ್ರಭೆಯು ಸ್ವಲ್ಪಹೊತ್ತು ಯೋಚಿಸಿಕೊಂಡು ಸುಮ್ಮನಾದಳು. ಕೊನೆಗೆ ಕೊಂಚ ಆಲೋಚಿಸಿದ ಹನುಮಂತನು, `ಸೀತಾನ್ವೇಷಣೆಗಾಗಿ ಮತ್ತೆ ನಾವು ಹಿಂತಿರುಗಬೇಕು. ಈ ಗವಿಯಿಂದ ಹೊರಗಡೆ ಹೋಗುವುದು ಹೇಗೆಂದು ತಿಳಿಸು' ಎಂದು ಭಿನ್ನವಿಸಿಕೊಂಡನು. ಆಗ ಸ್ವಯಂಪ್ರಭೆಯು, `ಸಾಮಾನ್ಯವಾಗಿ ಇದನ್ನು ಪ್ರವೇಶಿಸಿದ ಯಾರಿಗೂ ಇಲ್ಲಿಂದ ಹೊರಗಡೆ ಹೋಗಲು ಸಾಧ್ಯವಿಲ್ಲ. ಆದರೆ ನನ್ನ ಯೋಗಶಕ್ತಿಯಿಂದ ನಿಮ್ಮನ್ನೆಲ್ಲಾ ಹೊರಗಡೆ ಬಿಡುತ್ತೇನೆ. ಈಗ ಎಲ್ಲರೂ ಕಣ್ಣುಮುಚ್ಚಿಕೊಳ್ಳಿ. ನಾನು ಹೇಳುವವರೆಗೆ ಯಾರೂ ಕಣ್ಣುಬಿಡಬೇಡಿ.' ಎಂದಳು. ಅಂತೆಯೇ ಎಲ್ಲರೂ ತಮ್ಮ ಅಂಗೈಗಳಿಂದ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ನಿಮಿಷಾರ್ಧದಲ್ಲಿ ಬಿಲದಿಂದ ಹೊರಗಡೆ ಬಿದ್ದಿದ್ದರು. 

ಸ್ವಯಂ ಪ್ರಭೆಯು, `ನೋಡಿ ಅಲ್ಲಿ ವಿಸ್ತಾರವೂ, ಭೀಕರವೂ ಆಗಿರುವ ಸಮುದ್ರವೊಂದಿದೆ. ಈ ಭಾಗದಲ್ಲಿ ಪರ್ವತವಿದೆ. ನಿಮಗೆ ಇಷ್ಟಬಂದ ದಾರಿಯನ್ನು ಹುಡುಕಿಕೊಳ್ಳಿ' ಎಂದು ಹೇಳಿ ಮತ್ತೆ ತನ್ನ ಬಿಲದೊಳಗಡೆ ಹೊರಟುಹೋದಳು. ಸ್ವಯಂಪ್ರಭೆ ಆ ಸಮುದ್ರವನ್ನು `ಮಹೋದಧಿ' ಎಂದು ಕರೆದಿದ್ದಳು. ವರುಣದೇವನ ಆವಾಸಸ್ಥಾನವಾಗಿದ್ದ ಆ ಸಮುದ್ರವು ಭೀಕರವೂ, ರೌದ್ರವೂ ಆಗಿತ್ತು. 

ಭೋರ್ಗರೆಯುವ ಸಮುದ್ರವನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದರು. ಸೀತೆಯನ್ನು ಕಾಣದೆ ವಾಪಸ್ ಹೋಗುವಂತಿರಲಿಲ್ಲ. ತಮ್ಮೊಡೆಯ ಸುಗ್ರೀವನು ತಮಗೇನಾದರೂ ಅಪಾಯ ಮಾಡಿದರೆ ಎಂಬ ಭಯವೂ ಆಯಿತು. ಸುಗ್ರೀವನಲ್ಲಿ ಕ್ಷಮೆ ಕೇಳುವಂತೆಯೂ ಇರಲಿಲ್ಲ. ಹತಾಶೆಯಿಂದ ಕೆಲವರು ಮತ್ತೆ ಬಿಲದೊಳಗಡೆ ಪ್ರವೇಶಿಸಿ ಅಲ್ಲೇ ಇದ್ದುಬಿಡೋಣ ಎಂದರು. ಕೊನೆಗೆ ವಾಲಿಯ ಪುತ್ರ ಅಂಗದನು ಎಲ್ಲರಿಗೂ ಸಮಾಧಾನ ಹೇಳಿ ಪ್ರಯತ್ನವನ್ನು ಬಿಡುವುದು ಬೇಡ. ತಾಳ್ಮೆಯಿಂದ ಪ್ರಯತ್ನಿಸಿದರೆ ಸೀತೆಯ ಸುಳಿವು ಖಂಡಿತಾ ಸಿಗಬಹುದು. ಪ್ರಯತ್ನವನ್ನೂ ಮೀರಿಯೂ ಸೀತೆಯು ಸಿಗದಿದ್ದರೆ ಸುಗ್ರೀವನು ತಮ್ಮನ್ನು ಕ್ಷಮಿಸಿಯಾನು ಎಂದು ಧೈರ್ಯವನ್ನು ಹೇಳಿದನು. ಆದರೂ ಕೆಲವರಿಗೆ ಧೈರ್ಯ ಬರಲಿಲ್ಲ. ಮತ್ತೆ ಬಿಲದೊಳಗಡೆ ಹೋಗಿ ಅಲ್ಲೆ ಶಾಶ್ವತವಾಗಿ ಇದ್ದುಬಿಡೋಣ ಎಂದು ಹೇಳಿದರು. 

ಆಗ ಹನುಮಂತನು ಕೊಂಚ ಆಲೋಚಿಸಿ,` ಮನುಷ್ಯಂತೆಯೇ ಕಪಿಗಳ ಮನಸ್ಸು ಇನ್ನೂ ಚಂಚಲ. ಋಕ್ಷಬಿಲಕ್ಕೆ ಹೋದ ಬಳಿಕ ಅಲ್ಲಿ ತನ್ನ ಹೆಂಡತಿ ಮಕ್ಕಳ ಯೋಚನೆ ಬರುತ್ತದೆ. ಆದ್ದರಿಂದ ಕಿಷ್ಮಿಂದೆಗೆ ಹೋಗಿ ಸುಗ್ರೀವನಲ್ಲಿ ಜೀವದಾನ ಬೇಡೋಣ' ಎಂದನು. ಆದರೆ ಅದಕ್ಕೆ ಅಂಗದನು ಒಪ್ಪಲಿಲ್ಲ. `ಸುಗ್ರೀವನು ರಾಮನಲ್ಲಿ ಅಗ್ನಿಸಾಕ್ಷಿಯಾಗಿ ಸ್ನೇಹವನ್ನು ಒಪ್ಪಿಕೊಂಡ ಮೇಲೆ ಅದಕ್ಕೆ ಅವಕಾಶ ಕೊಡಲಾರನು. ನೀವು ಬೇಕಾದರೆ ಕಿಷ್ಕಿಂದೆಗೆ ವಾಪಸ್ ಹೋಗಿ ನಾನಿಲ್ಲೇ ಪ್ರಾಯಾಪವೇಶ ಮಾಡುತ್ತೇನೆ' ಎಂದನು. ಅಂಗದನ ಮಾತು ಕೇಳಿ ಎಲ್ಲರಿಗೂ ಬೇಸರ ಮೂಡಿ ತಾವೂ ಆತನ ಜೊತೆ ಪ್ರಾಯಾಪವೇಶ ಮಾಡುವುದಾಗಿ ನಿರ್ಧಾರಕ್ಕೆ ಬಂದರು. 

ಪರ್ವತದ ಗುಹೆಯಲ್ಲಿ ಸಂಪಾತಿ ಎನ್ನುವ ಹದ್ದು ವಾಸವಾಗಿತ್ತು. ವೃದ್ಧನಾಗಿದ್ದ ಸಂಪಾತಿ ಸೀತೆಗಾಗಿ ಪ್ರಾಣವನ್ನರ್ಪಿಸಿದ ಜಟಾಯುವಿನ ಅಣ್ಣ. ಸಂಪಾತಿಯು ಕಪಿಗಳನ್ನು ಕಂಡು ಅವುಗಳನ್ನು ತಿನ್ನಲೆಂದು ಬಂದಾಗ, ಅಂಗದನು, `ಜಟಾಯುವಿನಂಥಾ ಪಕ್ಷಿ ಪ್ರಾಣಿಗಳು ಶ್ರೀರಾಮನಿಗೆ ಸಹಾಯ ಮಾಡಿವೆ. ಜಟಾಯುವು ಸೀತೆಗಾಗಿ ಪ್ರಾಣವನ್ನೇ ಅರ್ಪಿಸಿತು. ಈಗ ಈ ಹದ್ದಿನಿಂದಾಗಿ ತಮ್ಮ ಪ್ರಾಣಕ್ಕೆ ಸಂಕಟ ಒದಗಿತು' ಎಂದು ಹಲುಬಿದನು. ಸಂಪಾತಿಗೆ ಅಂಗದನ ಮಾತು ಕೇಳಿ ದುಃಖವಾಯಿತು. ತನ್ನ ಪ್ರೀತಿಯ ಸಹೋದರ ಸತ್ತನೇ ಎಂದು ಮರುಕಗೊಂಡನು ಅಂಗದನಿಂದ ಎಲ್ಲಾ ವಿಚಾರವನ್ನು ಅರಿತುಕೊಂಡ ಸಂಪಾತಿಯು, `ತಾನು ವೃದ್ಧನಾಗಿರುವುದರಿಂದ ಹಾರಲು ಸಾಧ್ಯವಾಗುತ್ತಿಲ್ಲ. ಹಾರಲು ಸಾಧ್ಯವಿದ್ದಾಗ ಮೂರು ಲೋಕ, ಸಪ್ತಸಾಗರಗಳನ್ನೂ ಕಂಡಿದ್ದೇನೆ. ರಾವಣನು ಸೀತೆಯನ್ನು ಹೊತ್ತುಕೊಂಡು ಹೋಗಿರುವುದನ್ನು ಕಂಡಿದ್ದೇನೆ. ಇಲ್ಲಿಂದ ನೂರು ಯೋಜನದಷ್ಟು ಲಂಕೆಯೆಂಬ ದ್ವೀಪವಿದ್ದು, ಅದರ ರಾಜ ರಾವಣನಾಗಿದ್ದಾನೆ. ಹದ್ದುಗಳ ಕಣ್ಣುಗಳು ಸೂಕ್ಷ್ಮವಾಗಿದ್ದು, ಸೀತೆಯು ಲಂಕೆಯಲ್ಲಿರುವುದು ನನ್ನ ಕಣ್ಣಿಗೆ ಗೋಚರವಾಗುತ್ತದೆ. ಸಾಗರವನ್ನು ಲಂಘಿಸಿದರೆ ಲಂಕೆಯು ದೊರಕುತ್ತದೆ. ಅಲ್ಲಿ ರಾಕ್ಷಸಿಯ ಕಾವಲಿನಲ್ಲಿ ಸೀತೆಯಿದ್ದಾಳೆ' ಎಂದು ಉತ್ತರಿಸಿದನು. ಸಂಪಾತಿಯ ಮಾತು ಕೇಳಿ ಎಲ್ಲರೂ ಹರ್ಷಿತರಾದರು.

ಅದುವೇ ಹಿಂದೂ ಮಹಾಸಾಗರವಾಗಿದ್ದು, ಮುಂದೆ ವಾನರ ವೀರನಾದ ನಲನು ಅದಕ್ಕೆ ಶ್ರೀರಾಮನ ಕೃಪೆಯಿಂದ ಸೇತುವೆ ನಿರ್ಮಿಸಿದ್ದನು. ಅದುವೇ ನಲಸೇತು ಅಥವಾ ರಾಮಸೇತು ಎಂದು ಹೆಸರು ಪಡೆದಿದ್ದು, ಸಮುದ್ರದೊಳಗಡೆ ಹುದುಗಿಹೋಗಿದೆ. ಮಹಾಭಾರತ ಕಾಲವಾದ ದ್ವಾಪರಯುಗದವರೆಗೂ ಅದು ಕಾಣಿಸಿದ್ದು, ಲಂಕೆಯಿಂದ ಭಾರತಕ್ಕೆ ಅದರಿಂದಲೇ ನಡೆದುಕೊಂಡು ಬರುತ್ತಿದ್ದರು. ಆದರೆ ಮುಂದೆ ಪ್ರಕೃತಿಯಲ್ಲಿ ಆದ ಬದಲಾವಣೆಯಿಂದ ರಾಮಸೇತು ನೀರಲ್ಲಿ ಮುಳುಗಡೆಗೊಂಡಿದ್ದು, ಇಂದಿಗೂ ಅದರ ಸುಳಿವು ಲಭ್ಯವಿದೆ. 

ಇಲ್ಲಿ ತಿಳಿಸಿದ ಋಕ್ಷಬಿಲ ಇಂದಿಗೂ ನಿಗೂಢವಾಗಿಯೇ ಉಳಿದಿದ್ದು, ದಕ್ಷಿಣ ಭಾರತದಲ್ಲಿ ಇಂದಿಗೂ ಹಾಗೆಯೇ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೇರಳದ ಕಾಡಿನಿಂದಾವೃತವಾದ ಪ್ರದೇಶದಲ್ಲಿ ಋಷ್ಯಬಿಲವಿದ್ದು, ಇಂದಿಗೂ ಅದು ನಿಗೂಢವಾಗಿಯೇ ಉಳಿದಿದೆ. ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಿದ ಪರ್ವತ, ಮರ, ಹಣ್ಣು, ಕಾಡಿನಲ್ಲಿರುವ ವಿವಿಧ ಪಕ್ಷಿ-ಪ್ರಾಣಿ ಸಂಕುಲ, ಕಪಿವೀರರು ಸಂದರ್ಶಿಸಿದ ಜಾಗ, ರಾಮನು ಅಯೋಧ್ಯೆಯಿಂದ ಲಂಕೆಯವರೆಗೆ ಬಂದಿರುವ ಜಾಗ, ಕಿಷ್ಕಿಂದೆ, ಚಿತ್ರಕೂಟ ಅರಣ್ಯ ಅಲ್ಲದೆ ಶ್ರೀರಾಮ ಸೀತೆಯೊಂದಿಗೆ ಪುಷ್ಪಕವಿಮಾನದಲ್ಲಿ ಬರುವಾಗ ಆಕಾಶ ಮಾರ್ಗದಲ್ಲಿ ಕಂಡುಬಂದ ಪ್ರದೇಶಗಳು ಇಂದಿಗೂ ಭೂಪಟದಲ್ಲಿ ನಕ್ಷೆಯನ್ನು ಗುರುತಿಸಿದಂತೆ ಸ್ಪಷ್ಟವಾಗಿ ಕಂಡುಬರುತ್ತಿದೆ. ರಾಮಾಯಣದಲ್ಲಿ ಉಲ್ಲೇಖಗೊಂಡ ಪ್ರತಿಯೊಂದೂ ಪ್ರದೇಶವೂ ಇಂದಿಗೂ ಇದ್ದು, ಆದರೆ ಋಷ್ಯಬಿಲ ಎಲ್ಲಿದೆ ಎಂದು ನಿಗೂಢವಾಗಿಯೇ ಉಳಿದಿದೆ. 

Girish Malali

Thursday, May 25, 2017

ಫಲ್ಗುಣಿ ಜಲಾಶಯ ನೀರು ಮತ್ತೆ ಕಪ್ಪು ಬಣ್ಣಕ್ಕೆ

ಬಜ್ಪೆ: ಫಲ್ಗುಣಿ ಜಲಾಶಯಕ್ಕೆ ಮತ್ತೆ ಕಂಪೆನಿಗಳು ರಾಸಾಯನಿಕ ಬಿಟ್ಟಿರುವುದರಿಂದ ಅಣೆಕಟ್ಟಿನ ನೀರು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿದ್ದು, ಜಲಚರಗಳು ಮತ್ತೆ ಸಾವಿಗೀಡಾಗುತ್ತಿದ್ದು, ಮತ್ತೆ ಕೆಟ್ಟ ವಾಸನೆ ಬೀರಲಾರಂಭಿಸಿದೆ. ಬಗ್ಗೆ ಸ್ಥಳೀಯರು ಪತ್ರಕರ್ತರಿಗೆ ಮಾಹಿತಿ ನೀಡಿದ್ದು, ಬುಧವಾರ ಬೆಳಗ್ಗಿನಿಂದ ನೀರು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿರುವುದಾಗಿ ತಿಳಿಸಿದ್ದಾರೆ. ಬಾರಿ ನೆಲಮಟ್ಟದ ಮಣ್ಣೂ ಕೂಡಾ ಕಪ್ಪು ಬಣ್ಣಕ್ಕೆ ತಿರುಗಿರುವುದರಿಂದ ಆತಂಕಕ್ಕೆ ಕಾರಣವಾಗಿದೆ.
ಮಳವೂರು ಜಲಾಶಯದ ನೀರು ಕಪ್ಪು ಬಣ್ಣಕ್ಕೆ ತಿರುಗಿರುವ ವಿಚಾರದ ಬಗ್ಗೆ ಬೆಳಕು ಚೆಲ್ಲುತ್ತಿದ್ದಂತೆ, ರಾಜಕಾರಣಿಗಳು, ಅಧಿಕಾರಿಗಳ ತಂಡೋಪತಂಡವೇ ಬಂದು ಪರಿಶೀಲನೆ ನಡೆಸಿ ರಾಸಾಯನಿಕ ಹೊರಸೂಸುವ ಕಂಪೆನಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಭರವಸೆ ಇನ್ನೂ ಹಸಿರಾಗಿರುವಂತೆ ಮತ್ತೆ ಕಂಪೆನಿಗಳು ತಮ್ಮ ರಾಸಾಯನಿಕವನ್ನು ನದಿಗೆ ವಿಸರ್ಜಿಸಿದ್ದರಿಂದ ನೀರು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿದೆ ಎನ್ನಲಾಗಿದೆ. ಬುಧವಾರ ಬೆಳಗ್ಗಿನಿಂದ ಮತ್ತೆ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ರಾಯಾಯನಿಕ ಮಿಶ್ರಣಗೊಂಡಿರುವುದು ಕೂಡಾ ಪತ್ತೆಯಾಗಿದೆ. ಅಲ್ಲದೆ ನೀರಲ್ಲಿರುವ ಜಲಚರಗಳೆಲ್ಲಾ ಮತ್ತೆ ಅಸುನೀಗಲು ಆರಂಭಗೊಂಡಿದ್ದು, ಇವುಗಳನ್ನೆಲ್ಲಾ ಬಕ ಪಕ್ಷಿಗಳು ಸ್ವಾಹಾ ಮಾಡಲಾರಂಭಿಸಿದೆ. ಕಂಪೆನಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಜಲಾಶಯಕ್ಕೆ ನೀರು ಮತ್ತೆ ಮತ್ತೆ ಸೇರಿದರೆ ನೀರು ಕುಡಿಯುವುದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.






ಕಳೆದ ಭಾನುವಾರ ಮಾಲಿನ್ಯ ನಿಯಂತ್ರಣ ಮಂಡಳಿಯವರು ರಾಸಾಯನಿಕ ಸಿಂಪಡಿಸಿದ್ದರು. ಶನಿವಾರ ಸಂಜೆ ವೇಳೆ ಆಗಮಿಸಿದ್ದ ಅಧಿಕಾರಿಗಳು ನೀರಿಗೆ 1000 ಲೀಟರ್ಗಳಷ್ಟು ಹೈಡ್ರೋಜನ್ ಪೆರಾಕ್ಸೈಡ್ ಸಿಂಪಡಿಸಿದ್ದರು. ಇದು ನೀರಲ್ಲಿ ಕರಗಿರುವ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಆಕ್ಸಿಡಿಸರ್ ಆಗಿ ಕೆಲಸ ಮಾಡಿ ಕಲುಷಿತ ನೀರನ್ನು ಶುದ್ಧಗೊಳಿಸುತ್ತದೆ ಎಂದಿದ್ದರು. ರಾಸಾಯನಿಕ ಸಿಂಪಡನೆಯ ಬಳಿಕ ಮಂಗಳವಾರದಂದು ಕಲುಷಿತ ನೀರು ಶುದ್ಧೀಕರಣಗೊಂಡು ಕಪ್ಪು ಬಣ್ಣದ ನೀರು ನೀಲಿ ಬಣ್ಣಕ್ಕೆ ತಿರುಗಿತ್ತು. ಆದರೆ ಬುಧವಾರ ಬೆಳಿಗ್ಗೆ ಗಮನಿಸಿದಾಗ ನೀರಲ್ಲಿ ಮತ್ತೆ ರಾಸಾಯನಿಕ ಮಿಶ್ರಣಗೊಂಡಿರುವುದು ಗಮನಕ್ಕೆ ಬಂದಿದ್ದಲ್ಲದೆ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಅಲ್ಲದೆ ಬಾರಿ ನೆಲಮಟ್ಟದಲ್ಲಿದ್ದ ಮಣ್ಣು ಕೂಡಾ ಕಪ್ಪು ಬಣ್ಣಕ್ಕೆ ತಿರುಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರಲ್ಲದೆ, ನೀರನ್ನು ಬಳಸುವ ಬಳಕೆದಾರರೂ ಆತಂಕಕ್ಕೆ ಒಳಗಾಗಿದ್ದಾರೆ.
ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಳವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಅರ್ಬಿ ಮಾತಾಡಿ, ನೀರು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿರುವುದು ಬೆಳಕಿಗೆ ಬಂದಿದೆ. ಬಗ್ಗೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾಹಿತಿ ನೀಡಲಾಗಿದೆ. ಅಲ್ಲದೆ ನೀರನ್ನು ಬಳಸುವ ಎಂಟು ಪಂಚಾಯತ್ನವರೆಲ್ಲಾ ಸೇರಿಕೊಂಡು ಸಭೆ ನಡೆಸಿದ್ದು, ರಾಸಾಯನಿಕ ಹೊರಸೂಸುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಂಪೆನಿಗಳು ನೀರಿಗೆ ರಾಸಾಯನಿಕ ವಿಸರ್ಜಿಸುವ ಹಳೆ ಚಾಳಿಯನ್ನು ಮುಂದುವರಿಸಿದ್ದುಇದು ಮತ್ತೆ ಮತ್ತೆ ಮುಂದುವರಿಯುತ್ತಲೇ ಹೋದರೆ ನೀರು ಕುಡಿಯಲು ಅಯೋಗ್ಯವಾಗಬಹುದು ಎನ್ನುವ ಆತಂಕಕ್ಕೆ ಕಾರಣವಾಗಿದೆ.

Thursday, January 16, 2014

ಶೀಲ ಕಳೆದು ಬಾಳು ಪಡೆದ ಸನ್ನಿ


ಸನ್ನಿಲಿಯೋನ್, ಹೆಸರು ಕೇಳಿದರೆ ಸಾಕು ಹುಡುಗರ ಎದೆ ಢವಢವಗುಟ್ಟಲು ಶುರುವಾಗುತ್ತದೆ. ಏನೋ ಒಂದು ಸೂಜಿಗಲ್ಲಿನಂತಹಾ ಸೆಳೆತ ಈಕೆಯ ಹೆಸರಲ್ಲಿದೆ. ನೀಲಿಚಿತ್ರತಾರೆಯಾಗಿದ್ದ ಸನ್ನಿ ಕೊನೆಘಳಿಗೆಯಲ್ಲಿ ಬಾಲಿವುಡ್ಗೆ ಎಂಟ್ರಿ ಪಡೆದು ಜಸ್ಮ್-2ನಲ್ಲಿ ಮಿಂಚಿದ ಸನ್ನಿ ಬಗ್ಗೆ ಭಾರತೀಯರು ಅದೇನೋ ರೀತಿಯ ಅಭಿಮಾನ ಇಟ್ಟುಕೊಂಡಿದ್ದಾರೆ.
ಅಲ್ಲದೆ ಸನ್ನಿ ಬಗ್ಗೆ ಎದಿರಾಡುವವರೂ ಸಹ ಆಕೆಯ ನೀಲಿ ದೃಶ್ಯಗಳನ್ನು ಕದ್ದುಮುಚ್ಚಿ ನೋಡಿದವರೇ ಆಗಿರುತ್ತಾರೆ. ದೇಹದಲ್ಲಿ ಇನ್ನೂ ಯೌವನವಿದ್ದು ಅದನ್ನು ಹಾಗೆಯೇ ಮೈಂಟೇನ್ ಮಾಡಿಕೊಂಡು ,ಇಂದಿಗೂ ಹುಡುಗರ ಎದೆಯನ್ನು ಬಿಸಿಮಾಡ್ತಾಳೆಂದರೆ ಸನ್ನಿಯನ್ನು ಒಂದು ಲೆಕ್ಕದಲ್ಲಿ ಭಲೇ ಎನ್ನಲೇ ಬೇಕು.
ಸದ್ಯ ಭಾರತದಲ್ಲಿರುವ ಸನ್ನಿ ಈಗ ಇನ್ನೊಂದು ಚಿತ್ರದಲ್ಲಿ ನಟಿಸಲು ತೊಡಗಿದ್ದು ಗೋವಾದಲ್ಲಿ ಚಿತ್ರೀಕರಣ ನಡೆಯುತ್ತದೆ. ಆ ಚಿತ್ರದ ಹೆಸರು ಜಾಕ್ಪಾಟ್. ಇದರಲ್ಲಿ ಆಕೆಯೊಂದಿಗೆ ನಟಿಸುವವರು ಸಚಿನ್ ಜೋಶಿ. ಇದರಲ್ಲಿ ಸನ್ನಿ ಬೋಲ್ಡ್ ಆಂಡ್ ಟಾಪ್ಲೆಸ್ ಆಗಿ ಕಾಣಿಸಿಕೊಳ್ಳಲಿದ್ದಾಳೆ ಎಂಬ ಸುದ್ದಿ ಇದ್ದರೂ ಸಚಿನ್ ಜೋಶಿ ಪ್ರಕಾರ ಇದೊಂದು ಕಲಾತ್ಮಕ ಚಿತ್ರವಾಗಿದ್ದು ಅಸಭ್ಯತೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಈ ಚಿತ್ರ ಮನೆಮಂದಿ ಕೂತು ನೋಡುವ ಚಿತ್ರವೋ ಅಲ್ಲವೋ ಎಂದು ಇನ್ನು ಗೊತ್ತಾಗಬೇಕಾಗಿದೆ.
ಮೈಯನ್ನು ತೋರಿಸುವುದು ಮನೋರೋಗ ಎನ್ನುತ್ತದೆ ಮನಶಾಸ್ತ್ರ. ಎಕ್ಸಿಬಿಶಾನಿಸಂ ಡಿಸಾರ್ಡರ್ ಎಂದು ಆ ಕಾಯಿಲೆಯ ಹೆಸರು. ಒಬ್ಬರು ತನ್ನಲ್ಲಿರುವ ಕೀಳರಿಮೆಯನ್ನು ಮರೆಮಾಚಲು ರಕ್ಷಣಾತ್ಮಕ ಮನೋಂತ್ರ(ಢಿಫೆನ್ಸ್ ಮೆಕ್ಯಾನಿಸಮ್)ಕ್ಕೆ ಮೊರಹೋಗುತ್ತಾರೆ. ಇದೇ ರೀತಿಯ ಕೀಳರಿಮೆಯಿಂದ ಬಳಲುತ್ತಾ ಕೊನೆಗೆ ಅದನ್ನೇ ಬಂಡವಾಳವಾಗಿಸಿಕೊಂಡು ಬದುಕು ಕಾಣಿಕೊಂಡ ಸನ್ನಿಕಥೆ ಅಚ್ಚರಿಯನ್ನು ತರದೆ ಇರದು.
ಕೀಳರಿಮೆಯಿಂದ ಬಳಲುತ್ತಿರುವವರು ಅದರ ಸಂಕಟದಿಂದ ಹೊರಬರಲು ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗುತ್ತಾರೆ. ಈ ಕೀಳರಿಮೆಯಿಂದ ಹೊರಬರಲು ತನ್ನ ಬಾಲ್ಯದ ಗೆಳೆಯನೊಬ್ಬನ ಜೊತೆ ಸೆಕ್ಸ್ನಲ್ಲಿ ತೊಡಗಿದ ಸನ್ನಿ ಕೊನೆಗೆ ಇದೇ ವೃತ್ತಿಯಲ್ಲಿ ವಿರಾಜಮಾನವಾಗುತ್ತೇನೆ ಎಂದು ಬಹುಶಃ ಆಕೆಗೂ ಗೊತ್ತಿರಲಿಕ್ಕಿಲ್ಲ. ಸನ್ನಿ ಈ ವೃತ್ತಿಯನ್ನು ಪ್ರೀತಿಸಿದಳು, ಗೌರವಿಸಿದಳು ಕೊನೆಗೆ ಅದೇ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡಳು. ಉದ್ಯಮಗಳನ್ನು ಕಟ್ಟಿದಳು, ಕೊನೆಗೆ ನಟನೆಯಲ್ಲೂ ತೊಡಗಿದಳು.
ದೇಹಮಾರಿ ಎಲ್ಲೋ ಕಳೆದುಹೋಗಬೇಕಾಗಿದ್ದ ಸನ್ನಿ ಇಂದಿಗೂ ಜಗತ್ತೇ ತನ್ನ ಮೇಲೆ ದೃಷ್ಟಿ ಹರಿಸುವಂತೆ ಉಳಿದುಕೊಂಡಿದ್ದಾಳೆಂದರೆ ಅದು ಆಕೆಯ ದಿಟ್ಟತನಕ್ಕೆ ಸಾಕ್ಷಿಯಾಗಿದೆ ಎನ್ನಬಹುದು.
ಸನ್ನಿ ಹುಟ್ಟಿದ್ದು ಕೆನಡಾದ ಸನರ್ಿಯಾ ಎಂಬಲ್ಲಿನ ಒಂಟಾರಿಯೋದಲ್ಲಿ. ಅವಳ ತಂದೆ ಹುಟ್ಟಿದ್ದು ಟಿಬೆಟಲ್ಲಿಯಾದರೂ ಬೆಳೆದಿದ್ದು ಮಾತ್ರ ದಿಲ್ಲಿಯಲ್ಲಿ. ಆಕೆಯ ತಾಯಿ ಹಿಮಾಚಲ ಪ್ರದೇಶದ ಸಿಮರ್ೌರ್ನಲ್ಲಿ. ಹೀಗೆ ಟಿಬೆಟ್, ಕೆನಾಡ, ಹಾಗೂ ಭಾರತ ಹೀಗೆ ಮೂರು ದೇಶಗಳ ಸಂಬಂಧವನ್ನು ಹೊಂದಿರುವ ಸನ್ನಿ ಸಿಖ್ ವಂಶಕ್ಕೆ ಸೇರಿದವಳು.
ಸಣ್ಣವಳಾಗಿದ್ದಾಗಲೇ ಹುಡುಗರೊಂದಿಗೆ ಒಲವು ಹೆಚ್ಚಿಕೊಂಡಿದ್ದ ಸನ್ನಿ ಹುಡುಗರೊಂದಿಗೆ ಹಾಕಿ ಆಡುತ್ತಿದ್ದಳು. ಅದರೊಂದಿಗೆ ಸ್ಕೇಟಿಂಗ್ ಅವಳ ಆಸಕ್ತಿದಾಯಕ ಕ್ರೀಡೆಯಾಗುತ್ತು.
ಹನ್ನೊಂದು ವರ್ಷಕ್ಕೆ ಕಿಸ್, 16 ವರ್ಷಕ್ಕೆ ಸೆಕ್ಸ್:
ಸನ್ನಿ ಕ್ಯಾತೋಲಿಕ್ ಶಾಲೆಯೊಂದಕ್ಕೆ ಹೋಗುತ್ತಿದ್ದಳು. ಆಕೆ ಹೋಗುತ್ತಿದ್ದ ಶಾಲೆ ಒಂದು ಅಸುರಕ್ಷಿತ ಸ್ಥಳವಾಗಿತ್ತು. ಹನ್ನೊಂದು ವರ್ಷವಾಗುತ್ತುದ್ದಂತೆ ಹುಡುಗನೊಬ್ಬ ಅವಳನ್ನು ಚುಂಬಿಸಿದ. ಆಕೆಗೆ 16 ವರ್ಷವಾಗುತ್ತಿದ್ದಂತೆ ಬಾಸ್ಕೆಟ್ಬಾಲ್ ಪ್ಲೇಯರ್ ಒಬ್ಬನೊಂದಿಗೆ ಸೇರಿಕೊಂಡು ಕನ್ಯತ್ವವನ್ನು ಕಳೆದುಕೊಂಡಳು. 18 ವರ್ಷ ಆದಂತೆ ತನ್ನ ಗೆಳತಿಯರೊಂದಿಗೆ ಸೇರಿ ಸಲಿಂಗರತಿಯಲ್ಲೂ ತೊಡಗಿದಳು. ಆಕೆಗೆ 13 ವರ್ಷವಾದಾಗ ಆಕೆಯ ತಂದೆ ತನ್ನ ಕುಟುಂಬವನ್ನು ಕ್ಯಾಲಿಫೋನರ್ಿಯಾಕ್ಕೆ ಸ್ಥಳಾಂತರಿಸಿದರು. ಆಕೆಯ ತಂದೆಗೆ ಕುಟುಂಬ ಒಂದೇ ಕಡೆ ನೆಲೆಸಬೇಕೆಂಬ ಆಸೆ ಇತ್ತು, ಆದರೆ ವಿಧಿಯಂತೆ ಬೇರೆ ಬೇರೆ ಸ್ಥಳಕ್ಕೆ ಸ್ಥಳಾಂತರವಾಗಬೇಕಾಗುತ್ತಿತ್ತು.
ಒಂದು ಕಡೆ ಸನ್ನಿ ಹೇಳುತ್ತಾಳೆ, ನನಗೆ ಚಿಕ್ಕಂದಿನಿಂದಲೂ ಮೂಡಿಯಾಗಿರುತ್ತಿದ್ದೆ. ಕೀಳರಿಮೆಯಿಂದ ಹೊರಬರಲು ಹುಡುಗರೊಂದಿಗೆ ಹೆಚ್ಚಿನ ಸ್ನೇಹವನ್ನು ಸಂಪಾದಿಸುತ್ತಿದ್ದೆ. ಹದಿನಾರು ವರ್ಷವಾದಾಗ ಕನ್ಯತ್ವ ಕಳೆದುಕೊಂಡಿದ್ದು ಒಂದು ಆಕ್ಸಿಡೆಂಟ್. ನಾನು ಇದರಲ್ಲಿ ಕುತೂಹಲದಲ್ಲಿ ಭಾಗವಹಿಸಿದ್ದಲ್ಲ. ಮಾನಸಿಕ ಒತ್ತಡವನ್ನು ಕಳೆಯಲೆಂದು ಇದರಲ್ಲಿ ತೊಡಗುವ ಅನಿವಾರ್ಯತೆ ಬಂದಿತು. ಹೀಗೆ ಅಪ್ಸೆಟ್ ಆಗುತ್ತಿರುವಾಗಲೆಲ್ಲಾ ಸೆಕ್ಸ್ ನನಗೆ ಉತ್ತೇಜನ ನೀಡುತ್ತಿತ್ತು. ಇದರಲ್ಲೇ ವೃತ್ತಿಯನ್ನು ಕಾಣಬೇಕೆಂದು ಬಯಸಿದ್ದು ಆಮೇಲೆ. ಇದೇ ರೀತಿಯ ಮಾನಸಿಕ ದುಗುಡ ಪೋನರ್್ಸ್ಟಾರ್ ಆಗಲು ಸಹಾಯ ನೀಡಿತು ಎಂದು ಹೇಳಿದ್ದಾಳೆ. ಈಕೆಯ ಈ ಮಾತು ತುಂಬಾ ಆಲೋಚಿಸುವಂತೆ ಮಾಡುತ್ತದೆ.
ಯಾಕೆಂದರೆ ಅನೇಕ ಹೆಣ್ಣುಮಕ್ಕಳು ಮನಸ್ಸು ಪಕ್ವವಾಗುವ ಮುನ್ನವೇ ಶೀಲವನ್ನು ಕಳೆದುಕೊಂಡು ಪಡಬಾರದ ಕಷ್ಟ ಪಡುತ್ತಾರೆ.  ಹದಿವಯಸ್ಸಿನ ಹೆಣ್ಣುಮಕ್ಕಳ ಮಾನಸಿಕ ತುಮುಲಾಟವನ್ನು ಬಳಸಿಕೊಂಡು ಆಕೆಯನ್ನು ಭೋಗಿಸುತ್ತಾರೆ. ಇದರ ನಿಜವಾದ ತೊಂದರೆಯ ಬಗ್ಗೆ ಅರಿವಾಗುವುದು ಬುದ್ಧಿ ಪಕ್ವಗೊಂಡಾಗಲೇ. ಇದನ್ನು ಅರ್ಥ ಮಾಡಿಕೊಂಡರೆ ಸನ್ನಿಯ ಈ ಹೇಳಿಕೆಯಲ್ಲಿ ಪಾಠವಿದೆ ಅಂದುಕೊಳ್ಳಬಹುದು. ಆಕೆಯನ್ನು ಪೋನರ್್ಸ್ಟಾರ್ ಎಂದು ಒಂದು ದೃಷ್ಟಿಕೋನದಿಂದ ನೋಡುವ ಬದಲು ಆಕೆಯ ನಿಜವಾದ ಭಾವನೆಯನ್ನು ಅರ್ಥಮಾಡಿಕೊಂಡರೆ ಆಕೆಯ ವೃತ್ತಿ ನಮ್ಮ ಮನಸ್ಸಿಗೆ ನಾಟುವುದು ನಿಜ.
ಸನ್ನಿ ವಿದೇಶದಲ್ಲಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಳಾಗಿ ಖಾಸಗಿ ಬದುಕನ್ನು ಕಟ್ಟಿಕೊಂಡ ಶ್ರೀಮಂತ ಮಹಿಳೆ. ಆದರೆ ಇದೇ ರೀತಿಯ ಪರಿಸ್ಥಿತಿ ಭಾರತದಲ್ಲಾಗಿದ್ದರೆ ಏನಾಗಿರುತ್ತಿತ್ತು? ತನ್ನ ಸರ್ವಸ್ವವನ್ನೇ ಕಳೆದುಕೊಂಡು ಎಷ್ಟು ಮಹಿಳೆಯರು ಯಾವ ಯಾವ ಕೊಂಪೆಯಲ್ಲಿದ್ದಾರೋ ಯಾರಿಗೆ ಗೊತ್ತು?
ಪೋನರ್್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿಕೊಳ್ಳುವ ಮುಂಚೆ ಆಕೆ ಕೆಲಸ ಮಾಡಿಕೊಂಡಿದ್ದು ಜರ್ಮನ್ ಬೇಕರಿಯಲ್ಲ. ನಂತರ ಸ್ವಲ್ಪ ಕಾಲ ನಸರ್್ ಆಗಿ ಕೊನೆಗೆ ತೆರಿಗೆ ಕಂಪೆನಿಯಲ್ಲಿ ದುಡಿದಿದ್ದಳು. ಅದ್ಭುತ ಸೌಂದರ್ಯದ ಗಣಿಯಾಗಿದ್ದ ಸನ್ನಿ ಹಳದಿ ಟಾಪ್ ಮತ್ತು ಜೀನ್ಸ್ ಧರಿಸಿ ಮೇಜಿನ ಹಿಂದೆ ಕೂತಿದ್ದಳು. ಅಷ್ಟರಲ್ಲಿ ಕೆಮಾರಾ ಕ್ಲಿಕ್ ಆಯಿತು. ಈ ಒಂದು ಕ್ಲಿಕ್ ಆಕೆಯ ಜೀವನಕ್ಕೇ ಕ್ಲಿಕ್ ನೀಡಿತು ಎನ್ನಬಹುದು. ಹೀಗೆ 2002ರಲ್ಲಿ ಅಡಲ್ಟ್ ಎಂಟಟರ್ೈನ್ಮೆಂಟ್ ಎಕ್ಸ್ಪೋ ಪ್ರಚಾರಸಭೆಯಲ್ಲಿ ಕಾಣಿಸಿಕೊಂಡಳು.
ನಸರ್್ ಕಲಿಯುತ್ತಿದ್ದ ವೇಳೆ ಈಕೆಯ ಸೌಂದರ್ಯವನ್ನು ಗಮನಿಸಿದ್ದ ಈಕೆಯಕ್ಲಾಸ್ಮೇಟ್ ಒಬ್ಬ ಜಾನ್ ಸ್ಟೇವನ್ಸ್ಗೆ ಪರಿಚಯಿಸಿದ. ಜಾನ್ನ ಗೆಳೆಯನಾಗಿದ್ದ ಜೇ ಅಲೆನ್ ಪೆಂಟ್ಹೌಸ್ ಮ್ಯಾಗಜಿನ್ನ ಫೊಟೋಗ್ರಾಫರ್ ಆಗಿದ್ದ.
ಇದು ಬಿಸಿ ಬಿಸಿ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ ಮ್ಯಾಗಜಿನ್ ಆಗಿತ್ತು. ಹೀಗೆ ಪೆಂಟ್ಹೌಸ್ ನಿಯತಕಾಲಿಕೆಗೆ ಪೋಸ್ ನೀಡಿದ್ದ ಸನ್ನಿಗೆ ಕೊನೆಗೆ ಅನೇಕ ನಿಯತಕಾಲಿಕೆಗಳು ಆಕೆಗೆ ಸಾಕಷ್ಟು ದುಡ್ಡು ನೀಡಿ ಆಹ್ವಾನಿಸಿದವು. 2001ರಲ್ಲಿ ಪೆಂಟ್ಹೌಸ್ ಪೆಟ್ ಎಂಬ ಹೆಸರಿಗೆ ಪಾತ್ರಳಾದಳು. ಆಮೇಲೆ ಹಸ್ಟ್ಲರ್, ಎವಿಎನ್ ಆನ್ಲೈನ್, ಕ್ಲಬ್ ಇಂಟನರ್ಾಷನಲ್, ಹೀಗೆ ಹಲವಾರು ಪತ್ರಿಕೆಗಳಿಗೆ ಪೋಸ್ ನೀಡದ್ದರಿಂದ ಸನ್ನಿ ಜನಪ್ರಿಯಳಾದಳು.
ಆ ಸಂದರ್ಭದಲ್ಲಿ ವಿವಿಡ್ ಎಂಟಟೈನರ್್ಮೆಂಟ್ ಎಂಬ ಅಶ್ಲೀಲ ಚಿತ್ರ ಪ್ರದರ್ಶನ ಮಾಡುವ ಕಂಪೆನಿಗೆ ಮೂರು ವರ್ಷಗಳ ಕಾಲದ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಳು. ಅದರಲ್ಲಿ ಆಕೆ ಸಲಿಂಗ ಕಾಮಿನಿಯಾಗಿ ಭಾಗವಹಿಸುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಅನೇಕ ಚಿತ್ರಗಳು ಹೊರಬಂದವು.
ಆಮೇಲೆ ಸನ್ನಿ ಇದೇ ವೃತ್ತಿಯಲ್ಲಿ ಸ್ವಂತ ಉದ್ಯಮವೊಂದಕ್ಕೆ ಕೈ ಹಾಕಿದಳು. ತನ್ನ ಚಿತ್ರವನ್ನು ತಾನೇ ನಿಮರ್ಿಸತೊಡಗಿದಳು. ವಿವಿಡ್ ಎಂಟಟೈನ್ಮೆಂಟ್ನ ವಿತರಕಳಾಗಿದ್ದ ನಂತರ ಆಕೆಯ ಸ್ವತಂತ್ರವಾಗಿ ನಿರ್ವಹಿಸಿದ ಚಿತ್ರವೆಂದರೆ ಡಾಕರ್್ಸೈಡ್ ಆಫ್ ದ ಸನ್. ಇದು ಧೂಳೆಬ್ಬಿಸಿತು. ನಂತರ ನೀಲಿಚಿತ್ರಗಳಲ್ಲಿ ಕಾಣಿಸಿಕೊಂಡ ಸನ್ನಿ ಬ್ಲಾಗ್ ಒಂದನ್ನು ಸ್ಥಾಪಿಸಿ ಅದರಲ್ಲೇ ತನ್ನ ಪೋನರ್್ವೀಡಿಯೋವನ್ನು ಅಪ್ಲೋಡ್ ಮಾಡುತ್ತಿದ್ದಳು. ಆಕೆಯ ಫೊಟೋ ಕೂಡಾ ಅವಳದೇ ಬ್ಲಾಗ್ನಲ್ಲಿ ಪ್ರಸಾರವಾಗುತ್ತಿತ್ತು.
ಬಿಗ್ಬಾಸ್ ಪ್ರವೇಶ:
ಭಾರತದ ಕಲರ್ಸ್ ಚಾನೆಲ್ನಲ್ಲಿ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ 49 ದಿನಗಳ ಕಾಲ ಇದ್ದಳು. ಈ ಸಂದರ್ಭದಲ್ಲಿ ಸಾಕಷ್ಟು ವಿವಾದಗಳು ಎದ್ದಿದ್ದವು. ಪೋನರ್್ಸ್ಟಾರ್ ಆದವಳು ರಿಯಾಲಿಟಿಶೋ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ಹಲವಾರು ಮಂದಿ ತಗಾದೆ ಎತ್ತಿದ್ದರೂ ರಿಯಾಲಿಟಿ ಶೋ ಹಿಟ್ ಆಯಿತು. ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ದೂರು ಕೂಡಾ ಸಲ್ಲಿಕೆಯಾಗಿತ್ತು. ಈ ಸಂದರ್ಭದಲ್ಲಿ ಪೂಜಾ ಬೇಡಿ ಸಾಥ್ ನೀಡಿದ್ದರು. ಆಗ ಟ್ವಿಟರ್ನಲ್ಲಿ ಎರಡೇ ದಿನದಲ್ಲಿ 8000 ಮಂದಿಯನ್ನು ಅಭಿಮಾನಿಗಳಾಗಿ ಗಳಿಸಿಕೊಂಡಳು. ಇದರಿಂದಾಗಿ ಸನ್ನಿಗೆ ವ್ಯಾಪಕ ಪ್ರಚಾರ ಸಿಕ್ಕಿತು.
ಬಾಲಿವುಡ್ ಎಂಟ್ರಿ:
ಬಾಳಿವುಡ್ಗೆ ಎಂಟ್ರಿ ಪಡೆದ ಸನ್ನಿ ಕಳೆದ ವರ್ಷ 2012ರಲ್ಲಿ ಜಿಸ್ಮ್ 2 ಚಿತ್ರದಲ್ಲಿ ನಟಿಸಿ ಧೂಳೆಬ್ಬಿಸಿದ್ದಳು.
ಕೆನಾಡದಿಂದ ಅಮೇರಿಕಾದ ನಾಗರಿಕತ್ವ ಪಡೆದ ಸನ್ನಿ ಈಗ ಭಾರತದಲ್ಲಿ ಬಾಲಿವುಡ್ನಲ್ಲಿ ಬಿಸಿಯಾಗಿದ್ದಾಳೆ. ಆಕೆ ಭಾರತದ ಪೌರತ್ವ ಪಡಯುತ್ತಾಳೆಂಬ ಸುದ್ದಿಯೂ ಹಬ್ಬಿದೆ. ಆಕೆಯ ಗಂಡ ಡೇನಿಯಲ್ ವೆಬರ್ನೊಂದಿಗೆ ಸುಖವಾಗಿರುವ ಸನ್ನಿ ರಾಗಿಣಿ ಎಂಎಂಎಸ್ 2 ಮತ್ತು ಜಾಕ್ಪಾಟ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾಳೆ.
ಬೆಸ್ಟ್ ಗಲರ್್ ಇನ್ ಗ್ರೂಪ್ ಸೆಕ್ಸ್ ಅವಾಡರ್್, ಪೋನರ್್ಸ್ಟಾರ್ ಸೈಟ್ ಆಫ್ ದ ಇಯರ್ ಮುಂತಾದ ವಿಚಿತ್ರ ಪ್ರಶಸ್ತಿಗಳು ಆಕೆಗೆ ಸಿಕ್ಕಿದೆ.
ಭಾರತದಲ್ಲೇ ಇರಲು ಬಯಸುವ ಸನ್ನಿಗೆ ಈಗೀಗ ಭಾರತೀಯರ ಮನಸ್ಥಿಯ ಬಗ್ಗೆ ವಿಚಿತ್ರ ಎನಿಸುತ್ತದಂತೆ. ಈಕೆ ಚಿತ್ರವನ್ನು ನೋಡದವರೂ ಸಹ ಈಕೆಯ ಬಗ್ಗೆ ಒಂಥರಾ ಭಾವನೆಯನ್ನು ಬೆಳೆಸಿಕೊಂಡು ಮುಖ ತಿರುಗಿಸುತ್ತಾರಂತೆ. ಕೆಲವರು ಆಸಂದರ್ಭದಲ್ಲಿ ಅದರ ಬಗ್ಗೆ ಪ್ರಶ್ನೆ ಕೇಳುವುದೂ ಇದೆ. ಆದರೆ ಇದನ್ನೆಲ್ಲಾ ಮನಸ್ಸಿನಲ್ಲೇ ಇಟ್ಟುಕೊಂಡು ಬೇಸರ ವ್ಯಕ್ತಪಡಿಸದೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಒಟ್ಟಾರೆ ಭಾರತೀಯರ ಮನಸ್ಥಿಯ ಬಗ್ಗೆ ಆಕೆಗೆ ಅರ್ಥವೇ ಆಗುವುದಿಲ್ಲ. ಇದರಿಂದ ಆಕೆಗೆ ಬೇಸರವಾಗುತ್ತದಂತೆ.
ಈಕೆ ಜೊತೆ ನಟಿಸಬೇಕೆಂದರೆ ವೈದ್ಯಕೀಯ ಪ್ರಮಾಣ ಪತ್ರ ಬೇಕು!
ಸನ್ನಿ ಜೊತೆ ನಟಿಸಬೇಕೆಂದರೆ ಆತ ಆರೋಗ್ಯವಂತನಾಗಿದ್ದು ಯಾವುದೇ ಕಾಯಿಲೆಗಳಿರಬಾರದು. ವೈದ್ಯರು ಪ್ರಮಾಣ ಪತ್ರ ನೀಡಿದ ಯುವಕರಷ್ಟೇ ಈಕೆಯ ಜೊತೆ ನಟಿಸಬಹುದು. ಯಾವುದಾದರೂ ಮಾರಕ ಲೈಂಗಿಕ ಕಾಯಿಲೆ ಬರಬಹುದೆಂಬ ಭಯದಿಂದ ಈ ರೀತಿ ಮಾಡಿಕೊಂಡಿದ್ದಾಳೆ. ಜಿಸ್ಮ್ 2 ಚಿತ್ರದಲ್ಲಿ ನಟಿಸಬೇಕೆಂದಾಗ ಅದರ ನಾಯಕ ನಟ ರಂದೀಪ್ ಹೂಡ ಬಳಿಯಿಂದಲೂ ವೈದ್ಯಕೀಯ ಪ್ರಮಾಣ ಪತ್ರ ಕೇಳಿದ್ದಳು. ಆದರೆ ಇದರಲ್ಲಿ ಅಂಥಾ ದೃಶ್ಯಗಳಿರದ ಕಾರಣ ಚಿತ್ರ ನಿದರ್ೇಶಕಿ ಪೂಜಾ ಭಟ್ ಇದನ್ನು ತಿರಸ್ಕರಿಸಿದ್ದರು.
 

ಇಂಡಿಯನ್ ಸೆಕ್ಸ್ ರಾಕೆಟ್ ಪ್ರಿಯಾ ಅಂಜಲಿ ರೈ


ಭಾರತದಂತಹಾ ಸಾಂಪ್ರದಾಯಿಕ ದೇಶದಲ್ಲಿ ಹುಟ್ಟಿ ಅಲ್ಲಿಂದ ನೀಲಿಚಿತ್ರಗಳ ಮೂಲಕ ಪಡ್ಡೆಗಳ ಬದುಕನ್ನೇ ಹೈರಾಣಾಗಿಸಿದ ಇಂಡಿಯನ್ ಸೆಕ್ಸ್ ರಾಕೆಟ್ ಪ್ರಿಯಾ ಅಂಜಲಿ ರೈ ಎಂಬ ನೀಲಿ ಹುಡುಗಿಯ ಅಚ್ಚರಿಯ ಕತೆ ಇದು. ಆಕೆಯ ಬದುಕು ಆರಂಭವಾಗಿದ್ದು ಅಮೇರಿಕಾ ಸಂಯುಕ್ತ ಸಂಸ್ಥಾನದ ಮಿನ್ನೆಸೋಟಾದಲ್ಲಿ. ನವದೆಹಲಿಯ ಹಳ್ಳಿಯೊಂದರಲ್ಲಿ ಹುಟ್ಟಿದ ಈಕೆಯನ್ನು ಅಮೇರಿಕಾದ ದಂಪತಿ ದತ್ತು ತೆಗೆದುಕೊಂಡರು.
ಅಂಜಲಿ ಭಾರತಲ್ಲೇ ಹುಟ್ಟಿರುತ್ತಿದ್ದರೆ ಏನಾಗಿರುತ್ತಿದ್ದಳೋ ಏನೋ? ಆದರೆ ಅಮೇರಿಕಾದಂತಹಾ ಮುಕ್ತ ಸೆಕ್ಸ್ ವಾತಾವರಣದಲ್ಲಿ ಸಹಜವಾಗಿಯೇ ಸೌಂದರ್ಯದ ಖಣಿಯಾಗಿದ್ದ ಅಂಜಲಿ ನೀಲಿಚಿತ್ರ ತಾರೆಯಾಗಿದ್ದು ಮಾತ್ರ ವಿಶೇಷ. ತನ್ನಹನ್ನೆರಡನೇ ವಯಸ್ಸಲ್ಲೇ ಪೋನರ್ೋಗ್ರಪಿಗೆ ಪಾದಾರ್ಪಣೆ ಮಾಡಿದ ಈಕೆ ನಿಜವಾಗಿಯೂ ಆ ವೃತ್ತಿಯನ್ನು ಇಷ್ಟಪಟ್ಟು ಮಾಡಿದ್ದಳೋ ಎಂಬುದು ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಆಗ ಆಕೆಗೆ ಹನ್ನೆರಡು ವರ್ಷವಷ್ಟೆ. ತನ್ನ ವಾರಗೆಯ ಹುಡುಗನೊಬ್ಬ ಇಷ್ಟವಾದ. ಸಹಜವಾಗಿಯೇ ಲೈಂಗಿಕ ಭಾವನೆ ಮೂಡವ ವಯಸ್ಸದು. ಆದರೆ ಅದರ ಬಗ್ಗೆ ಸ್ಪಷ್ಟ ಜ್ಞಾನವಿಲ್ಲದಿದ್ದರೂ ಕುತೂಹಲಕ್ಕೆಂದು ಇವರಿಬ್ಬರೂ ಸೇರಿಕೊಂಡಿದ್ದರು. ಆಮೇಲೆ ಆ ಹುಡುಗ ಈಕೆಯನ್ನು ಒತ್ತಾಯಿಸತೊಡಗಿದಾ ಸಹಜವಾಗಿಯೇ ವ್ಯಗ್ರಳಾದಳು. ಆದರೆ ಆ ಹುಡುಗ ಈ ವಿಷಯವನ್ನು ಊರಿನಲ್ಲಿ ಕೆಟ್ಟ ಹೆಸರು ಪಡೆದಿದ್ದ ವ್ಯಕ್ತಿಯೋರ್ವರಲ್ಲಿ ಹೇಳಿದ. ಕೊನೆಗೆ ಈ ಹುಡುಗ ಮತ್ತು ಆತ ಇವಳನ್ನು ಬ್ಲ್ಯಾಕ್ಮೇಲ್ ಮಾಡಿಕೊಂಡು ಆಕೆಯನ್ನು ಬಲಾತ್ಕರಿಸಲು ನೋಡುತ್ತಿದ್ದರು. ಈ ವಿಚಾರವನ್ನು ಆಕೆ ತನ್ನ ಸ್ವಂತ ವೆಬ್ಸೈಟಲ್ಲಿ ಹೇಳಿಕೊಂಡಿದ್ದಾಳೆ. ಆದರೆ ಅವರ ಹೆಸರನ್ನು ಮಾತ್ರ ಬಹುರಂಗಪಡಿಸಿಲ್ಲ.
ನಾನು ನೀಲಿಚಿತ್ರಗಳಲ್ಲಿ ಭಾಗವಹಿಸಲು ಯಾರೂ ನನ್ನ ಒತ್ತಾಯ ಮಾಡಲಿಲ್ಲ. ನನಗೆ ನನ್ನ ವೃತ್ತಿ ಮುಖ್ಯ. ನಾನೂ ಈ ವಿಚಾರದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ಸಲ್ಲಿಸಿರಬಹುದೆಂದು ನನ್ನ ಮನಸ್ಸಿಗೆ ತೃಪ್ತಿ ಇದೆ. ಇಡೀ ಜಗತ್ತಲ್ಲಿ ನನ್ನನ್ನು ಕಂಡಿ ಕ್ಯಾಕರಿಸಿ ಉಗಿದರೂ ನನಗೇನೂ ಚಿಂತೆ ಇಲ್ಲ ಬಿಡಿ ಎಂದು ಹೇಳಿದ್ದಾಳೆ.
ಇಷ್ಟೆಲ್ಲಾ ರಾದ್ಧಾಂತ ಆಗುವ ಹೊತ್ತಿಗೆ ಆಕೆಯನ್ನು ಸಿನಿಮಾ ಕೈ ಬೀಸಿ ಕರೆದಿತ್ತು. ಆಕೆಗೆ ನೀಲಿಚಿತ್ರಗಳಲ್ಲಿ ಭಾಗವಹಿಸಬೇಕೆಂಬ ಮನಸ್ಸಿದ್ದರೂ ಅಪ್ರಾಪ್ತರನ್ನು ಲೈಂಗಿಕ ಶೋಷಣೆಗೆ ಬಳಕೆ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧವಾಗಿರುವುದರಿಂದ ಆಕೆಗೆ ಸಿನಿಮಾ ಇಂಡಸ್ಟ್ರಿ ಅವಕಾಶ ನೀಡಲಿಲ್ಲ. ಆಮೇಲೆ ಈಕೆ ಕೆನಡಾಕ್ಕೆ ವಲಸೆ ಹೋದ ನಂತರ ನೀಲಿ ಚಿತ್ರಗಳಲ್ಲಿ ಭಾಗವಹಿಸಿ ಪಡ್ಡೆಗಳ ಮನವನ್ನು ಕದ್ದಿದ್ದಳು.
ನೀಲಿಚಿತ್ರತಾರೆ ಸನ್ನಿ ಲಿಯೋನ್ ಬಿಗ್ಬಾಸ್ನಲ್ಲಿ ಮಿಂಚಿದ್ದ ನಂತರ 2013ರ ನಿಗ್ಬಾಸ್ಗೆ ಈಕೆಯನ್ನು ಕರೆತರಲು ವೇದಿಕೆ ಸಜ್ಜುಗೊಂಡಿತ್ತು. ಆದರೆ ಕೊನೆಘಳಿಗೆಯಲ್ಲಿ ಏಮೋ ಎಡವಟ್ಟಾಗಿ ಆಕೆಗೆ ಬರಲಿಕ್ಕಾಗಲಿಲ್ಲ.
ಕಾಂಡಮ್ನ ಪ್ರಚಾರಕಳಾದಳು:
ದಶಕದ ಹಿಂದೆ ಏಡ್ಸ್ ಎಂಬ ಮಹಾಮಾರಿ ದಾಂಗುಡಿ ಇಟ್ಟು ಹಲವು ಮಂದಿಯನ್ನು ನುಂಗಿ ನೀರು ಕುಡಿದ ಸಮಯವದು. ಏಡ್ಸ್ ಬಗ್ಗೆ ಸ್ಪಷ್ಟವಾದ ಮಾಹಿತಿ ಯಾರಿಗೂ ಇರಲಿಲ್ಲ. ಅದು ಹೇಗೆ ಬರುತ್ತದೆ ಎಂಬ ಬಗ್ಗೆ ಹಲವು ರೀತಿಯಲ್ಲಿ ಗೊಂದಲವಿತ್ತು. ಈ ಸಂದರ್ಭದಲ್ಲಿ ಪ್ರಿಯಾ ರೈ ಕಾಂಡಮ್ ಅದನ್ನು ಹೇಗೆ ಉಪಯೋಗಿಸುವುದು, ಅದರ ಉಪಯೋಗಗಳು ಮುಂತಾದುವುಗಳ ಬಗ್ಗೆ ಪ್ರಾತ್ಯಕ್ಷತೆ ನೀಡಿದ್ದಳು. ಇದಕ್ಕಾಗಿ ಈಕೆಯನ್ನು ಕೆನಡಾ ಸರಕಾರ ಅಭಿನಂದಿಸಿತ್ತು. ಅಲ್ಲದೆ ಜನರನ್ನು ಕಾಂಡಮ್ ಖರೀದಿಸುವಂತೆ ಪ್ರೇರೇಪಣೆ ನೀಡಿದ್ದಳು.
 

ಕರಾವಳಿಯನ್ನು ನುಂಗಲು ಸಜ್ಜಾಗಿ ನಿಂತಿರುವ ಪೈಪ್ಲೈನ್ ಮಾರಿ


ನಿಡ್ಡೋಡಿಯಲ್ಲಿ ಉಷ್ಣವಿದ್ಯುತ್ ಸ್ಥಾವರ ಹೆಮ್ಮಾರಿ ಸದ್ಯ ಮೌನಕ್ಕೆ ಶರಣಾಗಿದ್ದು ಈಗ ಮತ್ತೊಂದು ಹೆಮ್ಮಾರಿ ಕರಾವಳಿಯನ್ನು ನುಂಗಿ ನೀರು ಕುಡಿಯಲು ಸಜ್ಜಾಗಿ ನಿಂತಿದೆ. ಅದೇ ಪೈಪ್ಲೈನ್ ಅಳವಡಿಕೆ ಎಂಬ ಮಹಾಮಾರಿ. ಯೆಸ್ ಹಿಂದುಸ್ತಾನ್ ಪೆಟ್ರೋಲಿಯಂ ಕಾಪರ್ೋರಷನ್ ಲಿ. ಎಂಬ ಸಂಸ್ಥೆಯು ಮಂಗಳೂರು-ಹಾಸನ- ಮೈಸೂರು-ಸೋಲೂರು ಮುಖಾಂತರ ಎಲ್ಪಿ ಅನಿಲ ಸಾಗಾಣಿಕೆಗಾಗಿ ಪೈಪ್ ಲೈನ್ಅಳವಡಿಕೆಗೆ ಯೋಜನೆ ರೂಪಿಸಿ ಕಾಮಗಾರಿ ನಡೆಸಲು ಮುಂದಾಗಿದೆ. ಈಗಾಗಲೇ ಸಣ್ಣಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಮುಂದಿನ ದಿನ ಪ್ರತಿಭಟನೆ ಭುಗಿಲೇಳುವ ಸ್ಪಷ್ಟ ಸುಳಿವು ಎದ್ದು ಕಾಣುತ್ತಿದೆ.
ಏನದು ಎಲ್ಪಿ ಗ್ಯಾಸ್ ಪೈಪ್ಲೈನ್ ಅಳವಡಿಕೆ:
ಹಿಂದೂಸ್ತಾನ್ ಪೆಟ್ರೋಲಿಯಂ ಕಾಪರ್ೋರೇಷನ್ ಲಿ. ಎಂಬ ಕಂಪೆನಿಯ ಗ್ಯಾಸ್ ಸಾಗಾಟ ನಡೆಸಲು ಮಂಗಳೂರು-ಹಾಸನ-ಮೈಸೂರು -ಸೋಲಾಪುರ ಮೂಲಕ ಸ್ಥಳವನ್ನು ಗುರುತಿಸಲಾಗಿದೆ. ಅದರಲ್ಲಿ  ಮಂಗಳೂರಿನ ಮಳಲಿ, ಮೊಗರು, ಬಡಗುಳಿಪಾಡಿ, ತೆಂಕುಳಿಪಾಡಿ, ಕಂದಾವರ, ಅದ್ಯಪಾಡಿ, ಮರವೂರು ಮುಖಾಂತರ ತೆರಳಲಿದೆ. ಇದಕ್ಕೆ ಸಾವಿರಾರು ಎಕರೆ ಭೂಮಿ ಕಂಪೆನಿ ಪಾಲಾಗಲಿದ್ದು  ಅನಿಲವನ್ನು ಸಾಗಿಸಲು ಪೈಪ್ ಅಳವಡಿಕೆಗಾಗಿ ಸರಕಾರ ಕಾರ್ಯಯೋಜನೆಯನ್ನು ಸಿದ್ಧಗೊಳಿಸಿದೆ. ಈ ಯೋಜನೆಯಿಂದಾಗಿ ಫಲವತ್ತಾದ ಕೃಷಿಭೂಮಿ ಕಂಪೆನಿಯ ಪಾಲಾಗಲಿದ್ದು, ರೈತರು ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಈಗಾಗಲೇ ಸವರ್ೆಕಾರ್ಯ ಆರಂಭಗೊಂಡಿದ್ದು ಈ ಬಗ್ಗೆ ರೈತರಿಗೆ ಯಾವ ಮುನ್ಸೂಚನೆಯನ್ನೂ ನೀಡಿಲ್ಲ. ಒಂದು ವಾರದ ಮುಂಚೆ ಪೈಪ್ ಅಳವಡಿಸಲಾಗುವ ಜಾಗಕ್ಕೆ ಅಧಿಕಾರಿಗಳು ಬಂದು ಜಾಗದ ಪತ್ರಗಳನ್ನು ನೀಡಿ ಸಹಿ ಹಾಕಿಸಲು ಕೇಳಿದ್ದರು. ಆದರೆ ಅಪಾಯದ ಮುನ್ಸೂಚನೆ ಅರಿತ ರೈತರು ಇದನ್ನು ಹರಿದು ಬಿಸಾಡಿದ್ದಾರೆ.
ಸುಮಾರು ಒಂದುವಾರದ ಮುಂಚೆ ಕಂಪೆನಿಯ ಬುಲ್ಡೋಜರ್ ಇದ್ದಕ್ಕಿದ್ದಂತೆ ಮಳಲಿಗೆ ಆಗಮಿಸಿ ಏಕಾಏಕಿ ಮಣ್ಣು ಅಗೆಯಲು ಆರಂಭಿಸಿತ್ತು, ಈ ವೇಳೆ ರೈತರು ಆಗಮಿಸಿ ಪ್ರಶ್ನಸಿದಾಗ ಪೈಪ್ ಲೈನ್ ಅಳವಡಿಕೆಯ ವಿಚಾರವನ್ನು ಪ್ರಸ್ತಾಪಿಸಿದ್ದ. ಈ ಬಗ್ಗೆ ರೈತರಿಗೆ ಯಾವ ಸುಳಿವೂ ಇರಲಿಲ್ಲ. ಕೊನೆಗೆ ರೈತರೇ ಒಟ್ಟಾಗಿ ಬುಲ್ಡೋಜರ್ ವಾಹನದವನ್ನು ತರಾಟೆಗೆ ತೆಗೆದು ಗುರುಪುರ ಕೈಕಂಬದವರೆಗೆ ಓಡಿಸಿ ಆತನನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು. ರೈತರಿಗೆ ಭೂಮಿ ಕಂಪೆನಿ ಪಾಲಾಗುತ್ತದೆ ಎಂಬ ಮಾಹಿ ಅರಿವಾಗಿದ್ದೇ ಈ ಘಟನೆಯ ನಂತರ. ಈ ಮಾಹಿತಿ ಸಿಗುತ್ತಿದ್ದಂತೆ ರೈತರು ಒಟ್ಟಾಗಿದ್ದು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಭೂಮಿಯ ಮೌಲ್ಯದ ಶೇ.10ರಷ್ಟು ಮಾತ್ರ ಪರಿಹಾರ:
ಪೈಪ್ ಅಳವಡಿಕೆಗೆ ಉದ್ದೇಶಿಸಲಾಗಿರುವ ಭೂಮಿಯನ್ನು ಸರಕಾರ ಭೂಮಿಯ ನಿಜವಾದ ಮೌಲ್ಯದ ಕೇವಲ 10 ಶೇ. ಮೌಲ್ಯಕ್ಕೆ ಖರೀದಿಸಲು ಉದ್ದೇಶಿಸಿದೆ. ಇದರಿಂದ ನೂರಾರು ಮಂದಿ ರೈತರು ಭಾರೀ ನಷ್ಟವನ್ನು ಅನುಭವಿಸಲಿದ್ದಾರೆ. ಸರಕಾರ ಕೃಷಿಭೂಮಿಗೆ ಬೆಲೆ ಎಕರೆ ಒಂದಕ್ಕೆ 2.5ಲಕ್ಷ ನಿಗದಿ ಪಡಿಸಿದೆ. ಆದರೆ ಇಲ್ಲಿನ ಕೃಷಿಭೂಮಿಯ ಮೌಲ್ಯ ಸೆಂಟ್ಸ್ ಒಂದಕ್ಕೆ ಮಾರುಕಟ್ಟೆ ಬೆಲೆಯೇ ಲಕ್ಷದ ಗಡಿಯನ್ನು ದಾಟುತ್ತದೆ. ಸರಕಾರದ ನಿಗದಿಪಡಿಸಿದ ಎಕರೆಗೆ ಎರಡೂವರೆ ಲಕ್ಷ ಪರಹಾರವನ್ನು ಹತ್ತು ಶೇಖಡಾಕ್ಕೆ ಭಾಗಿಸಿದರೆ ರೈತರಿಗೆ ಸಿಗುವ ಹಣ ಎಕರೆಯೊಂದಕ್ಕೆ ಇಪ್ಪತೈದು ಸಾವಿರ ಮಾತ್ರ. ಅದರ ಪ್ರಕಾರ ಸೆಂಟ್ಸ್ಗೆ ಎರಡುವರೆ ಸಾವಿರ ರೂ ಮಾತ್ರ ಸಿಗುತ್ತದೆ. ಇದು ರೈತರಿಗೆ ಸರಕಾರ ಮತ್ತು ಕಂಪೆನಿ ಸೇರಿ ಮೋಸ ಮಾಡುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಅಲ್ಲದೆ ಅಲ್ಲಿ ಬೆಳೆಯಲಾಗಿದ್ದ ಅಡಿಕೆ, ತೆಂಗಿಗೆ ಸಾವಿರದ ಒಳಗಡೆ ಬೆಲೆಯನ್ನು ಕಟ್ಟಲಾಗುತ್ತದೆ. ಇದರಿಂದ ರೈತರು ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸಬೇಕಾಗುತ್ತದಲ್ಲದೆ, ಕೃಷಿ ಚಟುವಟಿಕೆ ಸಂಪೂರ್ಣ ಸ್ತಗಿತಗೊಂಡು ಲಕ್ಷಾಂತರ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಸುಮಾರು ಹನ್ನೆರಡು ವರ್ಷಗಳ ಮುಂಚೆ ಇದೇ ಹಾದಿಯಲ್ಲಿ ಡೀಸೆಲ್ ಪೈಪ್ಲೈನ್ ಹಾದುಹೋಗಿತ್ತು, ಆಗ ಸಿಗಬೇಕಾಗಿದ್ದ ಪರಿಹಾರದ ಮೊತ್ತ ಇನ್ನೂ ರೈತರ ಕೈಗೆ ಸೇರಲಿಲ್ಲ. ಕಂಗು ಹಾಗೂ ತೆಂಗಿಗೂ ಕೂಡಾ ಕೇವಲ ಮುನ್ನೂರು ರೂಗಳನ್ನು ನಿಗದಿಪಡಿಸಲಾಗಿತ್ತು. ಅಲ್ಲದೆ ಈ ಜಾಗದಲ್ಲಿ ಈಗ ಕೃಷಿ ಚಟುವಟಿಕೆಗಳನ್ನು ನಡೆಸಲಾಗುವುದಿಲ್ಲ.
ಡೀಸೆಲ್ಪೈಪ್ಲೈನ್ ಅಳವಡಿಕೆ ಮಾಡಿದರೂ ಕಂಪೆನಿ ಯಾವ ರೀತಿಯಲ್ಲಿ ಸುರಕ್ಷಿತ ನಿಯಮಗಳನ್ನು ಪಾಲಿಸುತ್ತದೆಯೋ ಎಂದು ಹೇಳಲಾಗದು. ಯಾಕೆಂದರೆ ಇಲ್ಲಿ ಹಾದುಹೋಗಿರುವ ಪೈಪ್ಲೈನ್ನಿಂದ ನಿರಂತರವಾಗಿ ಡೀಸೆಲ್ ಕಳ್ಳತನ ನಡೆಯುತ್ತಲೇ ಇದೆ. ಈಗಾಗಲೇ ಉಪ್ಪಿನಂಗಡಿಯ ಪೆನರ್ೆ ಗ್ಯಾಸ್ ಟ್ಯಾಂಕರ್ ದುರಂತ ಕಣ್ಣ ಮುಂದಿದೆ. ಕೇವಲ ಒಂದು ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದ್ದಕ್ಕೆಯೇ ಹಲವಾರು ಮಂದಿಯ ಪ್ರಾಣ ಹರಣವಾಗಿದ್ದು ಹಲವಾರು ಮನೆಗಳು ಧ್ವಂಸಗೊಂಡಿತ್ತು. ಗ್ಯಾಸ್ಪೈಪ್ಲೈನ್ ಕೂಡಾ ಯಾವ ಸುರಕ್ಷಿತ ಮಾನದಂಡಗಳನ್ನು ಅಳವಡಿಸುತ್ತದೆ ಎಂದು ಹೇಳಲಾಗದು. ಒಂದು ವೇಳೆ ಪೈಪ್ಲೈನ್ ಸ್ಫೋಟಿಸಿದ್ದೇ ಆದರೆ ಅದರ ಪರಿಣಾಮವನ್ನು ಊಹಿಸುವುದೂ ಕಷ್ಟ. ಅಲ್ಲೆ ಡೀಸೆಲ್ಪೈಪ್ಲೈನ್ನಲ್ಲಿ ಡೀಸೆಲ್ ಕಳ್ಳತನ ನಡೆದಂತೆ ಕಳ್ಳರು ಗ್ಯಾಸ್ಪೈಪ್ಲೈನ್ಗೆ ಕನ್ನತೊರೆದು ಕದಿಯಲು ಆರಂಭಿಸಿ ಅದರಿಂದ ಅನಾಹುತ ಉಂಟಾದರೆ ಅದರ ಭೀಕರ ಪರಿಣಾಮವನ್ನು ದ.ಕ. ಜಿಲ್ಲೆ ಅನುಭವಿಸಬೇಕಾಗುತ್ತದೆ.
ಅಪಾರ ಕೃಷಿಭೂಮಿಯನ್ನು ಸ್ವಾಹಾ ಮಾಡಿಕೊಂಡು ರೈತರನ್ನು ಬೀದಿಗೆ ತಳ್ಳುವಂಥಾ ಇಂಥಾ ಯೋಜನೆಯನ್ನು ಸರಕಾರ ಖಂಡಿತಾ ಕೈಬಿಡಬೇಕು ಎಂದು ಪೈಪ್ಲೈನ್ ವಿರೋಧಿ ಹೋರಾಟ ಸಮಿತಿಯ ಒತ್ತಾಯವಾಗಿದೆ. ಈಗಾಗಲೇ ಕೆಪಿಟಿಸಿಎಲ್ನಿಂದ ಹೈಟೆನ್ಷನ್ ವಯರ್ ಹಾದು ಹೋಗಿದೆ. ಕೆಐಡಿಬಿಯವರು ಗಂಜಿಮಠದಲ್ಲಿ ಇಂಡಸ್ಟ್ರಿಯಲ್ ಪ್ರಮೋಶನ್ ಪಾಕರ್್ ನಿಮರ್ಾಣಕ್ಕೆ 500 ಎಕರೆ ಕೃಷಿಭೂಮಿಯನ್ನು ಕಸಿದುಕೊಂಡಿದೆ. ಇದೀಗ ಗ್ಯಾಸ್ಪೈಪ್ಲೈನ್ ಅಳವಡಿಕೆ ಕೃಷಿಕರನ್ನು ದುಸ್ವಪ್ನದಂತೆ ಕಾಡುತ್ತದೆ.

Friday, January 10, 2014

ಕೊಲೆಯಾಗಿ ಹೋದ ಸೌಜನ್ಯಾಳ ಕಣ್ಣೀರ ಕಥೆ...ಚಿಕ್ಕಂದಿನಿಂದಲೂ ಆಧ್ಯಾತ್ಮದ ಬಗಗೆ ವಿಶೇಷ ಆಸಕ್ತಿ ವಹಿಸುತ್ತಿದ್ದ ಧರ್ಮಸ್ಥಳದ ಹುಡುಗಿ ಕಾಮ ಪಿಪಾಸುಗಳ ಕೈಗೆ ಸಿಕ್ಕು ಬಲಿಯಾಗಿ ಒಂದು ವರ್ಷವಾಗ್ತಾ ಬಂದಿದೆ. ಆದರೂ ನಿಜವಾದ ಆರೋಪಗಳ ಪತ್ತೆಯಾಗಲಿಲ್ಲ ಎನ್ನುವುದು ಇನ್ನೊಂದು ನೋವಿನ ಸಂಗತಿ. ಆಕೆಯ ಬಾಳಿನ ಸಂಕ್ಷಿಪ್ತ ಕಥೆಯ ಇಣುಕುನೋಟ ಇಲ್ಲಿದೆ.
ಧರ್ಮಸ್ಥಳದಲ್ಲಿ ಮಂಜುನಾಥನ ಸನ್ನಿಧಿ ಇರುವುದರಿಂದಲೇ ವಿಶ್ವವಿಖ್ಯಾತ ಗಳಿಸಿದೆ. ಜೊತೆಗೆ ಸೌಮ್ಯವಾಗಿ ಹರಿಯುವ ನೇತ್ರಾವತಿ ನದಿ. ಗುಡ್ಡ ಬೆಟ್ಟ, ಮರಗಿಡಗಳಿಂದ ತುಂಬಿದ ಈ ಊರನ್ನು ನೋಡುವುದೇ ಒಂದು ಚಂದ. ಅಲ್ಲದೆ ಧರ್ಮಸ್ಥಳ ಮಂಜುನಾಥನ ಶಕ್ತಿ ಕೇಂದ್ರ. ಅಣ್ಣಪ್ಪ ಮತ್ತು ಪರಿವಾರ ದೈವಗಳ ಕಾರಣಿಕದ ಸ್ಥಳ. ಆದುದರಿಂದಲೇ ಇಲ್ಲಿನ ಜನರಲ್ಲಿ ಸಹಜವಾದ ಸಂಸ್ಕಾರವೊಂದು ನೆಲೆಗೂಡಿದೆ.
ಅದು ಧರ್ಮಸ್ಥಳದ ಪಾಂಗಳ ಎಂಬ ಹಳ್ಳಿ. ಅಲ್ಲಿ ಇದೆ ಬಾಬುಗೌಡರ ತುಂಬು ಕುಟುಂಬ. ಇದೇ ಕುಟುಂಬದಲ್ಲಿ ಜನಿಸಿದಳು ಸೌಜನ್ಯ. ನಾಲ್ಕು ಹೆಣ್ಣು ಮಕ್ಕಳು ಒಬ್ಬ ಗಂಡು ಮಗಳಲ್ಲಿ ಎರಡನೆಯವಳೇ ಸೌಜನ್ಯ. ಅಕ್ಟೋಬರ್ ೧೮, ೧೯೯೫ರಲ್ಲಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಗೆ ಹುಟ್ಟಿದ ಸೌಜನ್ಯಳನ್ನು ಕಂಡು ಮನೆಮಂದಿಯೆಲ್ಲಾ ಸಾಕ್ಷಾತ್ ಲಕ್ಷ್ಮೀದೇವಿಯೇ ಆಮಿಸಿದ್ದಾಳೆ ಎಂದು ಭಾವಿಸಿದ್ದರು.
ಸೌಮ್ಯವಾಗಿದ್ದ ಈ ಮುದ್ದು ಮುಖದ ಕಂದ ಸೌಜನ್ಯಾ ಬಾಲ್ಯದಿಂದಲೇ ಸಹಜವಾಗಿ ದೈವಭಕ್ತೆಯಾಗಿದ್ದಳು. ಆಧ್ಯಾತ್ಮದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಳು. ಜೊತೆಗೆ ಮಂಜುನಾಥನ ಭಕ್ತೆಯಾಗಿದ್ದಳು.
ಆಕೆಯ ಬಾಲ್ಯದ ಆಟವೆಂದರೆ ಅದು ದೇವರ ಆಟ. ತನ್ನ ಅಕ್ಕ ತಂಗಿ, ತಮ್ಮಂದಿರ ಜೊತೆ ಸೇರಿ ಕಲ್ಲುಗಳನ್ನು ಜೋಡಿಸಿ, ಅದಕ್ಕೆ ಹೂ, ಅರಶಿನ ದಾರವನ್ನು ಕಟ್ಟಿಕೊಂಡು ಇದು ಸಾಕ್ಷಾತ್ ಮಂಜುನಾಥನೇ ಎಂದು ನಂಬಿಕೊಂಡು ಆರಾಧಿಸುತ್ತಿದ್ದಳು. ಈಕೆಯ ಆಟವನ್ನು ಕಂಡು ಮನೆಮಂದಿಗೆಲ್ಲಾ ಒಂತರಾ ಪುಳಕ, ಖಷಿ. ಅಲ್ಲದೆ ಚಿಕ್ಕಂದಿನಿಂದಲೇ ಅದ್ಭುತ ಗ್ರಹಣ ಶಕ್ತಿ, ತಿಳುವಳಿಕೆ ಹೊಂದಿದ್ದ ಈಕೆಯ ದೈತ್ಯ ಪ್ರತಿಭೆಯನ್ನು ಕಂಡು ಎಲ್ಲರಿಗೂ ಅಚ್ಚರಿಯೋ ಅಚ್ಚರಿ. ಮುಂದೊಂದು ದಿನ ಈಕೆ ಏನಾದರೊಂದು ಸಾಧನೆ ಮಾಡಿಯೇ ಮಾಡುತ್ತಾಳೆ ಎಂದು ತಾಯಿ ಕುಸುಮಾವತಿ ನಂಬಿಕೊಂಡಿದ್ದರು.
ಆಗ ಸೌಜನ್ಯಳಿಗೆ ಮೂರು ವರ್ಷ. ಆಗ ಅವಳನ್ನು ಅಂಗನವಾಡಿಗೆ ಸೇರಿಸಲಾಯ್ತು. ಆಕೆಯ ಬುದ್ಧಿ ಪಕ್ವವಾಗುತ್ತಿದ್ದಂತೆ ದೇವರ ಮೇಲೆ ಇನ್ನಷ್ಟು ಆಸಕ್ತಿವಹಿಸಿಕೊಂಡಳು. ಮನೆಗೆ ಬಂದು ಅಜ್ಜ ಅಜ್ಜಿಯವರಲ್ಲಿ ಮಂಜುನಾಥ ಸ್ವಾಮಿಯ ಕಥೆ ಹೇಳುವಂತೆ ಪೀಡಿಸುತ್ತಿದ್ದಳು. ಈ ಕಥೆಯನ್ನು ಅಂಗನವಾಡಿಯ ಗೆಳತಿಯರೊಂದಿಗೆ ಹೇಳುವುದು ಈಕೆಗೆ ಬಲು ಇಷ್ಟ. ಪ್ರಾಣಿ ಪಕ್ಷಿಗಳಲ್ಲೂ ಆಸಕ್ತಿ ವಹಿಸಿಕೊಂಡ ಸೌಜನ್ಯಾ ದಾರಿಯಲ್ಲಿ ತಿರುಗಾಡುತ್ತಿದ್ದ ಮುದ್ದು ಪ್ರಾಣಿಗಳನ್ನು ಅಪ್ಪಿ ಮುದ್ದಾಡಿ ಏನಾದರೊಂದು ತಿಂಡಿ ಹಾಕಿ ಕಳಿಸುತ್ತಿದ್ದಳು.
ಒಂದು ದಿನ ಸೌಜನ್ಯಳಿಗೆ ಏನೆನಿಸಿತೋ ಏನೋ? ಮಣ್ಣಿನ ಗೊಂಬೆಯೊಂದನ್ನು ತಯಾರಿಸಿ ಅದಕ್ಕೆ ಬಟ್ಟೆ ಬರೆಗಳನ್ನು ತೊಡಿಸಿ ಶೃಂಗರಿಸತೊಡಗಿದಳು. ಆಕೆಯ ಪ್ರಕಾರ ಅದು ಮಂಜುನಾಥ ಸ್ವಾಮಿಯಂತೆ. ಅದನ್ನೇ ಪೂಜಿಸಿ ಕೃತಾರ್ಥಳಾಗುತಿದ್ದಳು.
ನಂತರ ಸೌಜನ್ಯಳಿಗೆ ಆರು ತುಂಬಿತು. ಅಮ್ಮ ಅವಳನ್ನು ಧರ್ಮಸ್ಥಳದ ಪ್ರಾಥಮಿಕ ಶಾಲೆಗೆ ಕಳುಹಿಸಿದರು. ಆಕೆ ಎಂದಿಗೂ ಶಾಲೆಗೆ ಹೋಗಲು ತಕರಾರು ಎತ್ತಿದವಳಲ್ಲ. ವಯಸ್ಸಿಗೆ ಮೀರಿದ ಬುದ್ಧಿ ಶಕ್ತಿಯಿಂದಲೇ ಪ್ರಾಥಮಿಕ ಶಿಕ್ಷಣದಲ್ಲೂ ಸೈ ಎನಿಸಿದಳು. ಶಾಲೆಕಳ್ಳಿಯಾಗದೆ, ತನ್ನ ಪುಸ್ತಕವನ್ನು ತಾನೇ ಹೊಂದಿಸಿ, ಅತ್ತ ಅಮ್ಮನಿಗೂ ಸಹಾಯ ಮಾಡಿಕೊಂಡು ಹೋಗುತ್ತಿದ್ದಳು. ಸಹಪಾಠಿಗಳಿಗೂ ಆಕೆಯ ಮೇಲೆ ಶಿಕ್ಷಕರಿಗೂ ಅಚ್ಚುಮೆಚ್ಚು.
ನಂತರ ಸೌಜನ್ಯಾ ಎಸ್‌ಡಿಎಂನಲ್ಲಿ ಹೈಸ್ಕೂಲು ಶಿಕ್ಷಣಕ್ಕೆ ಅಡಿ ಇಟ್ಟಳು. ಸೌಜನ್ಯಾ ಎಂದೂ ಜಾಲಿ ಮಾಡಿದ ಹುಡುಗಿಯಲ್ಲ. ದೇವರ ಧ್ಯಾನ, ಭಜನೆ ಮಾಡಿಕೊಂಡು ಮಂಜುನಾಥನಲ್ಲಿ ಐಕ್ಯಳಾಗುತ್ತಿದ್ದಳು. ತಾನಾಯಿತು ತನ್ನ ಶಿಕ್ಷಣವಾಯ್ತು ಅಷ್ಟೆ.
ಆಕೆಯ ತಾತ ಬಾಬುಗೌಡ ಆಕೆಯ ಗುಣದ ಬಗ್ಗೆ ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರಲ್ಲಿ ಒಂದು ಜೀಪಿತ್ತು. ಸೌಜನ್ಯ ಹೋಗುವ ದಾರಿಯಲ್ಲೇ ಇವರದ್ದೂ ಪಯಣ. ಒಂದು ದಿನ ಇದ್ದಕ್ಕಿದ್ದಂತೆ ತನ್ನ ಜೀಪನ್ನು ಹತ್ತಿರದಲ್ಲೇ ನಿಲ್ಲಿಸಿದರೂ ತಲೆ ಎತ್ತಿ ನೋಡಲಿಲ್ಲ ಸೌಜನ್ಯ. ಕೊನೆಗೆ ತಾತನೇ ಬುದ್ಧಿ ಹೇಳಿ ನಾನು ನಿನ್ನ ಹತ್ತಿರಲ್ಲೇ ಜೀಪು ನಿಲ್ಲಿಸಿದರೂ ಯಾಕೆ ತಲೆ ಎತ್ತಿ ನೋಡಬಾರದೇ? ಹೀಗೆ ಮಾಡುವುದು ಅಪಾಯ ಎಂದಾಗ, ನನಗೆ ಮಂಜುನಾಥ ಸ್ವಾಮಿಯ ಕೃಪೆ ಇದೆ ನಾನ್ಯಾಕೆ ಹೆದರಬೇಕು ಅಜ್ಜಾ ಎಂದು ಪ್ರಶ್ನಿಸಿದ್ದಳು. ಅವಳ ಧೈರ್ಯವನ್ನು ಕಂಡು ಈಗಲೂ ಕಣ್ಣೀರಾಗುತ್ತಾರೆ ಬಾಬುಗೌಡ.
ಹತ್ತನೇ ತರಗತಿಯಲ್ಲಿ ಬರೋಬ್ಬರಿ ೭೫ ಶೇ. ಅಂಕದೊಂದಿಗೆ ಉತ್ತೀರ್ಣಳಾದಳು. ನಂತರ ಈಕೆಯನ್ನು ಎಸ್‌ಡಿಎಂ ಕಾಲೇಜ್‌ಗೆ ಸೇರಿಸಲಾಯ್ತು. ಕಾಲೇಜ್‌ನಲ್ಲಿ ಇದ್ದಾಗಲೂ ಆಕೆ ಜಾಲಿ ಮಾಡುತ್ತಿರಲಿಲ್ಲ. ತಾನಾಯ್ತು ತನ್ನ ಕೆಲಸವಾಯ್ತು. ಯಾರೊಂದಿಗೂ ಜಗಳ ಕಾಯ್ತಿರಲಿಲ್ಲ. ಕಡಿಮೆ ಮಾತು, ಸರಳ ವ್ಯಕ್ತಿತ್ವ. ಮೊಬೈಲ್ ಅಂದ್ರೆ ಅಷ್ಟೇ ದೂರ. ಈ ಬಗ್ಗೆ ಆಕೆಯ ಗೆಳತಿ ವರ್ಷಾ ಈಗಲೂ ನೆನಪಿಸಿಕೊಳ್ಳುತ್ತಾಳೆ.
ಈ ಸಂದರ್ಭದಲ್ಲಿ ಆಕೆ ಮಾವನ ವಿಠ್ಠಲ ಗೌಡ ಅವರ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಳ್ಳಲು ಆರಂಭಿಸಿದ್ದಳು. ಜೊತೆಗೆ ತೋಟದಲ್ಲಿ ಅಡಿಕೆ ಸುಲಿಯುವುದು, ತೋಟಕ್ಕೆ ಗೊಬ್ಬರ ಹೊರುವುದು. ಶುಕ್ರವಾರ ದಿವಸ ದೇವರಿಗೆ ಹೂವಿನ ಮಾಲೆಯನ್ನು ಅರ್ಪಿಸದೆ ಕಾಲೇಜ್‌ಗೆ ಹೋಗುತ್ತಿರಲಿಲ್ಲ. ಇಂಜಿನಿಯರ್ ಆಗಬೇಕೆಂದು ಕನಸು ಕಂಡಿದ್ದಳು.
ನೆನಪಿನಂಗಳಕ್ಕೆ ಇಳಿದ ಮಾವ ವಿಠ್ಠಲ ಗೌಡ:
ಸೌಜನ್ಯಾಳ ಬಗ್ಗೆ ನೆನಪಿನಂಗಳಕ್ಕೆ ಇಳಿದ ಆಕೆಯ ಮಾವ ವಿಠ್ಠಲ ಗೌಡ, ಮನೆಯಲ್ಲೆ ಆಕೆಯೇ ಟೀಚರ್. ರಜೆಯ ದಿವಸದಲ್ಲಿ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ನನ್ನ ಹೋಟೆಲ್‌ಗೆ ಕೆಲಸ ಮಾಡಲು ಬರುತ್ತಿದ್ದಳು. ಅಡಿಗೆಯಿಂದ ಹಿಡಿದು ಟೇಬಲ್ ಒರಸುವುದು, ಪಾತ್ರೆ ತೊಳೆಯುವುದು, ಗಲ್ಲಾ ಪೆಟ್ಟಿಗೆಯಲ್ಲಿ ಕುಳಿತು ನನಗೆ ಸಹಾಯ ಮಾಡುತ್ತಿದ್ದಳು. ನಾವಾ ಆಕೆಗೆ ನೂರೋ, ಇನ್ನೂರೋ ಕೊಡುತ್ತಿದ್ದೆವು. ಅದನ್ನು ಆಕೆ ತನ್ನ ಬ್ಯಾಂಕ್‌ನ ಉಳಿತಾಯ ಖಾತೆಗೆ ಹಾಕುತ್ತಿದ್ದಳು. ಎಂಜಿನಿಯರ್ ಮುಗಿಸಿ ತಾಯಿಗೊಂದು ಕೈನಟಿಕ್ ಸ್ಕೂಟರ್ ತೆಗೆಸಿಕೊಡಬೇಕೆಂದು ಕನಸು ಕಂಡಿದ್ದಳು. ಆ ಸಂದರ್ಭದಲ್ಲಿ ಆಕೆಯ ಅಕ್ಕ ಸೌಮ್ಯಳಿಗೆ ಮದುವೆ ಫಿಕ್ಸ್ ಆಗಿತ್ತು. ಈ ಸಂದರ್ಭದಲ್ಲಿ ೨೦೦೦ ರೂ. ಹಣವನ್ನು ಕೂಡಿಟ್ಟುಕೊಂಡದ್ದ ಸೌಜನ್ಯಾ ತನನ ಅಕ್ಕನ ಮದುವೆಗೆ ನನ್ನ ಬಟ್ಟೆಯನ್ನು ನಾನೇ ತೆಗೆದುಕೊಳ್ಳುತ್ತೇನೆ. ನೀವು ಅದಕ್ಕಾಗಿ ಖರ್ಚು ಮಾಡುವುದು ಬೇಡ ಎಂದು ಹೇಳಿದ್ದಳು ಎಂದು ಆಕೆಯ ಮಾವ ಎಂದು ನೆನಪಿಸಿಕೊಳ್ಳುತ್ತಾರೆ.
ಅದರಂತೆ ಆಕೆಯ ಅಕ್ಕನ ಮದುವೆಗೆಂದು ಆಕೆಯೇ ಕೊಂಡಿದ್ದ ವಾಚ್, ಬಳೆ, ಚೂಡಿದಾರ್ ಈಗಲೂ ಮನೆಯಲ್ಲಿ ಭದ್ರವಾಗಿದೆ. ಆಕೆಯ ಪುಸ್ತಕ, ಬ್ಯಾಗ್ ಕೊಡೆಯನ್ನು ಮನೆಯವರು ಇಂದಿಗೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ.
ಸೌಜನ್ಯಾಳ ಪಾಲಿಗೆ ಕರಾಳ ಅಧ್ಯಾಯ ಬರೆದ ಅಕ್ಟೋಬರ್ ೯, ೨೦೧೨:
ಅಂದು ಅಕ್ಟೋಬರ್ ೯, ೨೦೧೨ನೇ ಇಸ್ವಿ. ಎಂದಿನಂತೆ ತನ್ನ ಅಮ್ಮ ಕುಸುಮಾವತಿಯವರನ್ನು ಕರೆದು, ‘ಅಮ್ಮಾ ಕಾಲೇಜ್‌ಗೆ ಹೋಗಿ ಮಧ್ಯಾಹ್ನ ೧.೩೦ಗೆ ಮನೆಗೆ ಬರುತ್ತೇನೆ. ಮನೆಯಲ್ಲಿ ಎಲ್ಲರೂ ಒಟ್ಟಾಗಿ ಊಟ ಮಾಡೋಣ ಎಂದು ಹೇಳಿದ್ದಳು. ಆಗ ಅಮ್ಮ ಆಕೆಯ ಮುಖವನ್ನೂ ನೋಡದೆ ಮನೆಯೊಳಗಿನಿಂದಲೇ ಹೂಂಗುಟ್ಟಿದ್ದರು. ಆದರೆ ಆಕೆ ಮರುದಿನ ಆಗಮಿಸಿದ್ದು ಹೆಣದ ರೂಪದಲ್ಲಿಯೇ.
ತನ್ನಿಬ್ಬರು ಗೆಳತಿಯರೊಂದಿಗೆ ಉಜಿರೆಯ ಬಸ್ ಹತ್ತಿ ಕಾಲೇಜ್‌ಗೆ ತೆರಳಿದ್ದಳು. ನಂತರ ಮಧ್ಯಾಹ್ನ ಉಜಿರೆಯಿಂದ ಬಸ್ ಹತ್ತಿ ಶಾಂತಿವನ ಬಸ್‌ನಿಲ್ದಾಣದಲ್ಲಿ ಇಳಿದಿದ್ದಾಳೆ. ಇದನ್ನು ಅಲ್ಲಿನ ಟೀ ಅಂಗಡಿಯವ ನೋಡಿದ್ದಾನೆ. ಪಾಂಗಳಕ್ಕೆ ಹೋಗಬೇಕಾದರೆ ಅಲ್ಲೊಂದು ಕಾಲುದಾರಿಯಿದೆ. ನಿತ್ಯವೂ ಅಲ್ಲಿಂದಲೇ ಮನೆಗೆ ಬರುತ್ತಿದ್ದ ಸೌಜನ್ಯ ಅಂದು ಮನೆಗೆ ಬರಲೇ ಇಲ್ಲ. ಹೀಗೆ ಮನೆಯವರು ಆರು ಗಂಟೆಯವರೆಗೆ ಕಾದರು. ನಂತರ ಮನೆಯವರೆಲ್ಲಾ ಸೇರಿ ಹುಡುಕಾಡಿದರೂ ಸೌಜನ್ಯ ಸಿಗಲಿಲ್ಲ. ತಕ್ಷಣ ಪಕ್ಕದ ಹೊರಠಾಣೆ ಮತ್ತು ಬೆಳ್ತಂಗಡಿ ಠಾಣೆಗೆ ದೂರಿಟ್ಟರು. ಪೊಲೀಸರು ತಕ್ಷಣ ಆಕೆಯ ಹುಡುಕಾಟದಲ್ಲಿ ತೊಡಗಿದರು.
ಸ್ವಲ್ಪ ಹೊತ್ತಿನ ಬಳಿಕ ಶಾಂತಿವನದಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಸೌಜನ್ಯಾಳ ಅರೆನಗ್ನ ದೇಹ ಪತ್ತೆಯಾಗಿದೆ ಎಂದು ಸುದ್ದಿ ಮನೆಯವರಿಗೆ ಬಂದಿದ್ದೇ ತಡ. ಎಲ್ಲರೂ ಕಣ್ಣೀರಲ್ಲಿ ಕೈತೊಳೆದುಕೊಂಡರು. ಆಕೆಯ ಅರೆಬರೆ ಉಡುಪು, ನಗ್ನಾವಸ್ಥೆಯ ಸ್ಥಿಯಲ್ಲಿನ ಶವವನನು ಕಂಡು ಊರಿಗೆ ಊರೇ ಕಣ್ಣೀರಿಟ್ಟಿತು.
ಮರುದಿನ ಅ.೧೦ಕ್ಕೆ ಮನೆಗೆ ಶವ ಬಂದಾಗ ತಾಯಿ ಕುಸುಮಾವತಿ ಭೂಮಿಗೆ ಇಳಿದೇ ಹೋಗಿದ್ದರು.
ಆದರೆ ಮರುದಿನ ಶಾಂತಿವನದ ಪಕ್ಕದಲ್ಲೇ ಅನುಮಾನಾಸ್ಪದವಾಗಿ ತಿರುಗಾಡಿಕೊಂಡಿದ್ದ ವ್ಯಕ್ತಿಯೋರ್ವನ ಪತ್ತೆಯಾಯ್ತು. ಆತನ ಹೆಸರು ಸಂತೋಷ್. ಆತನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಆದರೆ ಆತ ಅರೆಹುಚ್ಚನಾಗಿದ್ದ. ಆತನೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಕಥೆ ಕಟ್ಟಲಾರಂಭಿಸಿದರು. ನಿಜವಾದ ಆರೋಪಿ ಯಾರೆಂದು ಇದುವರೆಗೂ ಪತ್ತೆಯಾಗಲಿಲ್ಲ. ಆಕೆಯ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದ್ದು ಸಿಬಿಐ ತನಿಖೆಗೆ ಒತ್ತಾಯವೊಂದು ಕೇಳಿಬಂದಿದೆ.