Thursday, May 25, 2017

ಫಲ್ಗುಣಿ ಜಲಾಶಯ ನೀರು ಮತ್ತೆ ಕಪ್ಪು ಬಣ್ಣಕ್ಕೆ

ಬಜ್ಪೆ: ಫಲ್ಗುಣಿ ಜಲಾಶಯಕ್ಕೆ ಮತ್ತೆ ಕಂಪೆನಿಗಳು ರಾಸಾಯನಿಕ ಬಿಟ್ಟಿರುವುದರಿಂದ ಅಣೆಕಟ್ಟಿನ ನೀರು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿದ್ದು, ಜಲಚರಗಳು ಮತ್ತೆ ಸಾವಿಗೀಡಾಗುತ್ತಿದ್ದು, ಮತ್ತೆ ಕೆಟ್ಟ ವಾಸನೆ ಬೀರಲಾರಂಭಿಸಿದೆ. ಬಗ್ಗೆ ಸ್ಥಳೀಯರು ಪತ್ರಕರ್ತರಿಗೆ ಮಾಹಿತಿ ನೀಡಿದ್ದು, ಬುಧವಾರ ಬೆಳಗ್ಗಿನಿಂದ ನೀರು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿರುವುದಾಗಿ ತಿಳಿಸಿದ್ದಾರೆ. ಬಾರಿ ನೆಲಮಟ್ಟದ ಮಣ್ಣೂ ಕೂಡಾ ಕಪ್ಪು ಬಣ್ಣಕ್ಕೆ ತಿರುಗಿರುವುದರಿಂದ ಆತಂಕಕ್ಕೆ ಕಾರಣವಾಗಿದೆ.
ಮಳವೂರು ಜಲಾಶಯದ ನೀರು ಕಪ್ಪು ಬಣ್ಣಕ್ಕೆ ತಿರುಗಿರುವ ವಿಚಾರದ ಬಗ್ಗೆ ಬೆಳಕು ಚೆಲ್ಲುತ್ತಿದ್ದಂತೆ, ರಾಜಕಾರಣಿಗಳು, ಅಧಿಕಾರಿಗಳ ತಂಡೋಪತಂಡವೇ ಬಂದು ಪರಿಶೀಲನೆ ನಡೆಸಿ ರಾಸಾಯನಿಕ ಹೊರಸೂಸುವ ಕಂಪೆನಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಭರವಸೆ ಇನ್ನೂ ಹಸಿರಾಗಿರುವಂತೆ ಮತ್ತೆ ಕಂಪೆನಿಗಳು ತಮ್ಮ ರಾಸಾಯನಿಕವನ್ನು ನದಿಗೆ ವಿಸರ್ಜಿಸಿದ್ದರಿಂದ ನೀರು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿದೆ ಎನ್ನಲಾಗಿದೆ. ಬುಧವಾರ ಬೆಳಗ್ಗಿನಿಂದ ಮತ್ತೆ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ರಾಯಾಯನಿಕ ಮಿಶ್ರಣಗೊಂಡಿರುವುದು ಕೂಡಾ ಪತ್ತೆಯಾಗಿದೆ. ಅಲ್ಲದೆ ನೀರಲ್ಲಿರುವ ಜಲಚರಗಳೆಲ್ಲಾ ಮತ್ತೆ ಅಸುನೀಗಲು ಆರಂಭಗೊಂಡಿದ್ದು, ಇವುಗಳನ್ನೆಲ್ಲಾ ಬಕ ಪಕ್ಷಿಗಳು ಸ್ವಾಹಾ ಮಾಡಲಾರಂಭಿಸಿದೆ. ಕಂಪೆನಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಜಲಾಶಯಕ್ಕೆ ನೀರು ಮತ್ತೆ ಮತ್ತೆ ಸೇರಿದರೆ ನೀರು ಕುಡಿಯುವುದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.






ಕಳೆದ ಭಾನುವಾರ ಮಾಲಿನ್ಯ ನಿಯಂತ್ರಣ ಮಂಡಳಿಯವರು ರಾಸಾಯನಿಕ ಸಿಂಪಡಿಸಿದ್ದರು. ಶನಿವಾರ ಸಂಜೆ ವೇಳೆ ಆಗಮಿಸಿದ್ದ ಅಧಿಕಾರಿಗಳು ನೀರಿಗೆ 1000 ಲೀಟರ್ಗಳಷ್ಟು ಹೈಡ್ರೋಜನ್ ಪೆರಾಕ್ಸೈಡ್ ಸಿಂಪಡಿಸಿದ್ದರು. ಇದು ನೀರಲ್ಲಿ ಕರಗಿರುವ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಆಕ್ಸಿಡಿಸರ್ ಆಗಿ ಕೆಲಸ ಮಾಡಿ ಕಲುಷಿತ ನೀರನ್ನು ಶುದ್ಧಗೊಳಿಸುತ್ತದೆ ಎಂದಿದ್ದರು. ರಾಸಾಯನಿಕ ಸಿಂಪಡನೆಯ ಬಳಿಕ ಮಂಗಳವಾರದಂದು ಕಲುಷಿತ ನೀರು ಶುದ್ಧೀಕರಣಗೊಂಡು ಕಪ್ಪು ಬಣ್ಣದ ನೀರು ನೀಲಿ ಬಣ್ಣಕ್ಕೆ ತಿರುಗಿತ್ತು. ಆದರೆ ಬುಧವಾರ ಬೆಳಿಗ್ಗೆ ಗಮನಿಸಿದಾಗ ನೀರಲ್ಲಿ ಮತ್ತೆ ರಾಸಾಯನಿಕ ಮಿಶ್ರಣಗೊಂಡಿರುವುದು ಗಮನಕ್ಕೆ ಬಂದಿದ್ದಲ್ಲದೆ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಅಲ್ಲದೆ ಬಾರಿ ನೆಲಮಟ್ಟದಲ್ಲಿದ್ದ ಮಣ್ಣು ಕೂಡಾ ಕಪ್ಪು ಬಣ್ಣಕ್ಕೆ ತಿರುಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರಲ್ಲದೆ, ನೀರನ್ನು ಬಳಸುವ ಬಳಕೆದಾರರೂ ಆತಂಕಕ್ಕೆ ಒಳಗಾಗಿದ್ದಾರೆ.
ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಳವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಅರ್ಬಿ ಮಾತಾಡಿ, ನೀರು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿರುವುದು ಬೆಳಕಿಗೆ ಬಂದಿದೆ. ಬಗ್ಗೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾಹಿತಿ ನೀಡಲಾಗಿದೆ. ಅಲ್ಲದೆ ನೀರನ್ನು ಬಳಸುವ ಎಂಟು ಪಂಚಾಯತ್ನವರೆಲ್ಲಾ ಸೇರಿಕೊಂಡು ಸಭೆ ನಡೆಸಿದ್ದು, ರಾಸಾಯನಿಕ ಹೊರಸೂಸುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಂಪೆನಿಗಳು ನೀರಿಗೆ ರಾಸಾಯನಿಕ ವಿಸರ್ಜಿಸುವ ಹಳೆ ಚಾಳಿಯನ್ನು ಮುಂದುವರಿಸಿದ್ದುಇದು ಮತ್ತೆ ಮತ್ತೆ ಮುಂದುವರಿಯುತ್ತಲೇ ಹೋದರೆ ನೀರು ಕುಡಿಯಲು ಅಯೋಗ್ಯವಾಗಬಹುದು ಎನ್ನುವ ಆತಂಕಕ್ಕೆ ಕಾರಣವಾಗಿದೆ.